/newsfirstlive-kannada/media/post_attachments/wp-content/uploads/2025/07/RINKU_SINGH-2.jpg)
ಕ್ರಿಕೆಟರ್ಗಳು ಪಂದ್ಯಕ್ಕೂ ಮುನ್ನ ಒಂದಿಲ್ಲೊಂದು ಡ್ರಿಲ್ ಮಾಡ್ತಾರೆ. ಪಿಚ್ ನೋಡ್ತಾರೆ. ಅದಕ್ಕೆ ತಕ್ಕಂತೆ ಶಾಡೋ ಬ್ಯಾಟಿಂಗ್ ಮಾಡ್ತಾರೆ. ಬ್ಯಾಟ್, ಬಾಲ್ ಡ್ರಿಲ್ ಮಾಡ್ತಾ ಅಭ್ಯಾಸ ಮಾಡ್ತಾರೆ. ಇದೆಲ್ಲಾ ಕ್ರಿಕೆಟರ್ಗಳು ಯಾಕ್ ಮಾಡ್ತಾರೆ?. ಇಂಥದ್ದೊಂದು ಪ್ರಶ್ನೆ ಕಾಡ್ತಿದೆಯಾ ಅಲ್ವಾ..? ಅದಕ್ಕೆ ಉತ್ತರ ಇಲ್ಲಿದೆ.
ಕ್ರಿಕೆಟರ್ ಒಬ್ಬ ಸಕ್ಸಸಫುಲ್ ಕ್ರಿಕೆಟರ್ ಆಗಬೇಕಾದ್ರೆ, ಕಠಿಣ ಶ್ರಮ, ನೆಟ್ಸ್ನಲ್ಲಿ ಪ್ರ್ಯಾಕ್ಟೀಸ್ ಮಾತ್ರವೇ ಮುಖ್ಯವಾಗಲ್ಲ. ಆತನ ಡೆಡಿಕೇಷನ್, ಕಮಿಟ್ಮೆಂಟ್ ಇಂಪಾರ್ಟೆಂಟ್ ಆಗುತ್ತೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ವಿರಾಟ್ ಕೊಹ್ಲಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಡೆಡಿಕೇಷನ್, ಕಮಿಟ್ಮೆಂಟ್ ಜೊತೆಗೆ ಏಕಾಗ್ರತೆ ಬಹುಮುಖ್ಯ. ಇಂಥಹ ಮತ್ತೊಬ್ಬ ಕ್ರಿಕೆಟರ್ ಸಾಯಿ ಸುದರ್ಶನ್.
ಟೆಕ್ನಿಕಲಿ ಹೈ ಸೌಂಡೇಡ್ ಬ್ಯಾಟರ್ ಆಗಿರುವ ಸಾಯಿ ಸುದರ್ಶನ್, ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆದ್ರೆ, ಈತನ ಬ್ಯಾಟಿಂಗ್ ಟೆಕ್ನಿಕ್ ಹಾಗೂ ಐಪಿಎಲ್ನಲ್ಲಿ ರನ್ ಹೊಳೆ ಹರಿಸಿದ ಹಿಂದಿನ ಸೀಕ್ರೆಟ್, ಬ್ಯಾಟಿಂಗ್ಗೂ ಮುನ್ನ 22 ಯಾರ್ಡ್ನಲ್ಲಿ ಮಾಡುವ ಆ ಶಾಡೋ ಪ್ರ್ಯಾಕ್ಟೀಸ್..
ಸಾಯಿ ಸುದರ್ಶನ್ ಶಾಡೋ ಪ್ರ್ಯಾಕ್ಟೀಸ್ ಸೀಕ್ರೆಟ್ ಏನು..?
ಮಳೆಯ ನಡುವೆ ಸಾಯಿ ಸುದರ್ಶನ್ ಮೈದಾನದ ಮಧ್ಯೆ ಅಭ್ಯಾಸ ಮಾಡುತ್ತಾರೆ. ಈ ಪ್ರಶ್ನೆ ಸಹಜವಾಗೇ ಕಾಡುತ್ತೆ. ಗಲ್ಲಿ ಕ್ರಿಕೆಟರ್ಗಳು ಸಹ ನಡೀಯುವಾಗಲೂ ಈ ರೀತಿ ಮಾಡೋದು ಸಾಮಾನ್ಯ. ಆದ್ರೆ, ಸಾಯಿ ಸುದರ್ಶನ್ ಹವ್ಯಾಸ, ನಿನ್ನೆ ಮೊನ್ನೆಯಿಂದಲ್ಲ. ವರ್ಷಗಳಿಂದಲೂ ಇದ್ದೇ ಇದೆ. ಪಿಚ್ ಹತ್ತಿರವೇ ಇರುವ ಸಾಯಿ ಸುದರ್ಶನ್, ಎರಡು ಎಂಡ್ನಲ್ಲಿ ಶಾಡೋ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಕೆಲ ಬೌನ್ಸರ್ಗಳಿಂದ ತಪ್ಪಿಸಿಕೊಳ್ಳುವುದು. ಫುಲ್ ಶಾಟ್, ಕವರ್ ಡ್ರೈವ್, ಬ್ಯಾಕ್ ಪೂಟ್, ಸ್ಕ್ವೇರ್ ಕಟ್ ಸೇರಿದಂತೆ ಪ್ರತಿ ಶಾಟ್ನ ಪ್ಲೇ ಮಾಡಿದ್ದಾರೆ. ಕೆಲ ಕಾಲ ಕಳೆದಿದ್ದಾರೆ. ಇದಕ್ಕೆ ಕಾರಣ ಬ್ಯಾಟಿಂಗ್ ಮೇಲಿನ ಫೋಕಸ್ ಮಾತ್ರವಲ್ಲ. ಕಾನ್ಫಿಡೆನ್ಸ್ ಹೆಚ್ಚಿಸಿಕೊಳ್ಳುವುದರ ಭಾಗವಾಗಿದೆ.
ಅಭಿಷೇಕ್ ಶರ್ಮಾ ಬ್ಯಾಟ್, ಬಾಲ್ ಡ್ರಿಲ್..!
ಅಭಿಷೇಕ್ ಶರ್ಮಾ.. ಐಪಿಎಲ್ ವೇಳೆ ಬ್ಯಾಟ್, ಬಾಲ್ ಡ್ರಿಲ್ ಸಹಜವಾಗೇ ನೋಡಿರ್ತೀರಾ..? ಇದು ಬ್ಯಾಟಿಂಗ್ ಸಕ್ಸಸ್ಗೆ ನೆರವಾಗುತ್ತೆ. ಬ್ಯಾಟಿಂಗ್ ಕಂಟ್ರೋಲ್, ಶಾಟ್ ಸೆಲೆಕ್ಷನ್ ಇಂಪ್ರೂವ್ ಆಗುತ್ತೆ. ಚೆಂಡನ್ನ ಮಿಡಲ್ ಮಾಡುವುದಕ್ಕೆ ನೆರವಾಗುತ್ತೆ. ಇದರಿಂದ ಬ್ಯಾಡ್ ಶಾಟ್ ಸೆಲೆಕ್ಷನ್ ತಪ್ಪಿಸಬಹುದು. ಬಾಲ್ ಫೋಕಸ್ನಿಂದಾಗಿ ಏಕಾಗ್ರತೆ ಸಿಗುತ್ತೆ. ಇದು ಆನ್ಫಿಲ್ಡ್ನಲ್ಲಿ ಬ್ಯಾಟಿಂಗ್ ರಿಯಾಕ್ಷನ್ ಟೈಮ್ ಜೊತೆಗೆ ಸ್ಕಿಲ್ಸ್ನ ಇಂಪ್ರೂಮೆಂಟ್ಗೆ ಕಾರಣವಾಗುತ್ತೆ. ಅಷ್ಟೇ ಅಲ್ಲ.! ಉತ್ತಮ ಪ್ರದರ್ಶನ ಹೊರಗಾಕುತ್ತೆ.
ಅಭಿಷೇಕ್ಗಿಂತ ಕೊಂಚ ಡಿಫರೆಂಟ್ ರಿಂಕು ಸಿಂಗ್!
ಅಭಿಷೇಕ್ ಶರ್ಮಾ ಎರಡು ಕೈಗಳಿಂದ ಬ್ಯಾಟ್, ಬಾಲ್ ಡ್ರಿಲ್ ಮಾಡಿದರೂ ಆದ್ರೆ, ರಿಂಕು ಸಿಂಗ್ ಆಗಲ್ಲ. ಒನ್ ಹ್ಯಾಂಡ್ನಲ್ಲಿ ಬಾಲ್, ಬ್ಯಾಟ್ ಡ್ರಿಲ್ ಮಾಡ್ತಾರೆ. ಇದಕ್ಕೆ ಕಾರಣ ಬ್ಯಾಟಿಂಗ್ ಟೈಮಿಂಗ್, ಬಾಲ್ ಮಿಡ್ಲ ಸ್ಕಿಲ್ಸ್ ಇಂಪ್ರುಮೆಂಟ್ಗಾಗಿಯೇ ಆಗಿದೆ.
ಪ್ರಷರ್ ಟೈಮ್ನಲ್ಲಿ ಬ್ಯಾಟಿಂಗ್ ಇಳಿಯುವ ರಿಂಕು ಸಿಂಗ್, ಮೊದಲ ಬಾಲ್ನಿಂದಲೇ ಬಾಲ್ನ ಬೌಂಡರಿ ಗೆರೆದಾಟಿಸಬೇಕಿರುತ್ತೆ. ಇದು ಸಾಧ್ಯವಾಗಬೇಕಾದ್ರೆ, ಬಾಲ್ ಟೈಮಿಂಗ್ ಮೋಸ್ಟ್ ಇಂಪಾರ್ಟೆಂಟ್. ಈ ವಿಧಾನವೇ ರಿಂಕು, ಕೊನೆ ಓವರ್ನಲ್ಲಿ 5 ಸಿಕ್ಸರ್ ಬಾರಿಸಿ ಗೆಲುವಿನ ದಡ ಸೇರಿಸಿದ ಹಿಂದಿನ ಸೀಕ್ರೆಟ್.
ಇದನ್ನೂ ಓದಿ:ಟೀಮ್ ಇಂಡಿಯಾ ಜೊತೆ ರೂಟ್ ಸೆಂಚುರಿ; ಕ್ರಿಕೆಟ್ ದೇವರ ರೆಕಾರ್ಡ್ ಬ್ರೇಕ್.. ಎಷ್ಟು ಶತಕ ಸಿಡಿಸಿದರು?
ಮಿಥಾಲಿ ರಾಜ್ಗೆ ಪುಸ್ತಕ ಓದುವ ಹವ್ಯಾಸ..!
ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್ ಹವ್ಯಾಸವೇ ಒಂದಾದ್ರೆ, ಲೇಡಿ ಸಚಿನ್ ಮಿಥಾಲಿ ರಾಜ್ ಹವ್ಯಾಸವೇ ಮತ್ತೊಂದು ಅದೇ ಪುಸ್ತಕ ಓದುವುದು. ಕ್ರಿಕೆಟರ್ಗಳು ಪ್ರೀ ಟೈಮ್ನಲ್ಲಿ ಪುಸ್ತಕ ಓದುವುದು ನಾವ್ ಕೇಳಿರ್ತೀವಿ. ಆದ್ರೆ, ಮಿಥಾಲಿ ರಾಜ್, ಬ್ಯಾಟಿಂಗ್ಗೂ ಮುನ್ನ ಪುಸ್ತಕ ಓದುತ್ತಾರೆ. ಇದು ಬ್ಯಾಟಿಂಗ್ಗೆ ಹೋದಾಗ ಭಯ ಹುಟ್ಟಿಸಲ್ಲ ಅನ್ನೋದು ಮಿಥಾಲಿ ನಂಬಿಕೆ. ಈ ನಂಬಿಕೆಯೇ ಮಿಥಾಲಿ ರಾಜ್, ಯಶಸ್ಸಿನ ಸೀಕ್ರೆಟ್.
ಯಶಸ್ಸು ಅಂದುಕೊಂಡಷ್ಟು ಸುಲಭವಲ್ಲ. ಆದ್ರೆ, ಡೆಡಿಕೆಷನ್, ಕಮಿಟ್ಮೆಂಟ್ ಜೊತೆಗೆ ಏಕಾಗ್ರತೆಯೂ ಇದ್ದಲ್ಲಿ, ಸಕ್ಸಸ್ ಕಾಣಬಹುದು ಅನ್ನೋದಕ್ಕೆ ಇವ್ರೇ ಸಾಕ್ಷಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ