/newsfirstlive-kannada/media/post_attachments/wp-content/uploads/2025/04/Tilak-verma-pandya.jpg)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲಲು ಮುಂಬೈ ಇಂಡಿಯನ್ಸ್ಗೆ 7 ಬಾಲ್ಗೆ 24 ರನ್ಗಳ ಅಗತ್ಯವಿದ್ದಾಗ ತಿಲಕ್ ವರ್ಮಾ ರಿಟೈರಿಂಗ್ ಔಟ್ ಆದರು. ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಅವರನ್ನು ವಾಪಸ್ ಪೆವಿಲಿಯನ್ಗೆ ಕರೆಸಿಕೊಂಡಿತು. ಬೆನ್ನಲ್ಲೇ, ಮುಂಬೈ 12 ರನ್ಗಳ ಅಂತರದಿಂದ ಸೋಲನ್ನು ಕಂಡಿತು. ಇದೀಗ ತಿಲಕ್ ವರ್ಮಾರನ್ನು ಮಧ್ಯದಲ್ಲೇ ಕರೆಸಿಕೊಂಡಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಉತ್ತರ ನೀಡಿದ್ದಾರೆ. ತಿಲಕ್ ಅರ್ಮಾ ರಿಟೈರ್ಡ್ ಔಟ್ ಬಗ್ಗೆ ಮಾತನಾಡಿರುವ ಅವರು.. ಅದು ಸ್ಪಷ್ಟವಾಗಿದೆ. ನಮಗೆ ಕೆಲವು ಹಿಟ್ಗಳ ಅಗತ್ಯ ಇತ್ತು. ಕ್ರಿಕೆಟ್ನಲ್ಲಿ ಕೆಲವು ದಿನಗಳು ಬರುತ್ತೆ. ನೀವು ಪ್ರಯತ್ನಿಸಿದಾಗ ಅದು ಬರುವುದಿಲ್ಲ.
ನೀವು ಒಳ್ಳೆಯ ಕ್ರಿಕೆಟ್ ಆಡಿ. ನಾನು ಅದನ್ನು ಸರಳವಾಗಿಡಲು ಇಷ್ಟಪಡುತ್ತೇನೆ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ. ಸ್ಮಾರ್ಟ್ ಆಗಿ ಬೌಲಿಂಗ್ ಮಾಡಿ. ಬ್ಯಾಟಿಂಗ್‌ನಲ್ಲಿ ಅವಕಾಶಗಳನ್ನು ಪಡೆದುಕೊಳ್ಳಿ. ಕೆಲವು ಅಗ್ರೆಸನ್ ಜೊತೆ ಸಿಂಪಲ್ಲಾಗಿ ಕ್ರಿಕೆಟ್ ಆಡಿ. ದೀರ್ಘ ಪಂದ್ಯಾವಳಿಗಳ ಮೂಲಕ ಕೆಲವು ಗೆಲುವುಗಳನ್ನು ಪಡೆಯುತ್ತೀರಿ. ನೀವೂ ಲಯಕ್ಕೆ ಬರುತ್ತೀರಿ ಎಂದಿದ್ದಾರೆ.
ಇದನ್ನೂ ಓದಿ: Retired out! ತಿಲಕ್ ವರ್ಮಾಗೆ ದೊಡ್ಡ ಅವಮಾನ.. ಕ್ರೀಸ್ನಿಂದ ವಾಪಸ್ ಕರೆಸಿದ ಮುಂಬೈ ಇಂಡಿಯನ್ಸ್..!
ನಿನ್ನೆಯ ಆಟ ಹೇಗಿತ್ತು..?
ಸ್ಫೋಟಕ ಬ್ಯಾಟಿಂಗ್ಗೆ ಹೆಸರು ಆಗಿರುವ ತಿಲಕ್ ವರ್ಮಾ, ನಿನ್ನೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರು. ಆದರೆ ಕ್ರೀಸ್ನಲ್ಲಿ ರನ್ ಗಳಿಸಲು ಅವರು ಪರದಾಡಿದರು. 23 ಎಸೆತದಲ್ಲಿ ಕೇವಲ 2 ಬೌಂಡರಿ ಬಾರಿಸಿ 25 ರನ್ಗಳಿಸಿ ಅಚ್ಚರಿ ಮೂಡಿಸಿದರು. ಕೊನೆ ಕ್ಷಣದಲ್ಲಿ ಅಂದರೆ ಮುಂಬೈ ಇಂಡಿಯನ್ಸ್ಗೆ ಗೆಲ್ಲಲು 7 ಬಾಲ್ನಲ್ಲಿ 24 ರನ್ಗಳ ಅಗತ್ಯ ಇತ್ತು. ಆಗ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್, ತಿಲಕ್ ವರ್ಮಾ ರಿಟೈರ್ಡ್ ಔಟ್ ಎಂದು ಘೋಷಣೆ ಮಾಡಿತು. ಈ ವಿಚಾರ ದೊಡ್ಡ ಚರ್ಚೆ ಆಗ್ತಿದೆ.
ಇದನ್ನೂ ಓದಿ:ನನ್ನ ಬಳಿ ಹೆಚ್ಚು ಆಯ್ಕೆಗಳಿಲ್ಲ, ಸೋಲಿಗೆ ಹೊಣೆ ಯಾರು ಅಂತಾ ತಿಳಿಸಿದ ಹಾರ್ದಿಕ್ ಪಾಂಡ್ಯ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್