ಪ್ರೀತಿಯಲ್ಲಿ ಬಿದ್ದು ಗುಹೆ ಸೇರಿದ ಐಷಾರಾಮಿ ಹುಡುಗಿ.. ನೀ ಗುಹೆಯೊಳಗೋ, ನಿನ್ನೊಳು ಗುಹೆಯೊ ಎಂದ ಹುಡುಗ

author-image
Ganesh
Updated On
ಪ್ರೀತಿಯಲ್ಲಿ ಬಿದ್ದು ಗುಹೆ ಸೇರಿದ ಐಷಾರಾಮಿ ಹುಡುಗಿ.. ನೀ ಗುಹೆಯೊಳಗೋ, ನಿನ್ನೊಳು ಗುಹೆಯೊ ಎಂದ ಹುಡುಗ
Advertisment
  • ಕಾರು, ಬಂಗಲೆ ಬಿಟ್ಟು ಈಗ ನಿತ್ಯವೂ ಕುದುರೆ, ಒಂಟೆ ಸವಾರಿ
  • ಟೂರಿಸ್ಟ್​ ಕಂಪನಿಯ ಅಡ್ಮಿನ್ ಬದುಕು ಇಲ್ಲಿ ರೋಚಕ
  • ಊರೂರು ಸುತ್ತುತ್ತಿದ್ದವಳ ಬದುಕಿಗೆ ತಿರುವು ಸಿಕ್ಕಿದ್ದೆಲ್ಲಿ?

ಪ್ರೇಮ ಕತೆಗಳಲ್ಲೇ ಇದೊಂದು ಅಪರೂಪದ ಕಥೆ. ಸ್ಟೋರಿ ಆರಂಭ ಆಗೋದು ಅಮೆರಿಕದ ಒಂದು ಹುಡುಗಿಯಿಂದ. ಈಕೆಯ ಹೆಸರು ನಟಲಿ ನಟಾಲಿ ಸ್ನೈಂದರ್ (Natalie Snider). ವಯಸ್ಸು 42. ಈಕೆಗೆ ಟ್ರಕ್ಕಿಂಗ್ ಅಂದರೆ ತುಂಬಾ ಇಷ್ಟ.

ಒಂದು ದಿನ ಜೋರ್ಡಾನ್​(Jordan)​​ನ ಪುರಾತನ ಪ್ರಸಿದ್ಧ ಐತಿಹಾಸಿಕ ನಗರ ಪೆಟ್ರಾ (Petra)ಗೆ ಭೇಟಿಗೆ ಹೊರಟಿದ್ದಳು. ಮರುಭೂಮಿ ಮತ್ತು ಬಂಡೆಗಳ ನಡುವೆ ಇರುವ ಪುರಾತನ ಸ್ಥಳ ಇಲ್ಲಿದೆ. ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಇಲ್ಲಿ ಕಲ್ಲುಗಳಿಂದ ಕೆತ್ತಿದ ಗುಹೆಗಳು ಮತ್ತು ವಿಚಿತ್ರ ಕಟ್ಟಡಗಳಿವೆ. ಇಲ್ಲಿನ ಮೂಲ ಬುಡಕಟ್ಟು ಜನರು. ಈ ಗುಹೆಗಳಲ್ಲಿ ಬುಡಕಟ್ಟು ಸಮುದಾಯದ ಜನ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಲ್ಲಿ KL ರಾಹುಲ್​​​​ಗೆ ಜಾಗವೇ ಇಲ್ಲ.. ಯಾಕೆಂದರೆ..

publive-image

ಇಲ್ಲಿಗೆ ಬಂದಿದ್ದ ನಟಾಲಿ ಬದುಕಿಗೆ ಹೊಸ ತಿರುವು ಸಿಗುತ್ತದೆ. ಅದೇನಂದರೆ ಪೆಟ್ರಾದಲ್ಲಿ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ಕುದುರೆ ಸವಾರಿ ಮಾಡ್ತಿರುವ ಫೋಟೋ ಅದಾಗಿತ್ತು. ಅಲ್ಲಿಂದ ವಾಪಸ್ ಆದ ಮೇಲೆ ಅದೇ ಫೋಟೋವನ್ನು ಆಕೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡುತ್ತಾರೆ.

ಒಂದು ದಿನ ಇನ್​ಸ್ಟಾದಲ್ಲಿರುವ ಫೋಟೋ, ಕುದುರೆ ಸವಾರಿ ಮಾಡ್ತಿದ್ದ ಆ ವ್ಯಕ್ತಿಯ ಕಣ್ಣಿಗೆ ಬೀಳುತ್ತದೆ. ಇದನ್ನು ಗಮನಿಸಿದ ಆತ, ಈ ಫೋಟೋದಲ್ಲಿ ಇರೋದು ನಾನು ಎಂದು ಕಮೆಂಟ್ ಮಾಡಿದ. ನಂತರ ಇವರಿಬ್ಬರ ಮಧ್ಯೆ ಸ್ನೇಹ ಬೆಳೆಯುತ್ತದೆ. ಸುಮಾರು 18 ತಿಂಗಳ ಕಾಲ ಆನ್​ಲೈನ್​​ನಲ್ಲಿ ಚಾಟಿಂಗ್ ನಡೆಸಿದ ನಂತರ, ನಟಾಲಿ ಆತನನ್ನು ಭೇಟಿಯಾಗಲು ನಿರ್ಧರಿಸುತ್ತಾಳೆ. ಅಂತೆಯೇ 2021 ಸೆಪ್ಟೆಂಬರ್​ನಲ್ಲಿ ಭೇಟಿಯಾಗುತ್ತಾಳೆ.

ಯಾರು ಆತ..?

ನಟಾಲಿ ಸ್ನೇಹ ಬೆಳೆಸಿದ ವ್ಯಕ್ತಿಯ ಹೆಸರು ಫೆರಾಸ್ ಬೌಡಿನ್ (Feras Boudin). ವಯಸ್ಸು 32. ಆನ್​ಲೈನ್ ಮೂಲಕ ಚಿಗುರಿದ ಸ್ನೇಹ ಪ್ರೀತಿಯಾಗಿ ತಿರುಗಿತು. ಒಬ್ಬರಿಗೊಬ್ಬರು ಬಿಟ್ಟಿರಲಾಗದ ಮನಸ್ಥಿತಿಗೆ ಬಂದರು. ಕೊನೆಗೆ ಐಷಾರಾಮಿ ಜೀವನ ನಡೆಸುತ್ತಿದ್ದ ನಟಾಲಿ, ತನ್ನ ನಿಜವಾದ ಬದುಕನ್ನು ತೊರೆದು ಪೆಟ್ರಾಗೆ ಬಂದು ಗುಹೆಯಲ್ಲಿ ವಾಸಿಸಲು ಆರಂಭಿಸಿದ್ದಾಳೆ.

publive-image

ಜೀವನದ ವ್ಯತ್ಯಾಸ

ಗುಹೆಯಲ್ಲಿ ವಾಸಿಸುವ ಅನುಭವ ನಗರ ಜೀವನಕ್ಕಿಂತ ಭಿನ್ನ. ನಗರದಲ್ಲಿನ ಜೀವನ ಹೆಚ್ಚಾಗಿ ನನ್ನಲ್ಲಿರುವ ವಸ್ತುಗಳನ್ನು ಆಧರಿಸಿದೆ. ಗುಹೆಯಲ್ಲಿನ ಜೀವನ ನಾನು ವಾಸಿಸುವ ಅನುಭವಗಳನ್ನು ಆಧರಿಸಿದೆ. ನಗರದಲ್ಲಿ ಒಂಟಿತನ ಇದೆ. ಗುಹೆಯಲ್ಲಿ ಸಮುದಾಯದ ಒಗ್ಗಟ್ಟು ಇದೆ -ನಟಾಲಿ

ನಟಾಲಿ ಈಗ, ಪೆರಾಸ್ ಜೊತೆ ಪೆಟ್ರಾದಲ್ಲಿನ ಗುಹೆಯಲ್ಲಿ ವಾಸಿಸುತ್ತಿದ್ದಾಳೆ. ಗುಹೆಯನ್ನು ಮನೆಯಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಎರಡು ಮಲಗುವ ಕೋಣೆಗಳು, ದವಸ ಧಾನ್ಯಗಳ ಶೇಖರಾ ಕೊಠಡಿ, ಬಾಲ್ಕಾನಿ, ಝರಿ ನೀರು ಹರಿದು ಬರುತ್ತಿದೆ. ಗುಹೆಯಲ್ಲಿ ನೀರಿಗಾಗಿ ನೈಸರ್ಗಿಕ ಮೂಲವನ್ನು ಬಳಸಲಾಗಿದೆ. ಸೌರ ಫಲಕಗಳ ಮೂಲಕ ವಿದ್ಯುತ್‌ ಉತ್ಪಾದಿಸುತ್ತಾರೆ. ಹೊಸ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಕಡಲ ಕಿನಾರೆಯಲ್ಲಿ ಶಿವಣ್ಣ; ಫ್ಯಾನ್ಸ್ ಖುಷಿ ಪಡುವ 5 ಫೋಟೋ ಹಂಚಿಕೊಂಡ ಗೀತಕ್ಕ

publive-image

ತಾನು ಗುಹೆ ವಾಸಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆಕೆ, ಭೂಮಿ ನಮಗೆ ಉಚಿತವಾಗಿ ಮನೆಗಳನ್ನು ನೀಡಿದೆ. ಬಹುಶಃ ತನ್ನ ಜೀವನದ ಅತ್ಯಂತ ಸ್ಥಿರ ಮತ್ತು ಶಾಂತಿಯುತ ಅನುಭವ. ನಾನು ಯಾವಾಗಲೂ ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುತ್ತಿದ್ದೆ. ನಾನು ಪ್ರವಾಸಿ ಕಂಪನಿ ಒಂದಕ್ಕೆ ಅಡ್ಮಿನ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಟಲಿ, ನ್ಯೂಜಿಲೆಂಡ್, ಫ್ಲೋರಿಡಾ ಮತ್ತು ಜರ್ಮನಿಯಲ್ಲಿ ವಾಸಿಸುತ್ತಿದ್ದೆ. ಇಲ್ಲಿಗೆ ಬಂದ ನಂತರ ಒಂದು ಕಡೆ ವಾಸವಿದ್ದೇನೆ ಹಾಗೂ ಸಮುದಾಯದ ಮಹತ್ವವನ್ನು ಅರ್ಥಮಾಡಿಕೊಂಡಿದ್ದೇನೆ ಎಂದಿದ್ದಾಳೆ.

ನಟಾಲಿ, ಈಗ ಜೋರ್ಡಾನ್‌ನಲ್ಲಿ ಸ್ಥಳೀಯ ಪ್ರವಾಸ ಕಂಪನಿಯನ್ನು ನಡೆಸ್ತಿದ್ದಾರೆ. ಪ್ರವಾಸಿಗರಿಗೆ ಅಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಆಕೆಯ ಪ್ರೀತಿಯನ್ನು ಒಪ್ಪಿಕೊಂಡಿರುವ ಫೆರಾಸ್, ನೀ ಗುಹೆಯೊಳಗೋ, ನಿನ್ನೊಳು ಗುಹೆಯೊ ಎನ್ನುತ್ತಿದ್ದಾನೆ ಹುಡುಗ.

ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಶರ್ಮಾ ಕರಿಯರ್​​ ಅಂತ್ಯಕ್ಕೆ ಮುಹೂರ್ತ ಫಿಕ್ಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment