ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು.. ಇವರ ದೇಹದಲ್ಲಿ ಹಂದಿ ಕಿಡ್ನಿ ಎಷ್ಟು ದಿನ ಕೆಲಸ ಮಾಡಿತ್ತು?

author-image
Ganesh
Updated On
ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು.. ಇವರ ದೇಹದಲ್ಲಿ ಹಂದಿ ಕಿಡ್ನಿ ಎಷ್ಟು ದಿನ ಕೆಲಸ ಮಾಡಿತ್ತು?
Advertisment
  • ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿಗೆ ಒಳಗಾಗಿದ್ದರು
  • ಇವರ ಸಾವಿಗೂ, ಕಿಡ್ನಿ ಸಮಸ್ಯೆಗೂ ಸಂಬಂಧ ಇಲ್ಲವಂತೆ
  • ಹಂದಿ ಕಿಡ್ನಿ ಕಸಿಗೂ ಮೊದಲೇ ಮಾನವರ ಕಿಡ್ನಿಗೆ ಕಸಿ ಮಾಡಲಾಗಿತ್ತು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ (Richard Slayman) ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಇವರು ಅಮೆರಿಕದ Massachusetts General Hospitalನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡು ತಿಂಗಳ ಹಿಂದೆ ಅವರಿಗೆ ಹಂದಿ ಕಿಡ್ನಿ ಕಸಿ ಮಾಡಲಾಗಿತ್ತು. ಅವರ ದಿಢೀರ್​ ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಆದರೆ ಕಿಡ್ನಿ ಕಸಿಗೆ ಸಂಬಂಧಿಸಿ ಅವರು ಸಾವನ್ನಪ್ಪಿಲ್ಲ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ:ಮಟಮಟ ಮಧ್ಯಾಹ್ನವೇ ತಂಪೆರೆದ ಮಳೆರಾಯ.. ರಾಜ್ಯದ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ..!

ರಿಚರ್ಡ್​ ಅಮೆರಿಕದ ವೇಮೌತ್​ ನಿವಾಸಿ ಆಗಿದ್ದರು. ಇವರು ಕಿಡ್ನಿ ಕಸಿಗೆ ಒಳಗಾಗುವುದಕ್ಕೂ ಮೊದಲು ಟೈಪ್ 2 ಡಯಾಬಿಟಿಸ್​ನಿಂದ ಬಳಲುತ್ತಿದ್ದರು. ನಂತರ ಕಿಡ್ನಿ ಸಮ್ಯಸೆಗೆ ಒಳಗಾಗಿದ್ದರು. ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಇವರು ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪರಿಣಾಮ 2018ರಲ್ಲಿ ಮಾನವ ಕಿಡ್ನಿ ಕಸಿಗೂ ಒಳಗಾಗಿದ್ದರು. ಅದು ಸುಮಾರು ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿತ್ತು. 2023ರಲ್ಲಿ ಮತ್ತೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಹಂದಿ ಕಿಡ್ನಿ ಕಸಿ ಮಾಡಲಾಗಿತ್ತು.

ಇದನ್ನೂ ಓದಿ:ಜೈಲಿನಿಂದ ಬಂದ ಬೆನ್ನಲ್ಲೇ 10 ಗ್ಯಾರಂಟಿ ಘೋಷಣೆ ಮಾಡಿದ ಕೇಜ್ರಿವಾಲ್.. ಇವೆಲ್ಲ ಉಚಿತ.. ಉಚಿತ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment