/newsfirstlive-kannada/media/post_attachments/wp-content/uploads/2024/12/PHONE-1.jpg)
ಬಿಡುವಿಲ್ಲದ ಕೆಲಸದ ನಡುವೆ ಸ್ಮಾರ್ಟ್‌ಫೋನ್ ಜೊತೆಗೆ ಚಾರ್ಜರ್ ಒಯ್ಯುವುದನ್ನು ಮರೆತುಬಿಡ್ತೇವೆ. ಅದೆಷ್ಟೋ ಸಲ ಚಾರ್ಜ್​​ ಮಾಡದೇ ಫೋನ್ ಆಫೀಸ್​​ಗೆ ತರುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ ಅಂತಾ ತಲೆ ಕೆಡಿಸಿಕೊಳ್ತೇವೆ.
ಇನ್ಮೇಲೆ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಯಾವುದೇ ಚಾರ್ಜರ್ ಅಥವಾ ಪವರ್ ಬ್ಯಾಂಕ್ ಇಲ್ಲದೆಯೂ ನಿಮ್ಮ ಫೋನ್ ಚಾರ್ಜ್ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಫೋನ್ ಹೊರತುಪಡಿಸಿ ಇನ್ನೊಂದು ಫೋನ್ ಬೇಕು. ಆ ಫೋನ್​ನಿಂದ ನೀವು ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಅದುವೇ ವೈರ್​ಲೆಸ್​ ಪವರ್​ ಶೇರಿಂಗ್.
ಇದನ್ನೂ ಓದಿ:ಕಣ್ಣುಗಳು ಮಂದವಾಗಿವೆ ಅಂತ ಆತಂಕಬೇಡ.. ಬಂದಿದೆ ನಾರಾಯಣ ನೇತ್ರಾಲಯದ ‘ಔರಾ ವಿಷನ್’
ಫೋನ್‌ನಿಂದ ಫೋನ್ ಚಾರ್ಜ್ ಮಾಡೋದೇಗೆ..?
ಆಂಡ್ರಾಯ್ಡ್ ಫೋನ್ ಆಗಿದ್ದರೆ ಸುಲಭವಾಗಿ ಚಾರ್ಜ್ ಮಾಡಬಹುದು. ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಇದೆ. ನಿಮ್ಮ ಫೋನ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್​ ಇದ್ದರೆ, ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ಸ್ಕ್ರಾಲ್ ಮಾಡಿದಾಗ ಬ್ಯಾಟರಿ ಆಯ್ಕೆ ಕಾಣಿಸುತ್ತದೆ. ಬ್ಯಾಟರಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ಚಾರ್ಜಿಂಗ್ ಸೆಟ್ಟಿಂಗ್ಸ್ ಆಯ್ಕೆ ಕ್ಲಿಕ್ ಮಾಡಿ. ಆಗ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ನಿಮಗೆ ತೋರಿಸುತ್ತದೆ. ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯನ್ನು ಸಕ್ರಿಯಗೊಳಿಸಿ. ನಂತರ ಫೋನ್ ಅನ್ನು ಒಂದು ಮೇಜಿನ ಮೇಲೆ ಉಲ್ಟಾ ಇಡಿ. ಅದರ ಮೇಲೆ ಅಡ್ಡವಾಗಿ ಚಾರ್ಜ್​ ಮಾಡಬೇಕಾದ ಫೋನ್ ಇರಿಸಿ.
ಆಗ ಫೋನ್ ಚಾರ್ಜ್ ಆಗುತ್ತದೆ. ಈ ಪ್ರಕ್ರಿಯೆಯನ್ನು ಪವರ್‌ಶೇರ್ ಫೀಚರ್​ ಎಂದೂ ಕರೆಯುತ್ತಾರೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಫೀಚರ್ ಇದೆ. ತುರ್ತು ಸಂದರ್ಭಗಳಲ್ಲಿ ಈ ವಿಧಾನ ಬಳಸಬಹುದಾಗಿದೆ. ನಿಯಮಿತವಾಗಿ ನಿಮ್ಮ ಫೋನ್ ಮೀಸಲಾದ ಚಾರ್ಜರ್ ಮೂಲಕ ಚಾರ್ಜ್ ಮಾಡಬೇಕು. ಇಲ್ಲದಿದ್ದರೆ ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ:iPhone 17 Air ಬೆಲೆ ಈಗಲೇ ಲೀಕ್.. 2025ಕ್ಕೆ ಐಫೋನ್ 17ನಲ್ಲಿ 4 ಸಿರೀಸ್​​ಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us