ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲವು ಉದ್ಯೋಗ.. ಪರೀಕ್ಷೆ ಇಲ್ಲ, ಸಂದರ್ಶನ ಮಾತ್ರ

author-image
Bheemappa
Updated On
ESICನಲ್ಲಿ 600ಕ್ಕೂ ಅಧಿಕ ಉದ್ಯೋಗಗಳು.. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
Advertisment
  • ಕರ್ನಾಟಕ ಸರ್ಕಾರದಡಿ ವೃತ್ತಿ ಹುಡುಕುತ್ತಿರುವವರಿಗೆ ಅವಕಾಶ
  • ಈ ವಿಭಾಗದಲ್ಲಿ ವ್ಯಾಸಂಗ ಮಾಡಿದವ್ರು ಅರ್ಜಿ ಸಲ್ಲಿಸಬಹುದು
  • ಯಾವ್ಯಾವ ಉದ್ಯೋಗಗಳನ್ನು ಸಂಸ್ಥೆಯು ಆಹ್ವಾನ ಮಾಡಿದೆ?

ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಆರ್​ಐಎಂಎಸ್) ರಾಯಚೂರು, ಇಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಅರ್ಜಿ ಆಹ್ವಾನ ಮಾಡಲಾಗಿದೆ. ಸಂಸ್ಥೆಯು ಅಧಿಕೃತ ಅಧಿಸೂಚನೆ ಹೊರಡಿಸಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಲಸಗಳಿಗೆ ಆಫ್‌ಲೈನ್‌ನಲ್ಲಿ ಅಪ್ಲೇ ಮಾಡಬಹುದು. ಕರ್ನಾಟಕ ಸರ್ಕಾರದಡಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಆರ್​ಐಎಂಎಸ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಸಂಸ್ಥೆಯ ವೆಬ್​​ಸೈಟ್​ಗೆ ಭೇಟಿ ನೀಡುವ ಮೂಲಕ ಅಪ್ಲಿಕೇಶನ್ ಫಾರ್ಮ್​ ಡೌನ್​ಲೋಡ್ ಮಾಡಿಕೊಳ್ಳಬೇಕು. ಬಳಿಕ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಬೇಕಾದ ಎಲ್ಲ ದಾಖಲೆ ಲಗತ್ತಿಸಿ, 2 ಸೆಟ್​ ಜೆರಾಕ್ಸ್ ಸಿದ್ಧ ಮಾಡಿಕೊಂಡು ಸೆಲ್ಫ್ ಅಟೆಸ್ಟೆಡ್ ಮಾಡಿಕೊಂಡು ಸಂಸ್ಥೆಗೆ ಆಫ್‌ಲೈನ್‌ನಲ್ಲಿ (ಪೋಸ್ಟ್) ಕಳುಹಿಸಿಕೊಡಬೇಕು.

ಇದನ್ನೂ ಓದಿ: ಕಲ್ಲಿದ್ದಲು ಗಣಿ ಇಲಾಖೆಯಲ್ಲಿ 1,765 ಅಪ್ರೆಂಟೀಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

publive-image

ಸಂದರ್ಶನಕ್ಕೆ ಹಾಜರಾಗುವಾಗ ಮೂಲ ದಾಖಲೆಗಳು ಹಾಗೂ ಸಿದ್ಧ ಪಡಿಸಿಕೊಂಡ 2 ಸೆಟ್​ ಜೆರಾಕ್ಸ್ ಸಮೇತ ಹಾಜರು ಪಡಿಸಬೇಕು.

ವಿಳಾಸ-

ನಿರ್ದೇಶಕರು,
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ
ಸರ್ಕಾರದ ಸ್ವಾಯತ್ತ ಸಂಸ್ಥೆ,
ಜಸ್ಟೀಸ್ ಶಿವರಾಜ ಪಾಟೀಲ್ ರಸ್ತೆ,
ರಾಯಚೂರು- 584102

10 ಸೀನಿಯರ್ ರೆಸಿಡೆಂಟ್ (ಹಿರಿಯ ನಿವಾಸಿಗಳ ಹುದ್ದೆಗಳ) ಹುದ್ದೆಗಳನ್ನು ಸದ್ಯ ಭರ್ತಿ ಮಾಡಲಾಗುತ್ತಿದೆ. ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ 75,000 ರೂಪಾಯಿಗಳನ್ನು ನೀಡಲಾಗುತ್ತದೆ. ಎಂಡಿ, ಎಂಎಸ್​, ಡಿಎನ್​​ಬಿ ಸ್ನಾತಕೋತ್ತರ ವೈದ್ಯಕೀಯ ಪದವಿಗಳನ್ನು ಆಕಾಂಕ್ಷಿಗಳು ಪೂರ್ಣಗೊಳಿಸಿರಬೇಕು. ಆಯ್ಕೆ ಆದವರು ರಾಯಚೂರಿನಲ್ಲಿ ಕೆಲಸ ಮಾಡಬೇಕಾಗಿರುತ್ತದೆ.

[email protected]

ಸಂಸ್ಥೆಯ ವೆಬ್​ಸೈಟ್-https://rims-raichur.com/

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 15 ಮಾರ್ಚ್​ 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment