/newsfirstlive-kannada/media/post_attachments/wp-content/uploads/2024/08/kolkata-rape-and-murder-2-1.jpg)
ಕೊಲ್ಕತ್ತಾದ ಆರ್​.ಜಿ.ಕರ್ ಆಸ್ಪತ್ರೆಯಲ್ಲಿ ಆಗಸ್ಟ್​ 9, 2024ರಂದು ಟ್ರೇನಿ ವೈದ್ಯಳ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂಜಯ್​ ರಾಯ್​ನನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಕೊಲ್ಕತ್ತಾದ ಸೇಷನ್​ ಕೋರ್ಟ್​ ಸಂಜಯ್ ರಾಯ್​ನನ್ನು ದೋಷಿ ಎಂದು ಘೋಷಿಸಿದೆ. ಒಟ್ಟು 50 ಸಾಕ್ಷಿಗಳನ್ನು ಪರಿಶೀಲಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸೇಷನ್ ನ್ಯಾಯಾಧೀಶ ಅನಿರ್ಬಾನ್​ ದಾಸ್ ಈ ಒಂದು ತೀರ್ಪನ್ನು ಪ್ರಕಟಿಸಿದ್ದು ಶಿಕ್ಷಯ ಪ್ರಮಾಣವನ್ನು ಸೋಮವಾರ ಕಾಯ್ದಿರಿಸಿದೆ.
ಸಂಜಯ್ ರಾಯ್ ಎಂಬ ಎನ್​ಜಿಒನ ಸ್ವಯಂ ಸೇವಕ ಕೊಲ್ಕತ್ತಾದ ಆರ್​ಜಿ ಕರ್ ಆಸ್ಪತ್ರೆಯ ಸ್ನಾತಕೋತ್ತರ ತರಬೇತಿ ಪಡೆಯುತ್ತಿದ್ದ ವೈದ್ಯಯ ಮೇಲೆ ಅತ್ಯಂತ ಕ್ರೂರವಾಗಿ ಅನಾಚಾರ ನಡೆಸಿದ್ದ. ಆತನನ್ನು ಕೊಲ್ಕತ್ತಾ ಪೊಲೀಸರು ಆಗಸ್ಟ್​ 10 ರಂದು ಬಂಧಿಸಿದ್ದರು. ಈ ಒಂದು ಕ್ರೌರ್ಯ ಆರ್​ ಜಿ ಕರ್ ಮೆಡಿಕಲ್ ಕಾಲೇಜ್​ನ ಸೆಮಿನಾರ್ ರೂಮ್​ನಲ್ಲಿ ನಡೆದಿತ್ತು.
ಕೊಲ್ಕತ್ತಾ ಹೈಕೋರ್ಟ್ ಈ ಒಂದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಸಿಬಿಐ ಆರ್​.ಜಿ.ಕರ್ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್​ ಸಂದೀಪ್ ಘೋಷ್​ರನ್ನು ಕೂಡ ಈ ಕೇಸ್​ನಲ್ಲಿ ಬಂಧಿಸಿತ್ತು. ಈ ಒಂದು ಪ್ರಕರಣದಲ್ಲಿ ಹಣಕಾಸಿನ ಅವ್ಯವಹಾರ ಆಗಿದೆ ಎಂದು ಇಡಿ ಕೂಡ ಎಂಟ್ರಿ ಕೊಟ್ಟಿತ್ತು.
ಇದನ್ನೂ ಓದಿ:ವಿಶ್ವದಲ್ಲೇ ಟಾಪ್ 10 ಅತ್ಯಂತ ಅಸಂತುಷ್ಟ ರಾಷ್ಟ್ರಗಳು ಯಾವುವು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಈ ಎಲ್ಲಾ ಬೆಳವಣಿಗಗಳ ಮೇಲೆ ಸದ್ಯ ಕೊಲ್ಕತ್ತಾದ ಸಿಲ್ಡಾ ಸೇಷನ್ ನ್ಯಾಯಾಲಯ ಸಂಜಯ್ ರಾಯ್​ರನ್ನು ದೋಷಿ ಎಂದು ತೀರ್ಪು ನೀಡಿದ್ದು ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಿದೆ. ಇನ್ನು ಪ್ರಕರಣದ ತೀರ್ಪು ಬರುತ್ತಿದ್ದಂತೆ ಸಂತ್ರಸ್ತೆಯ ಕೋರ್ಟ್​ನಲ್ಲಿಯೆ ಕುಸಿದು ಬಿದ್ದು ನ್ಯಾಯಾಧೀಶರಿಗೆ ಧನ್ಯವಾದ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us