ಮತ್ತೆ ವಿಘ್ನ.. ಕೊನೆ ಸೆಕೆಂಡ್​ನಲ್ಲಿ ಕೈಕೊಟ್ಟ ಮಷಿನ್; ಸುನಿತಾ ವಿಲಿಯಮ್ಸ್​​ ಭೂಮಿಗೆ ಬರೋದು ಮತ್ತೆ ವಿಳಂಬ!

author-image
Ganesh
Updated On
ಸುನಿತಾ ಒಬ್ಬರೇ ಅಲ್ಲ; ವರ್ಷಗಟ್ಟಲೇ ಬಾಹ್ಯಾಕಾಶದಲ್ಲೇ ಉಳಿದು ದಾಖಲೆ ಬರೆದ ಗಗನಯಾನಿಗಳು ಇವರು..!
Advertisment
  • ಇಂದು ಉಡಾವಣೆ ಆಗಬೇಕಿದ್ದ ಫಾಲ್ಕನ್ ರಾಕೆಟ್
  • ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಎಂದ NASA
  • ಸುನಿತಾ ವಿಲಿಯಮ್ಸ್ ಭೂಮಿಗೆ ಬರೋದು ಯಾವಾಗ?

ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ( Butch Wilmore and Sunita Williams) ಜೋಡಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದೆ. ಇದೀಗ ಅವರನ್ನು ಕರೆತರುವ ಕಾರ್ಯಾಚರಣೆಯನ್ನು ಮತ್ತೆ ಮುಂದೂಡಲಾಗಿದೆ ಎಂದು NASA ತಿಳಿಸಿದೆ.

ಭೂಮಿಗೆ ಅವರನ್ನು ಸುರಕ್ಷಿತವಾಗಿ ಕರೆ ತರಲು ಮಾರ್ಚ್​​ 13 ರಿಂದ SpaceX ಕಾರ್ಯಾಚರಣೆ ಮಾಡಲಿದೆ ಎಂದು ನಾಸಾ ಘೋಷಣೆ ಮಾಡಿತ್ತು. ಈಗ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ SpaceX ಉಡಾವಣೆ ರದ್ದುಗೊಳಿಸಲಾಗಿದೆ ಎಂದು ನಾಸಾ ಹೇಳಿದೆ. ಇನ್ನೇನು ಉಡಾವಣೆ ಮಾಡಲು ಕೆಲವೇ ಗಂಟೆಗಳು ಬಾಕಿ ಇರುವಾಗ ನಾಸಾ ಬೇಸರದ ಸುದ್ದಿ ನೀಡಿದೆ.

ಇದನ್ನೂ ಓದಿ: ಗುಡ್​ನ್ಯೂಸ್​.. ಸುನಿತಾ ವಿಲಿಯಮ್ಸ್ ಭೂಮಿಗೆ ಬರುವ ಬಗ್ಗೆ ಅಪ್​ಡೇಟ್ಸ್​..!

publive-image

ಮಷಿನ್​ನ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಅಂತಾ NASA ಉಡಾವಣಾ ನಿರೂಪಕ ಡರೋಲ್ ನೆಲ್ ತಿಳಿಸಿದ್ದಾರೆ. ಆದರೆ ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. NASA-SpaceX Crew-10 ಕಾರ್ಯಾಚರಣೆ ಹೊತ್ತ ಫಾಲ್ಕನ್ 9 ರಾಕೆಟ್ (Falcon 9 rocket) ಬುಧವಾರ ಸಂಜೆ 7:48 ಕ್ಕೆ (2348 GMT) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಇನ್ನು ಮುಂದಿನ ಕಾರ್ಯಾಚರಣೆ ಬಗ್ಗೆ ನಾಸಾ ಮಾಹಿತಿ ತಿಳಿಸಿಲ್ಲ.

8 ದಿನಕ್ಕೆಂದು ಹೋಗಿ 9 ತಿಂಗಳ ವಾಸ

ಕೇವಲ 8 ದಿನಗಳ ಮಿಷನ್ ಭಾಗವಾಗಿ ಜೂನ್ 5 ರಂದು ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದರು. ಆದರೆ ತಾಂತ್ರಿಕ ದೋಷದಿಂದ ಅವರು ಬರೋಬ್ಬರಿ 9 ತಿಂಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ರೋಚಕ ಚೇಸಿಂಗ್​ನಲ್ಲಿ ಮಿಸ್​​ ಆಗಿದ್ದ ಪಾತಕಿ ಲಾಕ್.. ಇಸಾಕ್​ಗೆ ಬುಲೆಟ್​ ರುಚಿ ತೋರಿಸಿದ ಪೊಲೀಸರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment