ಇವತ್ತು ಸ್ಟಾರ್​ ಬ್ಯಾಟರ್​ ರಿಂಕು ಸಿಂಗ್ ನಿಶ್ಚಿತಾರ್ಥ.. ಹುಡುಗಿ ಯಾರು..?

author-image
Ganesh
Updated On
ಇವತ್ತು ಸ್ಟಾರ್​ ಬ್ಯಾಟರ್​ ರಿಂಕು ಸಿಂಗ್ ನಿಶ್ಚಿತಾರ್ಥ.. ಹುಡುಗಿ ಯಾರು..?
Advertisment
  • ಲಕ್ನೋದ ಪಂಚತಾರ ಹೋಟೆಲ್​ನಲ್ಲಿ ಕಾರ್ಯಕ್ರಮ
  • ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಜಯಾ ಬಚ್ಚನ್ ಭಾಗಿ
  • ನಿಶ್ಚಿತಾರ್ಥ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೋಟೆಲ್​ಗೆ ಭದ್ರತೆ

ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ನಿಶ್ಚಿತಾರ್ಥ ಇಂದು ನಡೆಯಲಿದೆ. ಲಕ್ನೋದ ಪಂಚತಾರಾ ಹೋಟೆಲ್ ಸೆಂಟ್ರಮ್‌ನ ಫಾಲ್ಕರ್ನ್ ಹಾಲ್‌ನಲ್ಲಿ ಶುಭಕಾರ್ಯ ನಡೆಯಲಿದೆ.

ನಿಶ್ಚಿತಾರ್ಥಕ್ಕೆ ಸಂಬಂಧಿಸಿ ಹೋಟೆಲ್‌ನಿಂದ ಕೆಲವು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಎಸ್‌ಪಿ ಸಂಸದೆ ಡಿಂಪಲ್ ಯಾದವ್ ಮತ್ತು ಜಯಾ ಬಚ್ಚನ್ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳು ಹಾಗೂ ಕ್ರಿಕೆಟರ್ಸ್​ ಉಪಸ್ಥಿತರಿರುತ್ತಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಿಶ್ಚಿತಾರ್ಥ ಆಗಿ ಎರಡೇ ದಿನಕ್ಕೆ ಟೀಂ ಇಂಡಿಯಾ ಡ್ಯೂಟಿಗೆ ಬಂದ ಸ್ಟಾರ್ ಕ್ರಿಕೆಟರ್..!

ನಿಶ್ಚಿತಾರ್ಥ ನಡೆಯುತ್ತಿರುವ ಬಗ್ಗೆ ಸಂಸದೆ ಪ್ರಿಯಾ ಸರೋಜ್ ತಂದೆ ಖಚಿತಪಡಿಸಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿವೆ. ಇವತ್ತಿನ ಕಾರ್ಯಕ್ರಮವು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎಂದಿದ್ದಾರೆ.

ನಿಶ್ಚಿತಾರ್ಥ ಸಮಾರಂಭಕ್ಕೆ ಬಿಗಿ ಭದ್ರತೆ ನೀಡಲಾಗಿದೆ. ವರದಿಗಳ ಪ್ರಕಾರ ಅತಿಥಿಗಳ ಪ್ರವೇಶಕ್ಕೆ ಬಾರ್‌ಕೋಡ್ ಸ್ಕ್ಯಾನಿಂಗ್ ಪಾಸ್ ನೀಡಲಾಗಿದೆ. ಖಾಸಗಿ ಭದ್ರತೆಯನ್ನೂ ನಿಯೋಜಿಸಲಾಗಿದೆ. ಮದುವೆಯು 2025, ನವೆಂಬರ್ 18 ರಂದು ವಾರಣಾಸಿಯ ತಾಜ್‌ ಹೋಟೆಲ್​ನಲ್ಲಿ ನಡೆಯಲಿದೆ.

ಸ್ನೇಹಿತರ ಮೂಲಕ ಭೇಟಿ

ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ರಾಜಕೀಯದಲ್ಲಿ ತುಂಬಾ ಸಕ್ರಿಯರು. ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿ. ರಿಂಕು ಸಿಂಗ್ ಕೂಡ ಅದ್ಭುತ ಕ್ರಿಕೆಟರ್. ಇವರಿಬ್ಬರು ನಡುವೆ ಸಂಬಂಧ ಕದುರಿದ್ದು ಹೇಗೆ ಎಂಬ ಚರ್ಚೆ ಚಾಲ್ತಿಯಲ್ಲಿದೆ. ಮೂಲಗಳ ಪ್ರಕಾರ, ಸ್ನೇಹಿತರ ಪರಿಚಯ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಬಗ್ಗೆ ಶಾಕಿಂಗ್ ನ್ಯೂಸ್​ ಕೊಟ್ಟ ಬಾಲಿವುಡ್ ಬ್ಯೂಟಿ.. ಮದುವೆ, ಮಕ್ಕಳು ಏನಿದು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment