/newsfirstlive-kannada/media/post_attachments/wp-content/uploads/2025/06/RINKU_WEDDING.jpg)
ಟೀಮ್ ಇಂಡಿಯಾದ ಯುವ ಬ್ಯಾಟರ್ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಯುವ ಸಂಸದೆ ಪ್ರಿಯಾ ಸರೋಜ್ ಅವರ ಮದುವೆ ದಿನವನ್ನ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದೇ ಜೂನ್ 8ರಂದು ಟೀಮ್ ಇಂಡಿಯಾದ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯಂಗ್ ಪ್ಲೇಯರ್ ರಿಂಕು ಸಿಂಗ್ ಹಾಗೂ ಸಂಸದೆ ಪ್ರಿಯಾ ಸರೋಜ್ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಉತ್ತರ ಪ್ರದೇಶದ ಲಕ್ನೋ ನಗರದ ಫೈವ್ ಸ್ಟಾರ್ ಹೋಟೆಲ್ ಸೆಂಟ್ರಮ್ನಲ್ಲಿ ಎಂಗೇಜ್ಮೆಂಟ್ ಅದ್ಧೂರಿಯಾಗಿ ನೆರವೇರಿತ್ತು. ಇದರ ಬೆನ್ನಲ್ಲೇ ಈ ಜೋಡಿ ನವೆಂಬರ್ 19 ರಂದು ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ:ರೋಹಿತ್ ಶರ್ಮಾ, ರಿತಿಕಾಗೆ ಪ್ರಪೋಸ್ ಮಾಡಿದ್ದೇಗೆ.. ಈ ಸೀನ್ ಯಾವ ಮೂವಿಗೂ ಕಡಿಮೆ ಇಲ್ಲ!
ಆದರೆ ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಅವರ ಮದುವೆ ದಿನಾಂಕ ಈಗ ಮುಂದೂಡಲಾಗಿದೆ. ರಿಂಕು ಸಿಂಗ್ ಅವರು ಟೀಮ್ ಇಂಡಿಯಾದಲ್ಲಿ ಆಡುತ್ತಿರುವುದರಿಂದ ನವೆಂಬರ್ನಲ್ಲಿ ಕೆಲ ಪಂದ್ಯಗಳಲ್ಲಿ ಭಾಗವಹಿಸಬೇಕಾಗಿದೆ. ಕ್ರಿಕೆಟ್ ಕಮಿಟ್ಮೆಂಟ್ಸ್ ಇದ್ದಿದ್ದರಿಂದ ರಿಂಕು ಸಿಂಗ್ ಅವರ ಮದುವೆಯ ದಿನವನ್ನು ಮುಂದಕ್ಕೆ ಹಾಕಲಾಗಿದೆಯಂತೆ.
ಇನ್ನು ಮುಂದೂಡಿರುವ ಮದುವೆಯೂ ಮುಂದಿನ ವರ್ಷ ಅಂದರೆ 2026ರ ಫೆಬ್ರುವರಿಯಲ್ಲಿ ನಡೆಯಲಿದೆ. ಆದರೆ ಯಾವ ದಿನಾಂಕ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿಲ್ಲ. ಆದರೆ ಈಗಾಗಲೇ ಬುಕ್ ಮಾಡಿರುವ ವಾರಣಾಸಿಯ ತಾಜ್ ಹೋಟೆಲ್ನಲ್ಲೇ ಮದುವೆ ನಡೆಯಲಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ