newsfirstkannada.com

ತ್ರಿವರ್ಣ ಧ್ವಜ ಹಿಡಿದು ಉಸಿರು ಚೆಲ್ಲಿದ ಯೋಧ; ದೇಶಭಕ್ತಿ ಗೀತೆಗೆ ಡ್ಯಾನ್ಸ್​ ಮಾಡುವಾಗ ಸಾವು

Share :

Published May 31, 2024 at 8:17pm

Update May 31, 2024 at 8:19pm

  ಯೋಗ ಕೇಂದ್ರದಲ್ಲಿ ಡ್ಯಾನ್ಸ್​ ಮಾಡುವಾಗ ನಿವೃತ್ತ ಯೋಧ ಸಾವು

  ನಿವೃತ್ತ ಯೋಧ 2008 ರಲ್ಲಿ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ರು

  ಮಾ ತುಜೇ ಸಲಾಮ್ ಹಾಡಿಗೆ ನೃತ್ಯ ಮಾಡುತ್ತಾ ನಿವೃತ್ತ ಯೋಧ ಸಾವು

ಭೋಪಾಲ್​: ಆಘಾತಕಾರಿ ಘಟನೆಯೊಂದು ನಡೆದಿದ್ದು ನಿವೃತ್ತ ಯೋಧರೊಬ್ಬರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಗೀತೆಗೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನ ಫುತಿ ಕೋಠಿಯಲ್ಲಿನ ಯೋಗ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ನಿವೃತ್ತ ಯೋಧ ಬಲ್ವಿಂದರ್ ಸಿಂಗ್ ಛಾಬ್ರಾ ಅವರು ಸಡನ್ ಹಾರ್ಟ್​ ಅಟ್ಯಾಕ್​​ನಿಂದ ಸಾವನ್ನಪ್ಪಿದವರು. ಇವರು ಇಂದೋರ್‌ನ ಫುತಿ ಕೋಠಿಯ ಯೋಗ ಕೇಂದ್ರಕ್ಕೆ ಆಗಮಿಸಿ ಮಾ ತುಜೇ ಸಲಾಮ್ ಹಾಡಿಗೆ ವೇದಿಕೆ ಮೇಲೆ ತ್ರಿವರ್ಣ ಧ್ವಜ ಹಿಡಿದು ನೃತ್ಯ ಮಾಡುತ್ತಿದ್ದರು. ಹೀಗೆ ಕೆಲ ಸಮಯ ಡ್ಯಾನ್ಸ್ ಮಾಡಿ ಅಲ್ಲಿದ್ದವರಲ್ಲಿ ದೇಶಭಕ್ತಿ ಮೂಡಿಸಿದ್ದಾರೆ. ಹಾಗೇ ಕುಣಿಯುತ್ತಿರುವಾಗ ನಿವೃತ್ತ ಯೋಧನಿಗೆ ಹಾರ್ಟ್​ ಅಟ್ಯಾಕ್​ ಕಾಣಿಸಿಕೊಂಡಿದೆ. ತಕ್ಷಣ ಅವರು ನೆಲಕ್ಕೆ ಬಿದ್ದಿದ್ದಾರೆ. ಆದರೆ ಇದೆಲ್ಲ​ ನೋಡುತ್ತಿದ್ದವರು ಡ್ಯಾನ್ಸ್​ನ ಒಂದು ಭಾಗ ಎಂದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮನೆಯೊಳಗೆ ಆಟವಾಡುತ್ತ ಕುಳಿತ್ತಿದ್ದಾಗ ಕುಸಿದು ಬಿದ್ದ ಮೇಲ್ಛಾವಣಿ.. ಉಸಿರು ಚೆಲ್ಲಿದ 2 ಮಕ್ಕಳು

ನಂತರ ಮೇಲಕ್ಕೆ ಏಳದೆ ಹಾಗೆ ಇದ್ದಿದ್ದಕ್ಕೆ ಅನುಮಾನ ಬಂದು ನೋಡಿದಾಗ ಇನ್ನು ಜೀವ ಇತ್ತು. ಹೀಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಬಲ್ವಿಂದರ್ ಸಿಂಗ್ ಅವರಿಗೆ 2008ರಲ್ಲಿ ಬೈಪಾಸ್ ಸರ್ಜರಿಯನ್ನು ಮಾಡಲಾಗಿತ್ತು. ಆವಾಗಲೇ ಅಂಗಾಂಗ ದಾನದ ಅರ್ಜಿಯನ್ನೂ ನೀಡಿದ್ದರಿಂದ ಅವರ ಕುಟುಂಬ ಸದಸ್ಯರು ಯೋಧನ ಅಂಗಾಂಗಗಳನ್ನ ದಾನ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತ್ರಿವರ್ಣ ಧ್ವಜ ಹಿಡಿದು ಉಸಿರು ಚೆಲ್ಲಿದ ಯೋಧ; ದೇಶಭಕ್ತಿ ಗೀತೆಗೆ ಡ್ಯಾನ್ಸ್​ ಮಾಡುವಾಗ ಸಾವು

https://newsfirstlive.com/wp-content/uploads/2024/05/MP_Soldier.jpg

Load More