/newsfirstlive-kannada/media/post_attachments/wp-content/uploads/2025/04/Rinku-singh.jpg)
ನಿನ್ನೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬೊಂಬಾಟ್ ಆಟವಾಡಿತು. ಬ್ಯಾಟಿಂಗ್, ಬೌಲಿಂಗ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ ಕೆಕೆಆರ್, ಸನ್ರೈಸರ್ಸ್ ಹೈದ್ರಾಬಾದ್ಗೆ ಸೋಲಿನ ಶಾಕ್ ನೀಡ್ತು. ಹೈದ್ರಾಬಾದ್ ಪಡೆಯ ಸ್ಫೋಟಕ ಬ್ಯಾಟ್ಸ್ಮನ್ಗಳ ಕೆಕೆಆರ್ ಬೌಲರ್ಸ್ ಖೆಡ್ಡಾಗೆ ಕೆಡವಿದ್ದು ಹೇಗೆ?
ಹೋಮ್ಗ್ರೌಂಡ್ ಈಡನ್ ಗಾರ್ಡನ್ನಲ್ಲಿ ಮೊದಲು ಬ್ಯಾಟಿಂಗ್ಗಿಳಿದ ಕೊಲ್ಕತ್ತಾ ನೈಟ್ ರೈಡರ್ಸ್ ಮೇಲೆ ಸನ್ರೈಸರ್ಸ್ ಹೈದ್ರಾಬಾದ್ ಬೌಲರ್ಸ್ ರೈಡ್ ಮಾಡಿದ್ರು. ಕೆಕೆಆರ್ ಓಪನರ್ಸ್ಗೆ ಸೆಟಲ್ ಆಗೋಕೆ ಬಿಡಲಿಲ್ಲ. ಕ್ವಿಂಟನ್ ಡಿಕಾಕ್, ಸುನೀಲ್ ನರೇನ್ ಸೈಲೆಂಟಾಗಿ ಪೆವಿಲಿಯನ್ ಸೇರಿದ್ರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಬೆರಳಿಗೆ ಗಾಯ.. ಅಭಿಮಾನಿಗಳ ಆತಂಕಕ್ಕೆ RCB ಕೋಚ್ ಉತ್ತರ..!
ಕ್ಯಾಪ್ಟನ್ ಅಂಜಿಕ್ಯಾ ರಹಾನೆ-ಅಂಗ್ಕ್ರಿಶ್ ರಘುವಂಶಿ ಎಚ್ಚರಿಕೆಯ ಆಟದ ಮೊರೆ ಹೋದ್ರು. 4 ಸಿಕ್ಸರ್ಗಳನ್ನ ಸಿಡಿಸಿದ ರಹಾನೆ ತಂಡಕ್ಕೆ ಚೇತರಿಕೆ ನೀಡಿದ್ರು. ಅಂಗ್ಕ್ರಿಶ್ ರಹಾನೆಗೆ ಸಾಥ್ ನೀಡಿದ್ರು. 81 ಜೊತೆಯಾಟವಾಡಿದ ಈ ಜೋಡಿ ಆಘಾತ ಕಂಡಿದ್ದ ತಂಡಕ್ಕೆ ಚೇತರಿಕೆ ನೀಡಿದ್ರು.
ರಹಾನೆ 38 ರನ್ಗಳಿಸಿ ಔಟಾದ್ರೆ ಅಂಗ್ಕ್ರಿಶ್ ಅರ್ಧಶತಕ ಪೂರೈಸಿ ಪೆವಿಲಿಯನ್ ಸೇರಿದ್ರು, ಆ ಬಳಿಕ ಕ್ರಿಸ್ನಲ್ಲಿ ಜೊತೆಯಾದ ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಸ್ಪೋಟಕ ಆಟವಾಡಿದ್ರು. ಬೌಂಡರಿ-ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿದ್ರು. ಹೈದ್ರಾಬಾದ್ ಬೌಲರ್ಗಳನ್ನ ನಿರ್ಧಯವಾಗಿ ದಂಡಿಸಿ ಆರ್ಭಟಿಸಿದ್ರು. ವೆಂಕಟೇಶ್ ಅಯ್ಯರ್ 25 ಎಸೆತಗಳಲ್ಲೇ ಹಾಫ್ ಸೆಂಚುರಿ ಸಿಡಿಸಿದರು.
7 ಬೌಂಡರಿ, 3 ಸಿಕ್ಸರ್ ಸಹಿತ 60 ರನ್ಗಳಿಸಿ ವೆಂಕಟೇಶ್ ಅಯ್ಯರ್ ಔಟಾದ್ರು. 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 32 ರನ್ಗಳಿಸಿದ ರಿಂಕು ಸಿಂಗ್ ಅಜೇಯರಾಗುಳಿದ್ರು. ಅಂತಿಮ ಹಂತದಲ್ಲಿ ಇವರಿಬ್ಬರು ಆಡಿದ ಸ್ಫೋಟಕ ಆಟದ ನೆರವಿನಿಂದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 200 ರನ್ಗಳ ಬಿಗ್ಸ್ಕೋರ್ ಕಲೆ ಹಾಕಿತು.
ಇದನ್ನೂ ಓದಿ: ಅಬ್ ಕಿ ಬಾರ್ 300 ಎಂದ ತಂಡಕ್ಕೆ ಹ್ಯಾಟ್ರಿಕ್ ಸೋಲು.. IPL ಇತಿಹಾಸದಲ್ಲಿ ಕೆಟ್ಟ ದಾಖಲೆ..!
201 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಹೈದ್ರಾಬಾದ್ ಪಡೆ ಕೆಕೆಆರ್ನ ಬೆಂಕಿ ಬೌಲಿಂಗ್ಗೆ ನಲುಗಿತು. ಸನ್ರೈಸರ್ಸ್ ಹೈದ್ರಾಬಾದ್ ಪಡೆಯ ಬ್ಯಾಟ್ಸ್ಮನ್ಗಳೆಲ್ಲಾ ಸೈಲೆಂಟಾದ್ರು. ವೈಭವ್ ಅರೋರಾ, ಹರ್ಷಿತ್ ರಾಣಾ ಪವರ್ಫುಲ್ ಸ್ಪೆಲ್ ಹಾಕಿದ್ರು. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಸಿಂಗಲ್ ಡಿಜಿಟ್ ಗಡಿಯನ್ನೂ ದಾಟಲಿಲ್ಲ.
ಎಚ್ಚರಿಕೆಯ ಆಟವಾಡ್ತಿದ್ದ ನಿತೀಶ್ ಕುಮಾರ್ ರೆಡ್ಡಿ, ಕಮಿಂಡು ಮೆಂಡೀಸ್ ಆಟಕ್ಕೆ ಕೆರಬಿಯನ್ ಕಲಿಗಳು ಬ್ರೇಕ್ ಹಾಕಿದ್ರು. ರಸೆಲ್ ನಿತೀಶ್ ರೆಡ್ಡಿ ವಿಕೆಟ್ ಕಬಳಿಸಿದ್ರೆ, ಮೆಂಡೀಸ್ ನರೇನ್ ಮೋಡಿಗೆ ಬಲಿಯಾದ್ರು. ಅನಿಕೇತ್ ವರ್ಮಾ ಹೀಗೆ ಬಂದು ಹಾಗೆ ಹೋದ್ರು. ಕ್ರಿಸ್ ಕಚ್ಚಿ ನಿಂತು ಹೋರಾಟ ನಡೆಸಿದ ಹೆನ್ರಿಚ್ ಕ್ಲಾಸೆನ್ ಆಟವೂ 33 ರನ್ಗಳಿಗೆ ಅಂತ್ಯವಾಯ್ತು.
ನಾಯಕ ಪ್ಯಾಟ್ ಕಮಿನ್ಸ್, ಸಿಮರ್ಜೀತ್ ಸಿಂಗ್ ವರುಣ್ ಚಕ್ರವರ್ತಿಯ ಸ್ಪಿನ್ ಖೆಡ್ಡಾಗೆ ಬಿದ್ರು. ಹರ್ಷಲ್ ಪಟೇಲ್ ಆ್ಯಂಡ್ರೆ ರಸೆಲ್ಗೆ ಬಲಿಯಾದ್ರು. ಇದ್ರೊಂದಿಗೆ ಹೈದ್ರಾಬಾದ್ ಆಲೌಟ್ ಆಯ್ತು. ಕೇವಲ 120 ರನ್ಗಳಿಗೆ ಆಲೌಟ್ ಆದ ಸನ್ರೈಸರ್ಸ್ ಹೈದ್ರಾಬಾದ್ ಹೀನಾಯ ಸೋಲಿಗೆ ಶರಣಾಯ್ತು. 80 ರನ್ಗಳ ಅಂತರದ ಭರ್ಜರಿ ಜಯ ಸಾಧಿಸಿದ ಕೆಕೆಆರ್ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೇರಿದ್ರೆ, ಸನ್ರೈಸರ್ಸ್ ಕೊನೆ ಸ್ಥಾನಕ್ಕೆ ಕುಸಿಯಿತು.
ಇದನ್ನೂ ಓದಿ: ಸುದೀಪ್, ಜಗ್ಗೇಶ್ ಜೊತೆ ಕಿರಿಕ್.. ಸ್ಯಾಂಡಲ್ವುಡ್ ನಿರ್ಮಾಪಕ M.N ಕುಮಾರ್ ಬಂಧನ; ಏನಿದು ಕೇಸ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ