/newsfirstlive-kannada/media/post_attachments/wp-content/uploads/2025/06/RINKU_SINGH-1.jpg)
ಟೀಮ್ ಇಂಡಿಯಾದ ಯಂಗ್ ಕ್ರಿಕೆಟರ್ ಹಾಗೂ ಕೆಕೆಆರ್ ತಂಡದ ಆಟಗಾರ ರಿಂಕು ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಲಕ್ನೋ ನಗರದ ಫೈವ್ ಸ್ಟಾರ್ ಹೋಟೆಲ್ ಸೆಂಟ್ರಮ್ನಲ್ಲಿ ಎಂಗೇಜ್ಮೆಂಟ್ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸಮಾರಂಭದಲ್ಲಿ ರಿಂಕು ಸಿಂಗ್ ಅವರು ಪ್ರಿಯಾ ಸರೋಜ್ ಅವರ ಕೈ ಬೆರಳಿಗೆ ಉಂಗುರ ಹಾಕಿದರು. ಈ ವೇಳೆ ಪ್ರಿಯಾ ಸರೋಜ್ ಕಣ್ಣೀರು ಹಾಕುತ್ತಿದ್ದರು. ಈ ಮೂಲಕ ರಿಂಕು ಸಿಂಗ್ ಅವರು ತಮ್ಮ ಜೀವನದ ಹೊಸ ಅಧ್ಯಯನವನ್ನು ಪ್ರಾರಂಭಿಸಿದಂತೆ ಆಗಿದೆ. ಇನ್ನು ಮದುವೆಯೊಂದೇ ಬಾಕಿ ಇದೆ.
ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಮಿತಾಬ್ ಬಚ್ಚನ್ ಹೆಂಡತಿ ಸಂಸದೆ ಜಯಾ ಬಚ್ಚನ್, ಡಿಂಪಲ್ ಯಾದವ್ ಸೇರಿದಂತೆ ರಾಜಕೀಯ ಗಣ್ಯರು ಆಗಮಿಸಿದ್ದರು. ರಿಂಕು ಸಿಂಗ್ ಅವರ ಕ್ರಿಕೆಟ್‌ನ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು. ಇದರ ಜೊತೆಗೆ ಬಿಸಿಸಿಐನ ಉಪಾಧ್ಯಕ್ಷ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಟ್ಟು 300 ಜನರಿಗೆ ಆಹ್ವಾನ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:RCB ವಿಜಯೋತ್ಸವ, ಪ್ರಾಣ ಬಿಟ್ಟ ಅಭಿಮಾನಿಗಳು.. ಮಾತೇ ಬರ್ತಿಲ್ಲ, ವಿರಾಟ್ ಕೊಹ್ಲಿ ಸಂತಾಪ!
ಅದ್ಧೂರಿಯಾಗಿ ಎಂಗೇಜ್ಮೆಂಟ್ ಸಮಾರಂಭ ಮುಗಿದಿದ್ದು ಇನ್ನೇನಿದ್ದರೂ ಮದುವೆ ಸಮಾರಂಭ ಕುರಿತು ಎರಡು ಮನೆಗಳಲ್ಲೂ ಪೂರ್ವ ತಯಾರಿ ನಡೆಯಲಿದೆ. ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರ ಮದುವೆ ನವೆಂಬರ್ 18 ರಂದು ವಾರಣಾಸಿ ತಾಜ್ ಹೋಟೆಲ್ನಲ್ಲಿ ಭರ್ಜರಿಯಾಗಿ ನಡೆಯಲಿದೆ. ಮದುವೆ ಕಾರಣದಿಂದ ರಿಂಕು ಸಿಂಗ್ ಅವರು ಟೀಮ್ ಇಂಡಿಯಾದ ಕೆಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ