ಮೂವರು ಅಪರಿಚಿತರಿಂದ ದಾಳಿ.. ಪೊಲೀಸರು ಸೀಜ್ ಮಾಡಿದ ವಸ್ತುಗಳು ಏನೇನು..?

author-image
Veena Gangani
Updated On
ಶೂಟೌಟ್‌ ಕೇಸ್‌ಗೆ ರೋಚಕ ಟ್ವಿಸ್ಟ್‌.. ರಿಕ್ಕಿ ರೈ ಮೇಲೆ ಈಗ ಅನುಮಾನ; ಕಂಟ್ರಿಮೇಡ್ ಶಾರ್ಟ್​​ ಗನ್ ಬಳಕೆ!
Advertisment
  • ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ
  • ಹಲವು ಅಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು
  • ರಸ್ತೆ ಪಕ್ಕದ ಕಾಂಪೌಂಡ್ ಹಿಂಬದಿಯಿಂದ ದುಷ್ಕರ್ಮಿಗಳಿಂದ ದಾಳಿ

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿಯಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಬಳಿ ಅಪರಿಚಿತರು ಫೈರಿಂಗ್ ಮಾಡಿ ಎಸ್ಕೇಪ್​ ಆಗಿದ್ದಾರೆ. ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ

publive-image

ಇನ್ನೂ, ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ಹಲವು ಅನುಮಾನ ವ್ಯಕ್ತವಾಗಿದ್ದು, ಬಿಡದಿ ನಿವಾಸದ ಸುತ್ತಮುತ್ತ ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತರು ಯಾವ ಕಡೆಯಿಂದ ಬಂದಿದ್ರು ಅನ್ನೋದರ ಬಗ್ಗೆ ಘಟನೆ ನಡೆದ ಸ್ಥಳದಿಂದ ಹಿಡಿದು ಮುಖ್ಯ ರಸ್ತೆವರೆಗೂ ಪೊಲೀಸರು ಸರ್ಚಿಂಗ್ ಮಾಡಿದ್ದಾರೆ.

publive-image

ಇಷ್ಟೇ ಅಲ್ಲದೇ ಮನೆ ಬಳಿಯೇ ಪೊಲೀಸರ ಒಂದು ತಂಡ ಬೀಡು ಬಿಟ್ಟಿದ್ದು ಬಿಡದಿ ಪೊಲೀಸರಿಂದ ತೀವ್ರ ತನಿಖೆ ಮುಂದುವರೆದಿದೆ. ಮೂವರು ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ ಎನ್ನಲಾಗ್ತಿದ್ದು, ಕಂಟ್ರಿ ಮೇಡ್ ಶಾರ್ಟ್ ಗನ್ ಬಳಸಿರೋ ಮಾಹಿತಿ ಸಿಕ್ಕಿದೆ. ಶೂಟೌಟ್ ಮಾಡಿರೋ ಜಾಗದಲ್ಲಿ ಸಿಮ್ ಇಲ್ಲದ ಒಂದು ಕೀಪ್ಯಾಡ್ ಪೋನ್ ಪತ್ತೆಯಾಗಿದೆ.

publive-image

ಸದ್ಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರೋ ರಿಕ್ಕಿ ಅವರಿಗೆ ಎರಡು ಶಸ್ತ್ರ ಚಿಕಿತ್ಸೆ ಆಗಿದೆ. ಈಗಾಗಲೇ ವೈದ್ಯರು ಹ್ಯಾಂಡ್ ಸರ್ಜರಿ ಮಾಡಿದ್ದಾರೆ. ಸದ್ಯ ಮೂಗಿನ ಸರ್ಜರಿ ನಡೆಯುತ್ತಿದೆ. ಪ್ಲಾಸ್ಟಿಕ್ ಸರ್ಜರಿ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment