ಪಂದ್ಯದಿಂದ ಪಂದ್ಯಕ್ಕೆ CSK ಪರಿಸ್ಥಿತಿ ಹೀನಾಯ.. ಫ್ಯಾನ್ಸ್​ಗೆ ಬೇಸರ, ಚೆನ್ನೈ ತಂಡದಲ್ಲಿ ಬಿರುಕು?

author-image
Bheemappa
Updated On
ಪಂದ್ಯದಿಂದ ಪಂದ್ಯಕ್ಕೆ CSK ಪರಿಸ್ಥಿತಿ ಹೀನಾಯ.. ಫ್ಯಾನ್ಸ್​ಗೆ ಬೇಸರ, ಚೆನ್ನೈ ತಂಡದಲ್ಲಿ ಬಿರುಕು?
Advertisment
  • ಚೆನ್ನೈ ತಂಡದಲ್ಲಿ ಆಂತರಿಕ ಬಿಕ್ಕಟ್ಟು ಆರಂಭ ಆಗಿದೆಯಾ?
  • ಈ ಹಿಂದೆ ಜಡೇಜಾ- ಧೋನಿ ನಡುವೆ ಬಿರುಕು ಮೂಡಿತ್ತು
  • ಫ್ರಾಂಚೈಸಿ ಆಟಕ್ಕೆ ಋತುರಾಜ್ ಗಾಯಕ್ವಾಡ್​ ಬಲಿ ಆದ್ರಾ?

ಇಂಡಿಯನ್ ಪ್ರೀಮಿಯರ್ ಲೀಗ್ ದಿನೇ ದಿನೇ ರಂಗೇರುತ್ತಿದೆ. ಆದ್ರೆ, ಚಾಂಪಿಯನ್​ ಟೀಮ್​ ಚೆನ್ನೈ ಸೂಪರ್​ ಕಿಂಗ್ಸ್​ನ ಆಟ​​​ ಪಂದ್ಯದಿಂದ ಪಂದ್ಯಕ್ಕೆ ಹೀನಾಯ ಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಇಡೀ ತಂಡ ಕಂಗೆಟ್ಟಿದೆ. ಅಭಿಮಾನಿಗಳನ್ನ ನೋವು, ಬೇಸರ, ಹತಾಶೆ ಆವರಿಸಿದೆ. ಇದ್ರ ನಡುವೆ ಚೆನ್ನೈ ಕ್ಯಾಂಪ್​ನಲ್ಲಿ ಬಿರುಕು ಮೂಡಿರೋ ಸುದ್ದಿ ಹೊರಬಿದ್ದಿದೆ.

ಸೀಸನ್​-18ರ ಐಪಿಎಲ್ ಭರದಿಂದ ಸಾಗಿದೆ. ರೋಚಕ ಪಂದ್ಯಗಳ ಹಣಾಹಣಿ ಸಖತ್ ಕಿಕ್ ನೀಡ್ತಿದೆ. ಆದ್ರೆ, ಫೈವ್ ಟೈಮ್ಸ್ ಚಾಂಪಿಯನ್ಸ್​ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಮಾತ್ರ ದುಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಕಂಗ್ಗೆಟ್ಟಿರುವ ಚೆನ್ನೈ, ಗೆಲುವಿನ ಹುಡುಕಾಟದಲ್ಲಿದೆ. ಸತತ ಸೋಲಿನ ನೋವು ಅಭಿಮಾನಿಗಳನ್ನ ಕಾಡ್ತಿದೆ. ಇದ್ರ ನಡುವೆ ಮತ್ತೊಂದು ಬೇಸರದ ಸುದ್ದಿ ಚೆನ್ನೈ ಕ್ಯಾಂಪ್​ನಿಂದ ಹೊರಬಿದ್ದಿದೆ.

publive-image

ಸೀಸನ್​​ ಮಧ್ಯೆದಲ್ಲಿ ನಾಯಕತ್ವದ ಬದಲಾವಣೆಯಾದ ಬೆನ್ನಲ್ಲೇ ಚೆನ್ನೈ ತಂಡದಲ್ಲಿ ಎಲ್ಲವೂ ಸರಿ ಇದೆಯಾ ಎಂಬ ಪ್ರಶ್ನೆ ಉದ್ಬವಿಸಿದೆ. ಋತುರಾಜ್​ ಗಾಯಕ್ವಾಡ್​ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಧೋನಿ ಸೀಸನ್​​ನ ಉಳಿದ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸ್ತಾರೆ ಅನ್ನೋ ಅಧಿಕೃತ ಪ್ರಕಟಣೆಯನ್ನ ಸಿಎಸ್​ಕೆ ಫ್ರಾಂಚೈಸಿ ಹೊರಡಿಸಿದೆ. ಹಾಗಿದ್ರೂ, ಚೆನ್ನೈ ತಂಡದಲ್ಲಿ ಆಂತರಿಕ ಬಿಕ್ಕಟ್ಟು ಶುರುವಾಗಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

ಎಮ್​.ಎಸ್.ಧೋನಿ, ಋತುರಾಜ್ ನಡುವೆ ಶೀತಲ ಸಮರ..?

ಇಂಜುರಿ ಕಾರಣಕ್ಕೆ ಋತುರಾಜ್ ಗಾಯಕ್ವಾಡ್​​, ಟೂರ್ನಿಯಿಂದ ಔಟ್​ ಆಗಿದ್ರೂ ಋತುರಾಜ್​ ತಂಡದಲ್ಲೇ ಉಳಿದಿದ್ದಾರೆ. ತಂಡದೊಂದಿಗೆ ಟ್ರಾವೆಲ್​ ಮಾಡ್ತಿರೋ ಋತುರಾಜ್​​ ಗಾಯಕ್ವಾಡ್​ ಮೈದಾನಕ್ಕೂ ಬರ್ತಿದ್ದಾರೆ. ಆದ್ರೆ, ಧೋನಿ ಜೊತೆಗಿನ ಸಂಬಂಧ ಮೊದಲಿನಂತಿಲ್ಲ ಎನ್ನಲಾಗ್ತಿದೆ. ಇದು ಡ್ರೆಸ್ಸಿಂಗ್​ ರೂಮ್​ ಗುಸುಗುಸು ಆದ್ರೆ, ಇನ್ನೊಂದೆಡೆ ಸೋಷಿಯಲ್​ ಮೀಡಿಯಾದಲ್ಲೂ ಧೋನಿಯನ್ನ ಋತುರಾಜ್​ ಅನ್​ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.

ಇನ್ಸ್​​ಸ್ಟಾಗ್ರಾಂನಲ್ಲಿ ಋತುರಾತ್​ ಧೋನಿ ಅಕೌಂಟ್​​ನ ಫಾಲೋ ಮಾಡ್ತಿಲ್ಲ. ಸದ್ಯ ಧೋನಿಯನ್ನ ಋತುರಾಜ್​​ ಅನ್​​ಫಾಲೋ ಮಾಡಿದ್ದಾರೆ ಎನ್ನಲಾದ ಫೋಟೋ ವೈರಲ್​ ಆಗಿದೆ. ಇದು ಶೀತಲಸಮರದ ಗಾಸಿಪ್​ಗೆ ಕಿಡಿ ಹಚ್ಚಿದೆ. ಆದ್ರೆ, ಕೆಲ ಫ್ಯಾನ್ಸ್​ ಮಾತ್ರ ಇನ್​ಸ್ಟಾದಲ್ಲಿ ಈ ಹಿಂದೆಯೂ ಋತುರಾಜ್​ ಗಾಯಕ್ವಾಡ್​, ಧೋನಿನ ಫಾಲೋ ಮಾಡ್ತಿರಲಿಲ್ಲ ಎಂಬ ವಾದ ಮಾಡ್ತಿದ್ದಾರೆ. ಈ ವಾದ-ಪ್ರತಿವಾದದ ಹೊರತಾಗಿಯೂ ಚೆನ್ನೈ ಕ್ಯಾಂಪ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಕ್ರಿಕೆಟ್​ ವಲಯದಲ್ಲಿ ನಡೀತಿದೆ.

ಗಾಯಕ್ವಾಡ್​ ಇಂಜುರಿ ಮಾರ್ಚ್​ 30ಕ್ಕೆ, ಮತ್ತೆರೆಡು ಮ್ಯಾಚ್ ಆಡಿದ್ದೇಕೆ?

ಸದ್ಯ ಸ್ವತಃ ಗಾಯಕ್ವಾಡ್ ಇಂಜುರಿಯಾಗಿದೆ ಎಂದು ಹೇಳಿದ್ರೂ, ಬಹುತೇಕರು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಯಾಕಂದ್ರೆ, ಋತುರಾಜ್​ಗೆ ಇಂಜುರಿಯಾಗಿದ್ದು ಮಾರ್ಚ್ 30ಕ್ಕೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಎಸೆದ ಚೆಂಡು ಋತುರಾಜ್ ಗಾಯಕ್ವಾಡ್​ಗೆ ತಗಲಿತ್ತು. ಆದ್ರೆ, ಈ ಇಂಜುರಿಯಾದ ಬಳಿಕವೂ ಋತುರಾಜ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಎದುರು ಕಣಕ್ಕಿಳಿದಿದ್ದರು. ಇಂಜುರಿ ಆದ ಬಳಿಕ 2 ಪಂದ್ಯಗಳಲ್ಲಿ ಆಡಿದ ಋತುರಾಜ್​​ ಇದೀಗ ಇದಕ್ಕಿದ್ದಂತೆ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ, ಧೊನಿಗೆ ಪಟ್ಟ ಕಟ್ಟುವ ಸಲುವಾಗಿ ಋತುರಾಜ್​ನ ಫ್ರಾಂಚೈಸಿ ಬಲಿಪಶು ಮಾಡಿತಾ ಎಂಬ ಅನುಮಾನ ಕ್ರಿಕೆಟ್ ವಲಯದಲ್ಲಿ ಹುಟ್ಟಿಕೊಂಡಿದೆ.

ಇದನ್ನೂ ಓದಿ:7 ವರ್ಷದ ಬಳಿಕ IPLನಲ್ಲಿ ಅರ್ಧಶತಕ ಸಿಡಿಸಿದ ಕನ್ನಡಿಗ.. ಡೆಲ್ಲಿ ಕರುಣ್​​ಗೆ ಕೊಟ್ಟ ಹಣವೆಷ್ಟು?

publive-image

ಮೊನ್ನೆ ನಡೆದ ಕೊಲ್ಕತ್ತಾ ವಿರುದ್ಧ ಪಂದ್ಯಕ್ಕೂ ಮುನ್ನ ಋತುರಾಜ್​ ಗ್ರೌಂಡ್​ನಲ್ಲಿ ಕಾಣಿಸಿಕೊಂಡಿದ್ರು. ವಾರ್ಮ್​ಅಪ್​ ಮಾಡ್ತಿದ್ದ ಋತುರಾಜ್ ಸಹ​ ಆಟಗಾರರ ಜೊತೆ ಕಿಕ್ ವಾಲಿಬಾಲ್ ಕೂಡ ಆಡಿದ್ರು. ಫುಲ್​ ಫಿಟ್​ ಇದ್ದಂತೆಯೂ ಕಂಡಿದ್ರು. ಇದು ಕೂಡ ಚೆನ್ನೈ ಕ್ಯಾಂಪ್​ನ ಬಿರುಕಿನ ಗಾಸಿಪ್​ಗೆ ಆಹಾರವಾಗಿದೆ.

ಈ ಹಿಂದೆ ಜಡೇಜಾ ನಾಯಕನಾಗಿದ್ದಾಗಲೂ ಚೆನ್ನೈ ಸತತ ಸೋಲು ಕಂಡಿತ್ತು. ಆಗ ಫ್ರಾಂಚೈಸಿ ದಿಢೀರ್​​ ಧೋನಿಗೆ ಮತ್ತೆ ಪಟ್ಟಾಭಿಶೇಕ ಮಾಡಿತ್ತು. ಆಗ ಜಡೇಜಾ-ಧೋನಿ ನಡುವೆ ಬಿರುಕು ಮೂಡಿದ್ದ ಸುದ್ದಿ ಹೊರಬಿದ್ದಿತ್ತು. ಇದೀಗ ಋತುರಾಜ್​ ವಿಚಾರದಲ್ಲೂ ಇದೇ ಅಸಮಾಧಾನದ ಸುದ್ದಿ ಸೌಂಡ್​ ಮಾಡ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment