/newsfirstlive-kannada/media/post_attachments/wp-content/uploads/2025/04/rikki-rai1.jpg)
ರಿಕ್ಕಿ ರೈ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನ ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಿಕ್ಕಿ ರೈ ಬಹುಕಾಲದ ಗನ್ ಮ್ಯಾನ್ ವಿಠ್ಠಲನ್ನ ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗನ್ ಮ್ಯಾನ್ನಿಂದಲೇ ಕೃತ್ಯ ನಡೆಯಿತಾ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ದಿನ ವಿಠ್ಠಲ್, ರಹಸ್ಯವಾಗಿ ಮಾತನಾಡಿರೋ ಮಾಹಿತಿ ಲಭ್ಯವಾಗಿದೆ. ರಿಕ್ಕಿ ಮೇಲೆ ದಾಳಿ ನಡೆದ ನಂತರ ಆಸ್ಪತ್ರೆಯಿಂದ ನೇರವಾಗಿ ಫಾರ್ಮ್ ಹೌಸ್ಗೆ ಬಂದಿದ್ದ. ಇದೀಗ ವಿಠ್ಠಲ ಚಲನ, ವಲನ ಪೊಲೀಸ್ರಿಗೆ ಅನುಮಾನ ಹುಟ್ಟಿಸಿದೆ. ಹೀಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಪೊಲೀಸ್ ತನಿಖೆ ವೇಳೆ ಮನೆ ಕೆಲಸದವರು, ಗನ್ಮ್ಯಾನ್ಗಳು, ಸೆಕ್ಯೂರಿಟಿಗಳು ಹಾಗೂ ಮ್ಯಾನೇಜರ್ನಿಂದ ವಿಭಿನ್ನ ಹೇಳಿಕೆ ಬಂದಿದೆ ಎನ್ನಲಾಗಿದೆ. ಇದರಿಂದ ರಿಕ್ಕಿ ರೈ ಮೇಲೂ ಪೊಲೀಸರು ಅನುಮಾನ ಮೂಡಿದೆ. ಹೀಗಾಗಿ ಪೊಲೀಸರು ತಮ್ಮದೇ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಓಂ ಪ್ರಕಾಶ್ ಪ್ರಕರಣದಲ್ಲಿ ಆರೋಪಿ ಪಲ್ಲವಿಗೆ ಪ್ಲಸ್ ಆಗುತ್ತಾ ಖಿನ್ನತೆ ಕಾಯಿಲೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ