newsfirstkannada.com

ರಿಂಕು ಸಿಂಗ್​ಗೆ ಕೆಕೆಆರ್ ಬಿಗ್ ಶಾಕ್.. RCB ಹೆಸರು ಕನವರಿಸಿದ ರಿಂಕು ಸಿಂಗ್..!

Share :

Published August 19, 2024 at 9:26am

Update August 19, 2024 at 1:21pm

    ಬ್ಯಾಟ್ಸ್​ಮನ್ ರಿಂಕು ಸಿಂಗ್​ ಅವರನ್ನು ಕೆಕೆಆರ್ ಕೈಬಿಡುವ ಸಾಧ್ಯತೆ

    2018ರಲ್ಲಿ 80 ಲಕ್ಷಕ್ಕೆ ಖರೀದಿ ಮಾಡಿತ್ತು, ಮುಂದೆ ಆಗಿದ್ದೇ ಬೇರೆ

    ವಿರಾಟ್ ಕೊಹ್ಲಿ ಜೊತೆ ಉತ್ತಮ ಒಡನಾಟ ಹೊಂದಿರುವ ರಿಂಕು

ಸಿಕ್ಸರ್ ಕಿಂಗ್ ರಿಂಕು ಸಿಂಗ್ 2018ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ರಿಂಕು ಕೋಲ್ಕತ್ತ ನೈಟ್​ ರೈಡರ್ಸ್ ಪರ ಆಡುತ್ತಿದ್ದಾರೆ. ಡಿಸೆಂಬರ್​ನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯೋದ್ರಿಂದ ಫ್ರಾಂಚೈಸಿಗಳು ತಂಡದಲ್ಲಿ ಸೀಮಿತ ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ.

ಹೀಗಾಗಿ ಕೆಕೆಆರ್​ನಿಂದ ರಿಂಕು ಸಿಂಗ್​ರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಕೆಕೆಆರ್​ನಿಂದ ರಿಂಕು ಸಿಂಗ್ ಬೇರ್ಪಟ್ಟರೆ ಮುಂದೆ ತಾವು ಯಾವ ತಂಡವನ್ನು ಸೇರಿಕೊಳ್ಳಲು ಇಷ್ಟಪಡ್ತೀನಿ ಎಂದು ತಿಳಿಸಿದ್ದಾರೆ. ಸ್ಪೋರ್ಟ್ಸ್ ಟಾಕ್‌ನೊಂದಿಗೆ ಮಾತನಾಡಿರುವ ರಿಂಕು.. ಕೋಲ್ಕತ್ತಾ ನನ್ನನ್ನು ಉಳಿಸಿಕೊಳ್ಳದಿದ್ದರೆ ಐಪಿಎಲ್-2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಲು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:ಕಾರ್ತಿಕ್ ಬದುಕಲ್ಲಿ ಒಂದು ರಾತ್ರಿ ನಡೆದಿತ್ತು ಭಯಾನಕ ಅಚ್ಚರಿ.. ಬೆಚ್ಚಿಬಿದ್ದಿದ್ದ ಸ್ಟೋರಿ ರಿವೀಲ್..!

ಆರ್‌ಸಿಬಿ ಇನ್ನೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಆದರೂ ನಾನು ಆ ತಂಡವನ್ನು ಬಹಳ ಇಷ್ಟಪಟ್ಟಿದ್ದೇನೆ ಎಂದು ರಿಂಕು ಹೇಳಿದ್ದಾರೆ. ರಿಂಕು ಸಿಂಗ್ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. 2024ರ ಐಪಿಎಲ್​ನಲ್ಲಿ ರಿಂಕು, ಕೊಹ್ಲಿಯಿಂದ ಬ್ಯಾಟ್ ಕೇಳಿ ಸುದ್ದಿಯಾಗಿದ್ದರು.

ಕೋಲ್ಕತ್ತಾ ರಿಂಕುವನ್ನು ಉಳಿಸಿಕೊಳ್ಳುವುದಿಲ್ಲವೇ?
2018ರಲ್ಲಿ ಕೋಲ್ಕತ್ತಾ ಫ್ರಾಂಚೈಸಿ ರಿಂಕು ಸಿಂಗ್ ಅವರನ್ನು 80 ಲಕ್ಷ ರೂಪಾಯಿಗೆ ಖರೀದಿಸಿತ್ತು. ಅಂದಿನಿಂದ ರಿಂಕು ಕೆಕೆಆರ್​ ಪರ ಆಡುತ್ತಿದ್ದಾರೆ. 2022ರ ಮೆಗಾ ಹರಾಜಿನಲ್ಲಿ, ಅವರ ಬೆಲೆ ಸ್ವಲ್ಪ ಕಡಿಮೆ ಆಗಿದೆ. KKR ಅವರನ್ನು 55 ಲಕ್ಷಕ್ಕೆ ಖರೀದಿ ಮಾಡಿತ್ತು. ರಿಂಕು ಇಲ್ಲಿಯವರೆಗೆ 45 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 40 ಇನ್ನಿಂಗ್ಸ್‌ಗಳಲ್ಲಿ 30.79 ಸರಾಸರಿ ಮತ್ತು 143.34 ಸ್ಟ್ರೈಕ್ ರೇಟ್‌ನಲ್ಲಿ 893 ರನ್ ಗಳಿಸಿದ್ದಾರೆ. 4 ಅರ್ಧ ಶತಕ ಕೂಡ ಸೇರಿದ್ದು, 67 ಅತ್ಯಧಿಕ ರನ್ ಆಗಿದೆ.

ಇದನ್ನೂ ಓದಿ:‘ಫಸ್ಟ್ ಟೈಂ ನಿನ್ನ ನೋಡಿದಾಗ..’ ಸೂರ್ಯನ ಸಕ್ಸಸ್ ಹಿಂದೆ ನಾರಿ ಶಕ್ತಿ ಮತ್ತು ಪ್ರೀತಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಿಂಕು ಸಿಂಗ್​ಗೆ ಕೆಕೆಆರ್ ಬಿಗ್ ಶಾಕ್.. RCB ಹೆಸರು ಕನವರಿಸಿದ ರಿಂಕು ಸಿಂಗ್..!

https://newsfirstlive.com/wp-content/uploads/2023/06/RINKU_SINGH-1.jpg

Load More