newsfirstkannada.com

ವಿಶ್ವಕಪ್ ಕನಸು ನುಚ್ಚುನೂರು.. ರಿಂಕುಗೆ ವಿಶ್ವಕಪ್ ಟಿಕೆಟ್​ ಮಿಸ್ ಆಗಿದ್ದೇಕೆ..?

Share :

Published May 3, 2024 at 1:40pm

    ಕಾನ್ಫಿಡೆಂಟ್​ನಲ್ಲಿದ್ದ ರಿಂಕುಗೆ ಶಾಕ್ ಕೊಟ್ಟ ಸೆಲೆಕ್ಟರ್ಸ್​

    ಟಿ-20 ವಿಶ್ವಕಪ್​​ಗೆ ಬಲಿಷ್ಠ ತಂಡ ಪ್ರಕಟಿಸಿರುವ ರಿಂಕು ಸಿಂಗ್

    ಕುಗ್ಗದಿರು ರಿಂಕು.. ಮರಳಿ ಯತ್ನವ ಮಾಡು ರಿಂಕು..

ಎಲ್ಲಾ ಕ್ರಿಕೆಟಿಗರ ಅಂತಿಮ ಗುರಿ ಒಂದೇ. ಒಮ್ಮೆಯಾದ್ರು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ದೇಶವನ್ನ ಪ್ರತಿನಿಧಿಸಬೇಕು ಅನ್ನೋದು. ಅಂತಹದೇ ಮಹಾದಾಸೆಯನ್ನ ಯಂಗ್​ ಫಿನಿಶರ್​​​ ರಿಂಕು ಸಿಂಗ್ ಹೊಂದಿದ್ರು. ಅವರ ಟಿ20 ವಿಶ್ವಕಪ್​​​ ಕನಸಿಗೆ ಬಿಸಿಸಿಐ ಕೊಳ್ಳಿಯಿಟ್ಟಿದೆ. 15ರ ಬಳಗದಿಂದ ರಿಂಕು ಸಿಂಗ್​ ಹೆಸರನ್ನ ಕೈಬಿಡಲಾಗಿದ್ದು, ಅಮೆರಿಕಾಗೆ ಫ್ಲೈಟ್​ ಏರುವ ಬಿಗ್ ಡ್ರೀಮ್ ನುಚ್ಚುನೂರಾಗಿದೆ.

ರಿಂಕುಗೆ ವಿಶ್ವಕಪ್ ಟಿಕೆಟ್​ ಮಿಸ್ ಆಗಿದ್ದೇಕೆ..?
ರಿಂಕು ಸಿಂಗ್​ಗೆ ಟಿಕೆಟ್​ ಮಿಸ್ಸಾಗಲು ಪ್ರಮುಖ ಕಾರಣವೇ ಶಿವಂ ದುಬೆ. ಸೆಲೆಕ್ಟನ್ ಕಮಿಟಿ ಸಭೆಯಲ್ಲಿ ಇಬ್ಬರ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಶಿವಂ ದುಬೆ ಆಲ್​ರೌಂಡರ್​​. ಬ್ಯಾಟಿಂಗ್ ಜೊತೆ ಬೌಲಿಂಗ್​ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಆದರೆ ರಿಂಕು ಬ್ಯಾಟಿಂಗ್​​​ನಲ್ಲಿ ಮಾತ್ರ ಕಾಂಟ್ರಿಬ್ಯೂಟ್ ನೀಡಬಲ್ಲರು. ಹೀಗಾಗಿ ಸೆಲೆಕ್ಟರ್ಸ್​ ರಿಂಕು ಸಿಂಗ್​ರನ್ನ ಕೈಬಿಟ್ಟು, ಶಿವಂ ದುಬೆಗೆ ಮಣೆ ಹಾಕಿದ್ದಾರೆ. ಆದರೆ ಟಿ20 ಪರ್ಫಾಮೆನ್ಸ್ ವಿಚಾರಕ್ಕೆ ಬರೋದಾದ್ರೆ ಶಿವಂ ದುಬೆಗಿಂತ ರಿಂಕು ಸಿಂಗ್​ ಸ್ಟ್ಯಾಟ್ಸ್ ಅದ್ಭುತವಾಗಿದೆ.

ಇದನ್ನೂ ಓದಿ:ಕ್ಯಾಪ್ಟನ್ಸಿಯಿಂದ ಕೊಕ್.. ಕೊನೆಗೂ ಮೌನ ಮುರಿದು ಖಡಕ್ ಉತ್ತರ ಕೊಟ್ಟ ರೋಹಿತ್ ಶರ್ಮಾ..!

ರಿಂಕು ಸಿಂಗ್​​​​​-ದುಬೆ ಟಿ20 ಕ್ರಿಕೆಟ್ ಸಾಧನೆ
ರಿಂಕು ಸಿಂಗ್​​ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 15 ಪಂದ್ಯಗಳನ್ನಾಡಿದ್ದಾರೆ. 89 ಎವರೇಜ್​ನಲ್ಲಿ 356 ರನ್ ಬಾರಿಸಿದ್ದಾರೆ. ಶಿವಂ ದುಬೆ 21 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು 39.42 ಎವರೇಜ್​ನಲ್ಲಿ 276 ರನ್​​​ ಕಲೆಹಾಕಿದ್ದು 8 ವಿಕೆಟ್​ ಬೇಟೆಯಾಡಿದ್ದಾರೆ.
ಸದ್ಯ ಟಿ20 ವಿಶ್ವಕಪ್​ ಟಿಕೆಟ್​ ಮಿಸ್ ಆಗಿದ್ದಕ್ಕೆ ರಿಂಕು ಸಿಂಗ್​​​​​ಗೆ ಬೇಸರ ಆಗಿರೋದಂತೂ ನಿಜ. ಹಾಗಂತ ಧೃತಿಗೆಡಬೇಕಿಲ್ಲ. ಯಾಕಂದ್ರೆ ಫೈರಿ ಲೆಫ್ಟ್​ ಹ್ಯಾಂಡ್ ಬ್ಯಾಟರ್​ಗೆ ಈಗಿನ್ನೂ ಬರೀ 26 ವರ್ಷ. ಭವಿಷ್ಯದಲ್ಲಿ ಅನೇಕ ಟಿ20 ವಿಶ್ವಕಪ್​​ಗಳನ್ನ ಟೂರ್ನಿಗಳನ್ನ ಆಡಬಹುದು. ತಾಳ್ಮೆ ವಹಿಸಿ ಭರವಸೆಯಿಂದ ಮುನ್ನುಗ್ಗಬೇಕಷ್ಟೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮೀನು ತಿಂದು ಇಬ್ಬರು ಸಾವು.. ಗ್ರಾಮದ 15 ಮಂದಿ ಅಸ್ವಸ್ಥ, ಭಾರೀ ಆತಂಕ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್ ಕನಸು ನುಚ್ಚುನೂರು.. ರಿಂಕುಗೆ ವಿಶ್ವಕಪ್ ಟಿಕೆಟ್​ ಮಿಸ್ ಆಗಿದ್ದೇಕೆ..?

https://newsfirstlive.com/wp-content/uploads/2024/05/RINKU-SING.jpg

Load More