newsfirstkannada.com

ಬ್ರಿಟಿಷರ ನಾಡಲ್ಲಿ ಬ್ರಿಟಿಷರಿಂದಲೇ ರಾಷ್ಟ್ರಗೀತೆ ನುಡಿಸಿದ ಭಾರತದ ಖ್ಯಾತ ಸಂಗೀತ ನಿರ್ದೇಶಕ! 100 ಮಂದಿ ಸಹಯೋಗದಲ್ಲಿ ಜನಗಣಮನ

Share :

Published August 15, 2023 at 7:40am

    ಬ್ರಿಟಿಷರ ನಾಡು ಲಂಡನ್​ನಲ್ಲಿಯೇ ರಾಷ್ಟ್ರಗೀತೆ ರೆಕಾರ್ಡ್

    ಬ್ರಿಟಿಷರೇ ರಾಷ್ಟ್ರಗೀತೆಗೆ ಸಂಗೀತದ ಉಪಕರಣಗಳನ್ನು ನುಡಿಸಿದ್ದಾರೆ

    ರಾಷ್ಟ್ರಗೀತೆಯ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್

ಗ್ರ್ಯಾಮಿ ಪುರಸ್ಕ್ರತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್​, 77 ನೇ ಸ್ವಾತಂತ್ರ್ಯ ದಿನದಂದು ಬ್ರಿಟಿಷರ ನಾಡಲ್ಲಿ ಬ್ರಿಟಿಷರಿಂದಲೇ ರಾಷ್ಟ್ರಗೀತೆ ನುಡಿಸುವಂತೆ ಮಾಡಿದ್ದಾರೆ. ರಾಷ್ಟ್ರಗೀತೆಯ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್​ ಟಚ್​ ಕೊಟ್ಟಿದ್ದಾರೆ.

ನಮ್ಮ ದೇಶವನ್ನಾಳಿದ ಬ್ರಿಟಿಷರ ನಾಡು ಲಂಡನ್​ನಲ್ಲಿಯೇ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಿದ್ದಾರೆ. ವಿಶೇಷ ಅಂದ್ರೆ ಬ್ರಿಟಿಷರೇ ರಾಷ್ಟ್ರಗೀತೆಗೆ ಸಂಗೀತದ ಉಪಕರಣಗಳನ್ನು ನುಡಿಸಿದ್ದಾರೆ. ಕೇವಲ ಮೂರು ಗಂಟೆಯಲ್ಲಿ 100 ಮಂದಿ ಮ್ಯೂಸಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ದವಾಗಿದೆ.

ಭಾರತದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ದೇಶದ ಉದ್ದಗಲಕ್ಕೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ದೆಹಲಿಯ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಧ್ವಜರೋಹಣ ಮಾಡಲಿದ್ದಾರೆ. 1800 ವಿಶೇಷ ಅತಿಥಿಗಳೊಂದಿಗೆ ಮೋದಿ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದಾರೆ.

(ವಿಡಿಯೋ ಕೃಪೆ: ricky kej)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರಿಟಿಷರ ನಾಡಲ್ಲಿ ಬ್ರಿಟಿಷರಿಂದಲೇ ರಾಷ್ಟ್ರಗೀತೆ ನುಡಿಸಿದ ಭಾರತದ ಖ್ಯಾತ ಸಂಗೀತ ನಿರ್ದೇಶಕ! 100 ಮಂದಿ ಸಹಯೋಗದಲ್ಲಿ ಜನಗಣಮನ

https://newsfirstlive.com/wp-content/uploads/2023/08/Ricky-Kej.jpg

Load More