/newsfirstlive-kannada/media/post_attachments/wp-content/uploads/2024/07/RINKU-SING-2.jpg)
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ರಿಂಕು ಸಿಂಗ್ ಜಿಂಬಾಬ್ವೆ ಪ್ರವಾಸದಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧ ರಿಂಕು ಅದ್ಭುತ ಇನ್ನಿಂಗ್ಸ್ ಆಡಿದರು. ಸರಣಿಯ ಎರಡನೇ ಪಂದ್ಯದಲ್ಲಿ 48 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ 1 ರನ್ ಗಳಿಸಿ ಅಜೇಯರಾಗಿ ಉಳಿದರು. ಇಂದು ನಡೆಯುವ ಪಂದ್ಯದಲ್ಲಿ ಸಾಕಷ್ಟು ನಿರೀಕ್ಷೆ ಇದೆ.
ಜಿಂಬಾಬ್ವೆಯಲ್ಲಿ ರಿಂಕು ಸಿಂಗ್ ‘ಮಿಸ್ಟರಿ ಗರ್ಲ್’ ಜೊತೆ ಕಾಣಿಸಿಕೊಂಡಿದ್ದಾರೆ. ರಿಂಕು ಸಿಂಗ್ ಜೊತೆ ನಿಗೂಢ ಹುಡುಗಿ ಇರೋದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಾಸ್ತವವಾಗಿ, ರಿಂಕು ಸಿಂಗ್ ಜೊತೆ ಕಾಣಿಸಿಕೊಂಡಿರುವ ನಿಗೂಢ ಹುಡುಗಿ ಬೇರೆ ಯಾರೂ ಅಲ್ಲ.
ಶುಬ್ಮನ್ ಗಿಲ್ ಅವರ ಸಹೋದರಿ ಶಹನೀಲ್ ಗಿಲ್. ಶಹನೀಲ್ ಮತ್ತು ರಿಂಕು ಜಿಂಬಾಬ್ವೆಯಲ್ಲಿ ಒಟ್ಟಿಗೆ ಸುತ್ತಾಡಿದ್ದಾರೆ. ಇಬ್ಬರೂ ತುಂಬಾ ಖುಷಿಯಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ಗಿಲ್ ಮೊದಲ ಬಾರಿಗೆ ಭಾರತ ತಂಡದ ನಾಯಕರಾಗಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ