newsfirstkannada.com

Gaddar: ಕ್ರಾಂತಿಕಾರಿ, ಖ್ಯಾತ ಜಾನಪದ ಗಾಯಕ ಗದ್ದರ್ ಇನ್ನಿಲ್ಲ

Share :

Published August 6, 2023 at 4:29pm

Update August 6, 2023 at 5:26pm

  ಕ್ರಾಂತಿಕಾರಿ ಗೀತೆಗಳಿಂದಲೇ ಪ್ರಸಿದ್ಧರಾದ ಜಾನಪದ ಗಾಯಕ

  ಮಾವೋವಾದಿ ಹೋರಾಟದಲ್ಲೂ ಸಕ್ರಿಯರಾಗಿದ್ದ ಗದ್ದರ್

  ಗದ್ದರ್ ಹಾಡುಗಳು ಮಾವೋವಾದಿ ಹೋರಾಟಕ್ಕೆ ಸ್ಫೂರ್ತಿ

ಮಾಜಿ ಮಾವೋವಾದಿ, ಕ್ರಾಂತಿಕಾರಿ ಗಾಯಕ ಗದ್ದರ್ ಇನ್ನಿಲ್ಲ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಜಾನಪದ ಗಾಯಕ ನಿಧನರಾಗಿದ್ದಾರೆ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಗದ್ದರ್ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗದ್ದರ್ ಅವರ ನಿಧನಕ್ಕೆ ಹಲವು ಕ್ರಾಂತಿಕಾರಕ ಸಾಹಿತಿಗಳು, ರಾಜಕೀಯ ಮುಖಂಡರು ಹಾಗೂ ನಾಗರಿಕರು ಸಂತಾಪ ಸೂಚಿಸಿದ್ದಾರೆ.

ಮಾವೋವಾದಿ ಸಿದ್ಧಾಂತವಾದಿಯಾಗಿದ್ದ ಗದ್ದರ್‌ ಹೋರಾಟದ ಬದುಕು ನಿಜಕ್ಕೂ ರೋಚಕವಾಗಿದೆ. 1960ರ ದಶಕದಲ್ಲಂತೂ ಗದ್ದರ್‌ ಅವರ ಬರಹ ಹಾಗೂ ಅವರ ಕ್ರಾಂತಿಕಾರಕ ಗಾಯನ ಮಾವೋವಾದಿ ಚಳುವಳಿಗೆ ಪ್ರೇರಣೆಯಾಗಿತ್ತು. ಗದ್ದರ್ ಅವರ ಜಾನಪದ ಗಾಯನಕ್ಕೆ ಯುವಕರು ಕ್ರಾಂತಿಕಾರಕ ಹೋರಾಟಕ್ಕೆ ಧುಮುಕಿದ ಉದಾಹರಣೆಗಳಿವೆ. ಗದ್ದರ್ ಕ್ರಾಂತಿಕಾರಕ ಹಾಡುಗಳನ್ನು ಈಗಲೂ ಕೇಳುವ ಆರಾಧಿಸುವ ಜನಸಮೂಹವೇ ಇದೆ. ಗದ್ದರ್ ಅವರು ಬಳಸುತ್ತಿದ್ದ ಕ್ರಾಂತಿಕಾರಕ ಶಬ್ಧಗಳು ಸ್ಪೂರ್ತಿದಾಯಕವಾಗಿದ್ದು ತೆಲಂಗಾಣ ಭಾಗದಲ್ಲಿ ಮನೆ ಮಾತಾಗಿದ್ದವು. ಗದ್ದರ್‌ ತೆಲಂಗಾಣದ ಜನ ಎದುರಿಸುತ್ತಿರುವ ಅನ್ಯಾಯಗಳನ್ನು ಪರಿಹರಿಸಲು ತಮ್ಮ ಬರಹ ಹಾಗೂ ಸಂಗೀತವನ್ನು ಬಳಸಿಕೊಂಡರು.

1949ರಲ್ಲಿ ಜನಿಸಿದ ಗದ್ದರ್ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ಬಾಲ್ಯದಿಂದಲೇ ಹೋರಾಟ ಸ್ವಭಾವ ಮೈಗೂಡಿಸಿಕೊಂಡ ಗುಮ್ಮಡಿ ವಿಠಲ್ ರಾವ್ ಗದ್ದರ್ ಆಗಿ ಬದಲಾದರು. ಗದ್ದರ್ 2010ರವರೆಗೆ ನಕ್ಸಲ್‌ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು. ನಂತರ ಅವರು ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರತ್ಯೇಕ ತೆಲಂಗಾಣ ರಾಜ್ಯದ ಆಂದೋಲನದಲ್ಲಿ ಗದ್ದರ್ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gaddar: ಕ್ರಾಂತಿಕಾರಿ, ಖ್ಯಾತ ಜಾನಪದ ಗಾಯಕ ಗದ್ದರ್ ಇನ್ನಿಲ್ಲ

https://newsfirstlive.com/wp-content/uploads/2023/08/Gaddar.jpg

Load More