/newsfirstlive-kannada/media/post_attachments/wp-content/uploads/2024/11/RINKU_SINGH-2.jpg)
ಟೀಮ್ ಇಂಡಿಯಾದ ಸ್ಟಾರ್ ಲೆಫ್ಟಿ ಬ್ಯಾಟರ್ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಯುವ ಪ್ಲೇಯರ್​ ರಿಂಕು ಸಿಂಗ್ ಒಂದೇ ರಾತ್ರಿಯಲ್ಲೇ ಫೇಮಸ್ ಆಗಿದ್ದರು. 2023ರಲ್ಲಿ ಯಶ್​ ದಯಾಳ್ ಬೌಲಿಂಗ್​ಗೆ 5 ಸಿಕ್ಸರ್​ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಸದ್ಯ ಈ ಯುವ ಪ್ಲೇಯರ್​ ಅನ್ನು ಕೆಕೆಆರ್​​ ಫ್ರಾಂಚೈಸಿ ಕೋಟಿ ಕೋಟಿ ಹಣ ನೀಡಿ ರಿಟೈನ್ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ರಿಂಕು ಸಿಂಗ್ ಐಷಾರಾಮಿ ಬಂಗಲೆ ಖರೀದಿಸಿ ಫ್ರಾಮಿಲಿ ಜೊತೆ ಫುಲ್ ಹ್ಯಾಪಿ ಆಗಿದ್ದಾರೆ.
ಉತ್ತರ ಪ್ರದೇಶದ ಅಲಿಗಢ್ ನಗರದ ಬಳಿ ಇರುವ ಓಝೋನ್ ಸಿಟಿಯಲ್ಲಿ ರಿಂಕು ಸಿಂಗ್ ಐಷಾರಾಮಿ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಈ ಬೃಹತ್​ ಬಂಗಲೆ 500 ಚದರ ಅಡಿ ಇದ್ದು ಒಟ್ಟು 3.5 ಕೋಟಿ ರೂಪಾಯಿಗಳನ್ನು ರಿಂಕು ಸಿಂಗ್ ಅವರು ನೀಡಿದ್ದಾರೆ. ಬಂಗಲೆ ಖರೀದಿಸಿದ ಸಂತಸದಲ್ಲಿದ್ದ ರಿಂಕು ಸಿಂಗ್ ಅವರು ತಮ್ಮ ಕುಟುಂಬದ ಜೊತೆ ದೊಡ್ಡ ಮನೆಗೆ ಆಗಮಿಸಿದ್ದಾರೆ.
ಇದನ್ನೂ ಓದಿ: IPL 2025 auction; ಮೊಟ್ಟ ಮೊದಲ ಬಾರಿ ಆಕ್ಷನ್​ಗೆ ಇಟಲಿ ಪ್ಲೇಯರ್ ಎಂಟ್ರಿ.. ಮೂಲ ಬೆಲೆ ಎಷ್ಟು ಲಕ್ಷ?
/newsfirstlive-kannada/media/post_attachments/wp-content/uploads/2024/11/RINKU_SINGH-3.jpg)
ರಿಂಕು ಸಿಂಗ್ ತಮ್ಮ ತುಂಬಿದ ಕುಟುಂಬದೊಂದಿಗೆ ಹೊಸ ಬಂಗಲೆಗೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಸಾಕಷ್ಟು ಬಡತನ ಎದುರಿಸಿ ಕ್ರಿಕೆಟ್​ ಕ್ಷೇತ್ರಕ್ಕೆ ಬಂದಿದ್ದ ರಿಂಕು ಸಿಂಗ್ ಕೊನೆಗೂ ಯಶಸ್ಸು ಕಂಡಿದ್ದಾರೆ. ಟೀಮ್ ಇಂಡಿಯಾ ಹಾಗೂ ಐಪಿಎಲ್​ನಲ್ಲಿ ಒಳ್ಳೆಯ ಬ್ಯಾಟರ್​ ಎಂದು ಗುರುತಿಸಿಕೊಂಡಿರುವ ರಿಂಕು ತಮ್ಮ ಅದ್ಭುತ ಪ್ರದರ್ಶನ ಮುಂದುವರೆಸಿದ್ದಾರೆ. ಹೀಗಾಗಿ ಈ ಸಲದ ರಿಟೈನ್ ವೇಳೆ ಕೆಕೆಆರ್​ ಫ್ರಾಂಚೈಸಿ 13 ಕೋಟಿ ರೂಪಾಯಿಗಳನ್ನು ರಿಂಕು ಸಿಂಗ್​ಗೆ ನೀಡಿದೆ.
ಇಷ್ಟು ದಿನದಿಂದ 55 ಲಕ್ಷ ರೂಪಾಯಿಗಳನ್ನು ಮಾತ್ರ ನೀಡುತ್ತಿದ್ದ ಕೆಕೆಆರ್ ಈ ಸಲ ಒಂದೇ ಬಾರಿಗೆ 13 ಕೋಟಿಗಳನ್ನು ರಿಂಕು ಸಿಂಗ್​ಗೆ ನೀಡಿದೆ. ಈ ಹಣದಿಂದಲೇ ಬಂಗಲೆ ಕೊಂಡುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲ ಅಭಿಮಾನಿಗಳು ರಿಂಕುಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us