/newsfirstlive-kannada/media/post_attachments/wp-content/uploads/2025/06/RINKU_SINGH.jpg)
ಟೀಮ್ ಇಂಡಿಯಾದ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯಂಗ್ ಪ್ಲೇಯರ್ ರಿಂಕು ಸಿಂಗ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಸಮಾಜವಾದಿ ಪಕ್ಷದ ಯುವ ಸಂಸದೆ ಆಗಿರುವ ಪ್ರಿಯಾ ಸರೋಜ್ ಅವರನ್ನು ರಿಂಕು ಸಿಂಗ್ ವರಿಸಲಿದ್ದಾರೆ. ಜೂನ್ 8ರಂದು ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಈ ಇಬ್ಬರಿಗೂ ಪರಿಚಯ ಆಗಿದ್ದು ಹೇಗೆ, ಆದರಂತೆ ಮದುವೆ ಯಾವಾಗ?.
ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಹಾಗೂ ರಿಂಕು ಸಿಂಗ್ ಅವರು ಮದುವೆ ಮಾಡಿಕೊಳ್ಳಲಿದ್ದಾರೆ. ಈ ಸುಂದರ ವಿವಾಹ ಸಮಾರಂಭಕ್ಕೂ ಮೊದಲೇ ಜೂನ್ 8 ರಂದು ಅದ್ಧೂರಿಯಾಗಿ ಲಕ್ನೋದ ಹೋಟೆಲ್‌ವೊಂದರಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ:RCB ಸ್ಟಾರ್ ವಿರಾಟ್ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಕೇಸ್.. ಆಗಿದ್ದೇನು?
ಈ ಸಮಾರಂಭಕ್ಕೆ ರಾಜಕೀಯ ಗಣ್ಯರು, ಕ್ರಿಕೆಟರ್ಸ್ ಹಾಗೂ ಸಿನಿಮಾ ನಟ, ನಟಿಯರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಈ ಜೋಡಿಯು ಜೂನ್ 8 ರಂದು ನಿಶ್ಚಿತಾರ್ಥ ಸಮಾರಂಭ ಮಾಡಿಕೊಂಡರೇ ಬರೋಬ್ಬರಿ 5 ತಿಂಗಳ ಬಳಿಕ ಅಂದರೆ ನವೆಂಬರ್ 18 ರಂದು ಇಬ್ಬರೂ ಎರಡು ಕುಟುಂಬಸ್ಥರು ಹಾಗೂ ಗುರು, ಹಿರಿಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ಯುವ ಸಂಸದೆಯಾಗಿರುವ ಪ್ರಿಯಾ ಸರೋಜ್ ಅವರ ಸ್ನೇಹಿತೆಯೊಬ್ಬರ ತಂದೆ ಕ್ರಿಕೆಟಿಗ ಆಗಿದ್ದಾರೆ. ಇವರಿಗೆ ರಿಂಕು ಸಿಂಗ್ ಅವರ ಪರಿಚಯ ಚೆನ್ನಾಗಿ ಇದೆ. ಈ ಬಗ್ಗೆ ಇಬ್ಬರ ಬಳಿಯೂ ಮಾತನಾಡಿದ್ದರು. ಬಳಿಕ ಪ್ರಿಯಾ ಅವರನ್ನು ರಿಂಕು ಸಿಂಗ್ಗೆ ಪರಿಚಯಿಸಿದರು. ಅಂದಿನಿಂದಲೂ ಇಬ್ಬರು ಪರಿಚಯ ಆಗಿದ್ದರು. ಫೋನ್ನಲ್ಲಿ ಮಾತನಾಡುವುದು, ಮೀಟ್ ಮಾಡುವುದು ಯಾರಿಗೂ ಗೊತ್ತಿಲ್ಲದಂತೆ ನಡೆದಿತ್ತು ಎನ್ನಲಾಗಿದೆ. ಈಗ ಮದುವೆ ದಿನಾಂಕ ಕೂಡ ಘೋಷಣೆ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ