24 ಗಂಟೆಯಲ್ಲಿ ಮೃತ್ಯು ಮಳೆ.. ವಯನಾಡ್​ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಸುರಿದ ಮಳೆ ಎಷ್ಟು ಗೊತ್ತಾ?

author-image
Gopal Kulkarni
Updated On
ಕಣ್ಣೀರಲ್ಲಿ ಮುಳುಗಿದ ಕೇರಳಿಗರು.. ಈಗ ಹೇಗಿದೆ ವಯನಾಡ್‌ ಪರಿಸ್ಥಿತಿ? ಟಾಪ್​ 10 ಫೋಟೋ​ ಇಲ್ಲಿವೆ
Advertisment
  • 24 ಗಂಟೆಗಳಲ್ಲಿ ವಯನಾಡಿನಲ್ಲಿ ನಿರಂತರವಾಗಿ ಸುರಿದಿದೆ ಮೃತ್ಯು ಮಳೆ
  • ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಮಹಾಮಳೆಯ ಪ್ರಮಾಣವೆಷ್ಟು?
  • ಮೃತರ ಸಂಖ್ಯೆಯಲ್ಲಿ ಏರಿಕೆ, ನೂರಾರು ಜನರ ರಕ್ಷಣೆ ಇನ್ನೂ ಬಾಕಿ!

ಕೇರಳದ ವಯನಾಡ್‌ನಲ್ಲಿ ಭಯಾನಕ ಭೂಕುಸಿತ ಉಂಟಾಗಿದೆ. ಈಗಾಗಲೇ ಸಾವಿನ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಸಂತ್ರಸ್ತರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ವಯನಾಡಿನಲ್ಲಿ ಈ ರೀತಿಯ ಭೀಕರ ಭೂಕುಸಿತಕ್ಕೆ ಕಾರಣ ಅಲ್ಲಿ ಸುರಿದ ಭಯಾನಕ ಮಳೆಯೆಂದೇ ಹೇಳಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಭೀಕರ ಮಳೆ ಸುರಿದ ಪರಿಣಾಮ ಬೊಜ್ಜು ಭೂಮಿ ಕತ್ತರಿಸಿಕೊಂಡು ಬಿದ್ದಿದೆ. ಹಾಗಿದ್ರೆ ಎಲ್ಲಿ ಎಷ್ಟು ಮಳೆಯಾಗಿದೆ ಎಂಬ ವಿವರ ನೋಡ್ತಾ ಹೋದ್ರೆ ಎಂಥವರೂ ಕೂಡ ಬೆಚ್ಚಿ ಬೀಳುವುದಂತೂ ಖಚಿತ.

ಇದನ್ನೂ ಓದಿ:Landslide: 5 ವರ್ಷದ ಹಿಂದೆ ಕೇರಳ ಪುತ್ತುಮಲೆ ದುರಂತ.. ಅದೇ ಜಾಗದಿಂದ 2 ಕಿಮೀ ದೂರದಲ್ಲಿ ಪರ್ವತ ಪ್ರವಾಹ..!

ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರ 24 ಗಂಟೆ ಸುರಿದ ಮಳೆ ಇಂದು ಮುಂಜಾನೆ ವೇಳೆಗೆ ಅಲ್ಪ ವಿರಾಮ ಘೋಷಿಸಿದೆ. ವಯನಾಡು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 30 ರಿಂದ 40 ಸೆಂಟಿ ಮೀಟರ್‌ನಷ್ಟು ಭಾರೀ ಮಳೆಯಾಗಿದೆ.

ಪಡಿಜರತರ ಪ್ರದೇಶದಲ್ಲಿ ಸುರಿದ ಮಳೆ 333 ಮಿಲಿ ಮೀಟರ್​ನಷ್ಟು ವೈತ್ರಿ ಪ್ರದೇಶದಲ್ಲಿ 280 ಮಿಲಿ ಮೀಟರ್​ನಷ್ಟು ಕಳೆದ 24 ಗಂಟೆಗಳಲ್ಲಿ ಸುರಿದ್ರೆ ತರೋಡಿ ಪ್ರದೇಶದಲ್ಲಿ ಸುರಿದಿದ್ದು 234 ಮಿಲಿಮೀಟರ್​ನಷ್ಟು ಮಳೆ ಕಲಪೆಟ್ಟಾ ಪ್ರದೇಶದಲ್ಲಿ 200 ಮಿಲಿ ಮೀಟರ್​ನಷ್ಟು ರೌದ್ರ ಮಳೆ ನಿರಂತರವಾಗಿ ಬಿದ್ದಿದೆ.

publive-image

ಇದನ್ನೂ ಓದಿ:ಹಾಸನದಲ್ಲೂ ಇಂದು ಭೂಕುಸಿತ.. 200 ಮೀಟರ್ ದೂರ ಕೊಚ್ಚಿ ಹೋದ ರಸ್ತೆ; ಫೋಟೋಗಳು ಇಲ್ಲಿವೆ

ನಿರಂತರ ಸುರಿದ ಮೃತ್ಯು ಮಳೆಯಿಂದಾಗಿ ಈ ರೀತಿಯಾದ ಭೀಕರ ಭೂಕುಸಿತ ಉಂಟಾಗಿದೆ. ಕೇರಳದ ವಯನಾಡ್​ನಲ್ಲಿ ಇನ್ನೂ ಕೂಡ ಯಾವುದೂ ನಿಯಂತ್ರಣಕ್ಕೆ ಬಂದಿಲ್ಲ. 250ಕ್ಕೂ ಹೆಚ್ಚು ಜನ ಇನ್ನೂ ಸಂಕಷ್ಟದಲ್ಲಿಯೇ ಸಿಲುಕಿದ್ದಾರೆ. ಜನರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಾಗಲೇ 2 ಹೆಲಿಕಾಪ್ಟರ್​ಗಳನ್ನು ನಿಯೋಜನೆ ಮಾಡಲಾಗಿದೆ. ಸೇನೆಯಿಂದ 200 ಮಂದಿ ಸೈನಿಕರು ಹಾಗೂ ವೈದ್ಯರ ತಂಡವನ್ನು ನಿಯೋಜನೆ ಮಾಡಲಾಗಿದೆ. ಎನ್​ಡಿಆರ್​ಎಫ್ ತಂಡ ಈಗಾಗಲೇ ಸ್ಥಳದಲ್ಲಿ ಬೀಡು ಬಿಟ್ಟಿವೆ. ಒಟ್ಟು ನಾಲ್ಕು ಎನ್​​ಡಿಆರ್​ಎಫ್ ತಂಡವನ್ನು ಈಗಾಗಲೇ ವಯನಾಡ್​​ಗೆ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment