ರಿಂಕು ಸಿಂಗ್ ಓದಿದ್ದು 9ನೇ ತರಗತಿ.. ಆದರೂ ಬೇಸಿಕ್ ಶಿಕ್ಷಣ ಅಧಿಕಾರಿಯಾಗಿ ನೇಮಕ!

author-image
Bheemappa
Updated On
ರಿಂಕು ಸಿಂಗ್ ಓದಿದ್ದು 9ನೇ ತರಗತಿ.. ಆದರೂ ಬೇಸಿಕ್ ಶಿಕ್ಷಣ ಅಧಿಕಾರಿಯಾಗಿ ನೇಮಕ!
Advertisment
  • ಬೇಸಿಕ್ ಶಿಕ್ಷಣ ಅಧಿಕಾರಿಯಾಗಿ ಆಗಬೇಕೆಂದರೆ ಅರ್ಹತೆಗಳೇನು?
  • 9ನೇ ತರಗತಿ ಓದಿದ್ದ ರಿಂಕು ಸಿಂಗ್ ಈಗ ಬೇಸಿಕ್ ಶಿಕ್ಷಣ ಅಧಿಕಾರಿ
  • ರಿಂಕು ಸಿಂಗ್ ನೇಮಕದ ಬಗ್ಗೆ ಅಧಿಕಾರಿಗಳು ಕೊಟ್ಟ ಸ್ಪಷ್ಟನೆ ಏನು?

ಟೀಮ್ ಇಂಡಿಯಾದ ಹಾಗೂ ಐಪಿಎಲ್​​​ನ ಕೋಲ್ಕತ್ತ ನೈಟ್​ ರೈಡರ್ಸ್​ ತಂಡದ ಯುವ ಆಟಗಾರ ರಿಂಕು ಸಿಂಗ್ ಅವರು ಪಾಸ್ ಆಗಿರುವುದೇ 9ನೇ ತರಗತಿ. ಆದರೆ ರಿಂಕು ಸಿಂಗ್​​ರನ್ನು ಉತ್ತರಪ್ರದೇಶದ ಬೇಸಿಕ್ ಶಿಕ್ಷಣ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಹೈಸ್ಕೂಲ್ ಶಿಕ್ಷಣ ಓದಿಲ್ಲ

ನಿಯಮಗಳ ಪ್ರಕಾರ, ಬೇಸಿಕ್ ಶಿಕ್ಷಣ ಅಧಿಕಾರಿಯಾಗಿ ನೇಮಕ ಆಗಬೇಕಾದರೇ, ಕನಿಷ್ಠ ವಿದ್ಯಾರ್ಹತೆ ಪದವಿ ಪಡೆದಿರಬೇಕು. 21 ವರ್ಷದಿಂದ 40 ವರ್ಷದ ಒಳಗಿನವರಾಗಿರಬೇಕು. ಆದರೇ, ರಿಂಕು ಸಿಂಗ್ ಪದವಿಯನ್ನು ಪಡೆದಿಲ್ಲ, ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಿಯೇ ಇಲ್ಲ. ಆದರೇ, ರಿಂಕ್ ಸಿಂಗ್ ರನ್ನು ಬೇಸಿಕ್ ಶಿಕ್ಷಣ ಅಧಿಕಾರಿಯಾಗಿ ನೇಮಿಸಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಬಹುದು. ಉತ್ತರ ಪ್ರದೇಶ ಸರ್ಕಾರವು ರಿಂಕು ಸಿಂಗ್​​ರನ್ನು ಇಂಟರ್ ನ್ಯಾಷನಲ್ ಮೆಡಲ್ ವಿನ್ನರ್ ನೇರ ನೇಮಕಾತಿಯ ರೂಲ್ಸ್ 2002ರಡಿ ಇಟ್ಟು ಪರಿಗಣಿಸಿದೆ. ಹೀಗಾಗಿ ರಿಂಕು ಸಿಂಗ್​​ರನ್ನು ಬೇಸಿಕ್ ಶಿಕ್ಷಣ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

publive-image

ಕಲ್ಯಾಣ ಯೋಜನೆಗಳ ಬ್ರಾಂಡ್ ಅಂಬಾಸಿಡರ್ ರಿಂಕು ಸಿಂಗ್

ರಿಂಕು ಸಿಂಗ್ ಕರಿಯರ್ ಈಗ ಹೊಸ ಎತ್ತರಕ್ಕೆ ಏರುತ್ತಿದೆ. ಸಮಾಜವಾದಿ ಪಕ್ಷದ ಲೋಕಸಭಾ ಸದಸ್ಯೆ ಪ್ರಿಯಾ ಸರೋಜ್ ಜೊತೆ ಎಂಗೇಜ್​​ಮೆಂಟ್ ಮಾಡಿಕೊಂಡ ಬಳಿಕ ರಿಂಕುಸಿಂಗ್ ಅದೃಷ್ಟವೇ ಬದಲಾಗುತ್ತಿದೆ. ಉತ್ತರ ಪ್ರದೇಶ ರಾಜ್ಯ ಸರ್ಕಾರವು ಇಂಟರ್ ನ್ಯಾಷನಲ್ ಅಥ್ಲೆಟ್​​ಗಳನ್ನು ಸಾರ್ವಜನಿಕ ಸೇವೆಯಲ್ಲಿ ಪ್ರತಿಷ್ಠಿತ ಹುದ್ದೆಗಳಿಗೆ ನೇಮಿಸುವ ಮೂಲಕ ಗೌರವ ನೀಡುವ ನೀತಿಯನ್ನು ಹೊಂದಿದೆ. ಹೀಗಾಗಿ ರಿಂಕು ಸಿಂಗ್​ರನ್ನು ಬೇಸಿಕ್ ಶಿಕ್ಷಣಾ ಅಧಿಕಾರಿ ಹುದ್ದೆಗೆ ನೇಮಿಸಲಾಗಿದೆ. ರಿಂಕು ಸಿಂಗ್ ರೀತಿಯ ಇನ್ನೂ 7 ಮಂದಿ ಅಥ್ಲೆಟ್​ಗಳನ್ನು ಇದೇ ರೀತಿಯ ಹುದ್ದೆಗೆ ನೇಮಿಸಲಾಗಿದೆ. ಈ ನೇಮಕಗಳನ್ನು ರಾಜ್ಯದ ಯುವಜನತೆಗೆ ಸ್ಪೂರ್ತಿ ನೀಡಲು ಹಾಗೂ ಸಮಾಜಕ್ಕೆ ಕೊಡುಗೆ ನೀಡಲು ಪೋತ್ಸಾಹಿಸುವ ಉದ್ದೇಶದಿಂದ ಮಾಡಲಾಗಿದೆ. ರಿಂಕು ಸಿಂಗ್ ಈಗ ಸಾರ್ವಜನಿಕ ಕಲ್ಯಾಣ ಯೋಜನೆಗಳ ಬ್ರಾಂಡ್ ಅಂಬಾಸಿಡರ್ ಆಗಿಯೂ ಕಾರ್ಯನಿರ್ವಹಿಸುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೇಸಿಕ್ ಶಿಕ್ಷಣಾ ಅಧಿಕಾರಿಯಾಗಿ ತಮ್ಮ ಜಿಲ್ಲೆಯಲ್ಲಿ ರಿಂಕು ಸಿಂಗ್ 1-5 ನೇ ತರಗತಿವರೆಗಿನ ಶಾಲೆಗಳ ಮೇಲುಸ್ತುವಾರಿ ಕೆಲಸ ನಿರ್ವಹಿಸುವರು. ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ವರದಿ ಮಾಡಿಕೊಳ್ಳುವರು. ರಿಂಕು ಸಿಂಗ್ ಅಡಿಯಲ್ಲಿ ಬ್ಲಾಕ್ ಎಜುಕೇಷನ್ ಆಫೀಸರ್, ಸ್ಕೂಲ್ ಇನ್ಸ್ ಪೆಕ್ಟರ್ ಗಳು ಇರುತ್ತಾರೆ. ಶಿಕ್ಷಕರ ಕಾರ್ಯನಿರ್ವಹಣೆಯನ್ನು ಪರಿಶೀಲಿಸುತ್ತಾರೆ. ರಿಂಕು ಸಿಂಗ್ 9ನೇ ತರಗತಿವರೆಗೆ ಮಾತ್ರ ಓದಿದ್ದರೂ, ಪದವಿ ಪಡೆಯಲು 7 ವರ್ಷ ಕಾಲಾವಕಾಶ ನೀಡಲಾಗಿದೆ. ರಿಂಕು ಸಿಂಗ್ ಗ್ರೂಪ್- ಎ ಗೆಜೆಟೆಡ್ ಅಧಿಕಾರಿಯಾಗಿದ್ದು, ತಿಂಗಳಿಗೆ 70 ರಿಂದ 90 ಸಾವಿರ ರೂಪಾಯಿ ಸಂಬಳ, ಎಚ್‌ಆರ್‌ಎ, ಮೆಡಿಕಲ್ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ.

ಇದನ್ನೂ ಓದಿ:ಜೀವನದಲ್ಲಿ ಕೆಟ್ಟ ನಿರ್ಧಾರ ತೆಗೆದುಕೊಂಡೆ.. ಯುವ ಕ್ರಿಕೆಟರ್ ಪೃಥ್ವಿ ಶಾಗೆ ಈಗ ಜ್ಞಾನೋದಯ..!

publive-image

ಆರ್ಥಿಕ ಸಂಕಷ್ಟದಿಂದ ಶಾಲೆ ಬಿಟ್ಟಿದ್ದ ರಿಂಕು

ಜೀವನದಲ್ಲಿ ರಿಂಕು ಸಿಂಗ್ ಬೆಳವಣಿಗೆಯೇ ಸ್ಪೂರ್ತಿದಾಯಕವಾಗಿದೆ. ಅಲಿಘಡ ಜಿಲ್ಲೆಯಲ್ಲಿ ಸಾಧಾರಣ ಕುಟುಂಬದಲ್ಲಿ ಹುಟ್ಟಿದ ರಿಂಕು ಸಿಂಗ್, ತಂದೆ ಸಿಲಿಂಡರ್ ಡೆಲಿವರಿ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಕೂಡ ತಂದೆಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಆರ್ಥಿಕ ಸಂಕಷ್ಟದಿಂದ ರಿಂಕು ಸಿಂಗ್ 9ನೇ ತರಗತಿಗೆ ಶಾಲೆ ಬಿಟ್ಟರು. ಕ್ರಿಕೆಟ್ ಮೇಲಿನ ಪ್ರೀತಿ, ಬದ್ಧತೆಯಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ರಿಂಕು ಸಿಂಗ್- ಸಂಸದೆ ಪ್ರಿಯಾ ಸರೋಜ್ ಮದುವೆಯನ್ನು ಕೆಲ ತಿಂಗಳ ಕಾಲ ಮುಂದೂಡಲಾಗಿದೆ. ರಿಂಕು ಸಿಂಗ್ ಬೇರೆ ಬೇರೆ ಕ್ರಿಕೆಟ್ ಟೂರ್ನಿಗಳಲ್ಲಿ ಬ್ಯುಸಿಯಾಗಿರುವ ಕಾರಣದಿಂದ ಪ್ರಿಯಾ ಸರೋಜ್ ಜೊತೆಗಿನ ಮದುವೆಯನ್ನು ಕೆಲ ತಿಂಗಳ ಕಾಲ ಮುಂದೂಡಲಾಗಿದೆ. 2026ರ ಫೆಬ್ರುವರಿಯಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕುಟುಂಬಸ್ಥರು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment