/newsfirstlive-kannada/media/post_attachments/wp-content/uploads/2024/12/RETIRMENT-DEPRESSION.jpg)
ದಶಕಗಳ ಕಾಲ ಒಂದು ವೃತ್ತಿಯನ್ನು ಆತ್ಮದಂತೆ ಪ್ರೀತಿಸಿ. ಅದರೊಡನೆ ಅರ್ಧ ಆಯಸ್ಸು ಕಳೆದು, ಕೊನೆಗ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ಹಾಗೂ ಅದರಲ್ಲಿಯೇ ಬದುಕಿದ ವೃತ್ತಿಯನ್ನು ಬಿಟ್ಟು ಆಚೆ ನಡೆಯುವುದಿದೆಯಲ್ಲ ಅದು ಅಷ್ಟು ಸುಲಭದ ಮಾತಲ್ಲ. ಜಗತ್ತಿನ ಯಾವುದೇ ಕೆಲಸಗಾರನನ್ನೋ, ಆಟಗಾರನನ್ನೋ ಇಲ್ಲವೇ ರಾಜಕಾರಣಿಯನ್ನೋ ನೋಡಿ. ನಿವೃತ್ತಿಯೆಂಬುದು ಅವರಿಗೆ ಅರಗಲಾರದ ಆಘಾತವೇ ಸರಿ. ಮೊದಲೆಲ್ಲಾ ನಿವೃತ್ತಿ ಹೊಂದಿದವರೆಲ್ಲಾ ಮೊಮ್ಮಕ್ಕಳ ಜೊತೆಯೋ, ಹಳ್ಳಿಯಲ್ಲಿದ್ದ ಜಮೀನಿನಲ್ಲಿ ಉತ್ತಿ ಬಿತ್ತುವುದರ ಜೊತೆಯೋ, ಇಲ್ಲವೇ ಸಮಾನವಯಸ್ಕರರ ಜೊತೆ ಹರಟೆಯೊಂದಿಗೋ ತಮ್ಮ ಉಳಿದ ಜೀವನವನ್ನು ಕಳೆಯುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ನಿವೃತ್ತಿಯ ನಂತರ ಏನು ?ಎಂಬ ಚಿಂತೆಗಳು ಸುಳಿದು ಅವರನ್ನು ಖಿನ್ನತೆಯ ಕೂಪಕ್ಕೆ ಅಂದ್ರೆ ಡಿಪ್ರೆಷನ್​ಗೆ ತಳ್ಳುತ್ತಿವೆ. ಅದರಲ್ಲೂ ಇದು ಭಾರತದಲ್ಲಿ ಹೆಚ್ಚಾಗುತ್ತಿದೆ ಎಂಬ ಆಘಾತಕಾರಿ ಅಂಕಿ ಅಂಶಗಳು ಆಚೆ ಬರುತ್ತಿವೆ.
ನಿವೃತ್ತಿಯೆನ್ನುವುದೇ ನಾವು ಖಾಲಿತನವನ್ನು ಹೊತ್ತುಕೊಂಡು ಕಚೇರಿಯಿಂದ ಕಾಯಂ ಆಗಿ ಹೊರಬರುವುದು. ಇಲ್ಲಿ ಏಕಾಂಗಿತನದ, ನಮ್ಮನ್ನು ನಾವು ಇನ್ಮುಂದೆ ನಿಷ್ಪಪ್ರಯೋಜಕರು ಎನ್ನುವ ಭಾವಕ್ಕೆ ತಳ್ಳುವ ಸಮಯವದು ಎಂದು ದೆಹಲಿಯ ಸರ್ ಗುರುಗ್ರಾಮ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ ಆರತಿ ಆನಂದ ಅವರು ಹೇಳುತ್ತಾರೆ.
ನಿವೃತ್ತಿ ಎನ್ನುವುದು ನಮ್ಮನ್ನು ಸರಳವಾಗಿ ಖಿನ್ನತೆಗೆ ನೂಕುತ್ತದೆ. ಒಂದು ರೀತಿಯ ಹತಾಶೆ, ದುಃಖ ತುಂಬಿದ ಬದುಕನ್ನು ನಮ್ಮದಾಗಿಸುತ್ತದೆ. ಈ ಒಂದು ಸಮಯವನ್ನ ಹಾಗೂ ಸ್ಥಿತಿಯನ್ನ ನಿವೃತ್ತಿಯ ಖಿನ್ನತೆ ಅಥವಾ ರಿಟೈರ್ಮೆಂಟ್​ ಡಿಪ್ರೆಷನ್ ಎಂದು ಕರೆಯುತ್ತಾರೆ.
ಇದನ್ನೂ ಓದಿ: Mushrooms: ಅಣಬೆ ತಿಂದರೆ ಏನಾಗುತ್ತದೆ..? ಮಶ್ರೂಮ್​ನಲ್ಲಿ ಇದೆ ಆರೋಗ್ಯದ ಗುಟ್ಟು..!
ಇತ್ತೀಚಿನ ದಿನಗಳಲ್ಲಿ ಕೆಲವು ಗುಣಲಕ್ಷಣಗಳು ನಿವೃತ್ತಿಯಾದವರಲ್ಲಿ ಹೆಚ್ಚು ಕಂಡು ಬರುತ್ತಿವೆ. ಯಾವುದೇ ಪ್ರೇರಣೆಯೇ ಇಲ್ಲದೇ, ಸದಾ ಖಾಲಿತನ ತುಂಬಿಕೊಂಡು, ಯಾವುದೋ ಆತಂಕದಲ್ಲಿ ಯಾವುದೋ ಮನಸ್ಥಿತಿಯಲ್ಲಿ ನಿತ್ಯ ನೆರಳುತ್ತಿದ್ದಾರೆ ನಿವೃತ್ತಿಗೊಂಡಿರುವ ಪೋಷಕರು
ಇದನ್ನೂ ಓದಿ: ಚಳಿಗಾಲ ಮತ್ತು ಹೃದಯದ ಆರೋಗ್ಯ; ಋತುಮಾನದ ಸವಾಲುಗಳನ್ನು ಎದುರಿಸುವುದು ಹೇಗೆ?
ಅದಕ್ಕೆ ಕಾರಣ ತಮ್ಮ ನಿತ್ಯದ ಬದುಕು ಬದಲಾಗಿರುವುದು, ಸಾಮಾಜಿಕ ಬೆರೆಯುವಿಕೆ ಕಡಿಮೆಯಾಗಿರುವುದು. ವೃತ್ತಿ ಅಷ್ಟು ದಿನ ನಮಗೆ ತಂದುಕೊಟ್ಟಿದ್ದ ಗೌರವ ಏಕಾಏಕಿಯಾಗಿ ಮರೆಯಾಗುವುದು ಈ ಎಲ್ಲಾ ಒಟ್ಟು ಭಾವಗಳು ನಿವೃತ್ತಿಗೊಂಡವರನ್ನು ಏಕಾಂಗಿಗೊಳಿಸುತ್ತಿದೆ ಎಂದು ಬಿಜಿಎಸ್​ ಆಸ್ಪತ್ರೆಯ ಸೈಕಾಲಾಜಿಸ್ಟ್ ಸುಮಲತಾ ವಾಸುದೇವ್ ಅವರು ಹೇಳುತ್ತಾರೆ.
ಈ ಖಿನ್ನತೆ ಹಲವು ರೀತಿಯ ಸಮಸ್ಯೆಗಳನ್ನು ಬಳಲುತ್ತಿರುವವರಿಗೆ ತಂದೊಡ್ಡುತ್ತವೆ. ಅತಿಯಾದ ದೈಹಿಕ ಆರೋಗ್ಯ ಸಮಸ್ಯೆಗಳು ಅಂದ್ರೆ ಸಿಕ್ಕಾಪಟ್ಟೆ ಒತ್ತಡದಿಂದ ಸಕ್ಕರೆ ಕಾಯಿಲೆ ಬರುವುದು. ನೆನಪಿನ ಶಕ್ತಿ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿಯು ಹೊರಟು ಹೋಗುವುದು. ಸಮಾಜದೊಳಗೆ ಬೆರೆಯದೇ ಏಕಾಂಗಿಯಾಗಿರುವುದು. ತಮಗೆ ತಾವೇ ಹಾನಿಯನ್ನು ಮಾಡಿಕೊಳ್ಳುವ ಮಟ್ಟಕ್ಕೆ ಖಿನ್ನತೆ ಆವರಿಸುವುದು. ಇವೆಲ್ಲ ಲಕ್ಷಣಗಳು ಸದ್ಯ ನಿವೃತ್ತಿಗೊಂಡಿರುವ ಹಿರಿಯ ಜೀವಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗಾದರೆ ಇದನ್ನು ತಡೆಯುವುದು ಹೇಗೆ. ? ಅದಕ್ಕೂ ಕೂಡ ಕೆಲವು ಮಾರ್ಗಗಳನ್ನು ಮನೋರೋಗ ತಜ್ಞರು ಹೇಳುತ್ತಾರೆ.
ಸರಿಯಾದ ಯೋಜನೆ: ನಿವೃತ್ತಿಗೆ ಇನ್ನೇನು ಕೆಲವೇ ಕೆಲವು ವರ್ಷಗಳು ಇವೆ ಎನ್ನುವ ಸಮಯದಲ್ಲಿ ನಾವು ಒಂದು ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ನಿವೃತ್ತಿಯ ನಂತರ ಹೇಗಿರಬೇಕು. ನಮ್ಮ ಹಣಕಾಸಿ ವ್ಯವಸ್ಥೆ ಮತ್ತು ಭಾವನಾತ್ಮಕ ಸಂಬಂಧಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸಬೇಕು.
ದಿನಿತ್ಯದ ಕ್ರಿಯೆಯನ್ನು ಬೇರೆ ರೀತಿಯಲ್ಲಿ ತೊಡಗಿಸಿ; ಅಷ್ಟು ವರ್ಷ ಒಂದೇ ಜಾಗದಲ್ಲಿ ಇದ್ದು ಏಕಾಏಕಿ ಮನೆಯಲ್ಲಿ ಏಕಾಂಗಿಯಾಗಿ ಕುಳಿತುಕೊಳ್ಳುವುದು ಅಂದ್ರೆ ಸಮಸ್ಯೆ. ಹೀಗಾಗಿ ಕೆಲವು ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಸ್ವಯಂ ಸೇವಕನ ರೀತಿಯ ಕಾರ್ಯಗಳು, ಪಾರ್ಟ್​ ಟೈಮ್ ಜಾಬ್​ಗಳು ಇವು ನಿಮ್ಮನ್ನು ಖಿನ್ನತೆಯಿಂದ ದೂರ ಇಡಬಲ್ಲವು.
ಸಾಮಾಜಿಕ ಸಂಪರ್ಕ; ಮೊದಲು ವೃತ್ತಿಯಿಂದ ಜನರ ಜೊತೆಗಿನ ಸಂಪರ್ಕದಿಂದ ದೂರುವಿರುವುದು ಸಾಮಾನ್ಯ ಆದ್ರೆ ನಿವೃತ್ತಿಯ ಬಳಿಕ ಜನರೊಂದಿಗೆ ಹೆಚ್ಚು ಹೆಚ್ಚು ಬೆರೆಯುವುದನ್ನ ರೂಢಿಸಿಕೊಳ್ಳಬೇಕು. ಇದರಿಂದ ನಿಮ್ಮನ್ನು ಹುರಿದು ತಿನ್ನುವ ಒಂಟಿತನದಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು
ದೈಹಿಕ ಚಟುವಟಿಕೆಗಳು ಇರಲಿ: ನಿತ್ಯ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ನಿಮ್ಮ ವಯಸ್ಸಿಗೆ ಅನುಕೂಲ ಅನಿಸುವ ವ್ಯಾಯಾಮಗಳನ್ನು ಎಕ್ಸ್​ಪರ್ಟ್​ ಬಳಿ ಕೇಳಿ ತಿಳಿಯಿರಿ ಇದರಿಂದ ನಿಮ್ಮ ಒಟ್ಟಾರೆ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.
ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು: ಹೊಸ ಹೊಸ ಅಭ್ಯಾಸಗಳನ್ನು ಕಲಿಯಿರಿ. ಹೊಸ ಕೆಲಸಗಳನ್ನು ಮಾಡಿ. ನಿಮ್ಮನ್ನು ನೀವು ಸಾಧ್ಯವಾದಷ್ಟು ಬ್ಯುಸಿಯಾಗಿಟ್ಟುಕೊಳ್ಳಲು ಪ್ರಯತ್ನಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us