/newsfirstlive-kannada/media/post_attachments/wp-content/uploads/2024/08/kolkata-rape-and-murder-2-1.jpg)
ಕೊಲ್ಕತ್ತಾ: ಆರ್ಜಿ ಕಾರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಹತ್ಯೆ ಪ್ರಕರಣದ ದಿನಕ್ಕೊಂದು ಹೊಸ ವಿಷಯಗಳನ್ನು ಬಯಲಿಗೆಳೆಯುತ್ತಿದೆ. ಹಂತಕ ಸಂಜಯ್ ರಾಯ್ನ ಒಂದೊಂದು ಅಸಲಿ ಮುಖಗಳು ಆಚೆ ಬರುತ್ತಿವೆ. ಅವನು ಅಪ್ಪಟ ಹೆಣ್ಣುಬಾಕ ಅನ್ನೋ ವಿಚಾರ ವಿಚಾರಣೆಯಿಂದ ತಿಳಿದು ಬರುತ್ತಿದೆ. ಆತನ ನೆರಮನೆಯವರು ಅವನ ಬಗ್ಗೆ ಬೆಚ್ಚಿ ಬೀಳಿಸುವಂತಹ ವಿಷಯಗಳನ್ನು ಹೊರಗೆಡವಿದ್ದಾರೆ.
ಇದನ್ನೂ ಓದಿ: ನೀಲಿ ಚಿತ್ರಗಳನ್ನು ನೋಡೋ ಚಟ.. ವೈದ್ಯ ರೇಪ್ & ಮರ್ಡರ್ ಭಯಾನಕ ಸತ್ಯ ಬಹಿರಂಗ; ಆಗಿದ್ದೇನು?
ಕೊಲ್ಕೊತ್ತಾದ ಆರ್ಜಿ ಕಾರ್ ಆಸ್ಪತ್ರೆಯ ವೈದ್ಯೆಯನ್ನ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಮುಖ ಆರೋಪಿ ಸಂಜಯ್ ರಾಯ್, ತನ್ನ ದಾಂಪತ್ಯದ ವಿಚಾರದಲ್ಲಿಯೂ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆಯಾಗಿದ್ದಾನೆ ಈ ಭೂಪ. ಇವನ ನೀಚ ವರ್ತನೆಯನ್ನು ತಾಳಲಾರದೆ ಮೂವರು ಹೆಂಡತಿಯರು ನಿನ್ನ ಸಹವಾಸವೇ ಬೇಡ ಎಂದು ಇವನನ್ನು ಬಿಟ್ಟು ಹೋಗಿದ್ದಾರೆ. ಮತ್ತೊಬ್ಬ ಹೆಂಡತಿ ಇತ್ತೀಚೆಗಷ್ಟೇ ಕ್ಯಾನ್ಸರ್ ಕಾಯಿಲೆಯಿಂದ ತೀರಿಕೊಂಡಿದ್ದಾಳೆ.
ಇದನ್ನೂ ಓದಿ:ಕೋಲ್ಕತ್ತಾ ಕೇಸ್‌ಗೆ ಹೊಸ ಟ್ವಿಸ್ಟ್.. ವೈದ್ಯೆ ರೇಪ್ & ಮರ್ಡರ್ ಬಳಿಕ ಕಿರಾತಕ ಮಾಡಿದ್ದೇನು? ಸ್ಫೋಟಕ ಮಾಹಿತಿ!
ಸಂಜಯ್ ರಾಯ್ನ ನೆರೆಮನೆಯವರು ಇವನ ಒಂದೊಂದು ಅವತಾರವನ್ನು ಬಹಿರಂಗಪಡಿಸಿದ್ದಾರೆ. ಇವನು ತಡರಾತ್ರಿ ಮನೆಗೆ ತೇಲಾಡಿಕೊಂಡು ಬಂದು ತನ್ನ ಪತ್ನಿಯರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದನಂತೆ. ನಿತ್ಯವೂ ಅಮಲೇರಿಸಿಕೊಂಡೇ ಮನೆಗೆ ಬರುತ್ತಿದ್ದನಂತೆ ಹೀಗಾಗಿಯೇ ಈ ಹಿಂದೆ ಇದ್ದ ಮೂವರು ಪತ್ನಿಯರು ಇವನ ಕಾಟದಿಂದ ಬೇಸತ್ತು ಮನೆ ತೊರೆದು ಹೋಗಿದ್ದಾರೆ. ಇತ್ತೀಚೆಗಷ್ಟೇ ಈತ ಮತ್ತೊಂದು ಮದುವೆಯಾಗಿದ್ದ. ನಾಲ್ಕನೆ ಪತ್ನಿ ಇತ್ತೀಚೆಗಷ್ಟೇ ಕ್ಯಾನ್ಸರ್ನಿಂದ ಮೃತಪಟ್ಟಿರುವ ಬಗ್ಗೆ ಸಂಜಯ್ ರಾಯ್ನ ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.
ಇದನ್ನೂ ಓದಿ:ನವಿಲು ಮಾಂಸದ ಅಡುಗೆ ಮಾಡಿ ವಿಡಿಯೋ ಅಪ್ಲೋಡ್.. ಯೂಟ್ಯೂಬರ್ ಅರೆಸ್ಟ್
ನನ್ನ ಮಗ ನಿರಪರಾಧಿ ಎಂದ ಸಂಜಯ್ ತಾಯಿ
ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು ಅನ್ನೋ ಗಾದೆಯಿದೆ. ಅದೇ ರೀತಿ ಸಂಜಯ್ ತಾಯಿ ಕೂಡ ನನ್ನ ಮಗ ನಿರಪರಾಧಿ ಎಂದು ಮಗನ ಪರ ವಕಾಲತ್ತು ಮಾಡಿದ್ದಾರೆ. ಸಂಜಯ್ ರಾಯ್ ಮೇಲೆ ಬಂದ ಯಾವ ಆರೋಪಗಳನ್ನು ಅವನ ತಾಯಿ ಒಪ್ಪುತ್ತಿಲ್ಲ. ನನ್ನ ಮಗ ನಿರಪರಾಧಿ, ಪೊಲೀಸರು ಅವನ ಮೇಲೆ ಒತ್ತಡ ಹೇರಿ ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ನನ್ನ ಮಗ ಮುದ್ಧ, ಅವನಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸಂಜಯ್ ರಾಯ್ನ ತಾಯಿ ಮಾಲಿತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ