/newsfirstlive-kannada/media/post_attachments/wp-content/uploads/2025/04/rikki-rai.jpg)
ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಕೇಸ್ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಸ್ವಲ್ಪದರಲ್ಲೇ ರಿಕ್ಕಿ ರೈ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಬಳಿ ಮೂವರು ಅಪರಿಚಿತರು ರಿಕ್ಕಿ ಮೇಲೆ ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ. ಪರಿಣಾಮ ರಿಕ್ಕಿ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಸದ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ
ಅಸಲಿಗೆ ಆಗಿದ್ದೇನು..?
- ಕಳೆದ ಎರಡು ದಿನಗಳ ಹಿಂದೆ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದ ರಿಕ್ಕಿ ರೈ
- ಬಿಡದಿ ನಿವಾಸದಿಂದ ರಾತ್ರಿ 12:30ಕ್ಕೆ ಬೆಂಗಳೂರಿನ ನಿವಾಸದತ್ತ ಹೊರಟಿದ್ದ ರಿಕ್ಕಿ
- ಮನೆಯಿಂದ ಹೊರ ಬರ್ತಿದ್ದಂತೆ ರಸ್ತೆ ಪಕ್ಕದ ಕಾಂಪೌಂಡ್ ಹಿಂಬದಿಯಿಂದ ಫೈರಿಂಗ್
- ಡಬಲ್ ಬ್ಯಾರಲ್ ಹ್ಯಾಂಡ್ ಶಾರ್ಟ್ ಗನ್ನಿಂದ ಫೈರಿಂಗ್
- ಬುಲೆಟ್ಗಳು ಸ್ಕಾರ್ಪಿಯೋ ಕಾರಿನ ಡ್ರೈವರ್ ಸೀಟ್ಗೆ ತಗುಲಿವೆ
- ಅಲ್ಲಿ ತಗುಲಿದ್ದ ಬುಲೆಟ್ಗಳು ಹಿಂಬದಿಯಲ್ಲಿ ಕೂತಿದ್ದ ರಿಕ್ಕಿಗೂ ತಾಗಿದೆ
- ರಿಕ್ಕಿ ಮೂಗು ಹಾಗೂ ಭುಜಕ್ಕೆ ಹೊಕ್ಕಿರುವ ಗುಂಡುಗಳು
- ಗಾಯದಿಂದ ನರಳಾಡಿದ ರಿಕ್ಕಿ ರೈ, ಬಿಡದಿ ಆಸ್ಪತ್ರೆಗೆ ದಾಖಲು
- ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲು
- ಇಂದು ಬೆಳಗ್ಗೆ ರಿಕ್ಕಿ ರೈಗೆ ಶಸ್ತ್ರ ಚಿಕಿತ್ಸೆ ಮಾಡಿರುವ ಮಣಿಪಾಲ್ ವೈದ್ಯರು
- ಮೂವರು ದುಷ್ಕರ್ಮಿಗಳು ದಾಳಿ ನಡೆಸಿ ಅಲ್ಲಿಂದ ಪರಾರಿ ಆಗಿದ್ದಾರೆ
- ರಿಕ್ಕಿ ರೈ ಜೊತೆ ಕಾರಿನಲ್ಲಿದ್ದ ಓರ್ವ ಗನ್ ಮ್ಯಾನ್, ಡ್ರೈವರ್ ರಾಜು ಇದ್ದರು
- ಫೈರಿಂಗ್ ನಡೆಸಿದ ಸ್ಥಳದಲ್ಲಿ 70 MMನ ಎರಡು ಬುಲೆಟ್ ತುಂಡುಗಳು ಪತ್ತೆ
- ಶೂಟ್ ಮಾಡಿರೋ ಜಾಗದಲ್ಲಿ ಸಿಮ್ ಇಲ್ಲದ ಒಂದು ಪೋನ್ ಪತ್ತೆ
- ಕಾರು ಚಾಲಕ ಬಸವರಾಜ್ ದೂರಿನನ್ವಯ ಬಿಡದಿ ಠಾಣೆಯಲ್ಲಿ FIR
- ನಾಲ್ವರು ವಿರುದ್ಧ ಎಫ್ಐಆರ್ ದಾಖಲಿಸಿರುವ ಬಿಡದಿ ಪೊಲೀಸರು
- ರಾಕೇಶ್ ಮಲ್ಲಿ, ನಿತೇಶ್ ಶೆಟ್ಟಿ, ನಿತೇಶ್, ಅನುರಾಧ ವಿರುದ್ಧ FIR
- ರಾಕೇಶ್ ಮಲ್ಲಿ, ನಿತೇಶ್ ಶೆಟ್ಟಿ, ನಿತೇಶ್ ಎಸ್ಟೇಟ್ ಮಾಲೀಕರು
- ಅನುರಾಧ, ಮುತ್ತಪ್ಪ ರೈ ಅವರ ಎರಡನೇ ಪತ್ನಿ ಆಗಿದ್ದಾರೆ
- ಆಸ್ತಿ ವ್ಯಾಜ್ಯ ವಿಚಾರವಾಗಿ ದಾಳಿ ಆಗಿರುವ ಆರೋಪ ಕೇಳಿಬಂದಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ