/newsfirstlive-kannada/media/post_attachments/wp-content/uploads/2025/01/RINKU-SINGU.jpg)
ತಂದೆ ತನ್ನ ಮಕ್ಕಳ ಭವಿಷ್ಯಕ್ಕಾಗಿ ಸಾವಿರಾರು ತ್ಯಾಗ ಮಾಡುತ್ತಾನೆ. ಅಪ್ಪನ ಹೆಗಲ ಮೇಲೆ ಕೇವಲ ಮಕ್ಕಳನ್ನು ಹೊತ್ತು ಸಾಗುವುದಿಲ್ಲ, ಅವರ ಭವಿಷ್ಯನ್ನು ಹೊತ್ತು ಸಾಗುತ್ತಾನೆ. ಅಂತಹ ತಂದೆಯ ಕನಸು ನನಸಾದಾಗ ಆಗುವ ಖುಷಿ ಇದೆಯಲ್ಲ ಅದು ಯಾವ ಪದಗಳಿಗೂ ಕೂಡ ನಿಲುಕುವುದಿಲ್ಲ. ಇಂತಹ ಪದಗಳಿಗೆ ನಿಲುಕುದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಕ್ರಿಕೆಟಿಗ ರಿಂಕು ಸಿಂಗ್​ ಅವರ ತಂದೆಯ ಕಥೆ
ರಿಂಕು ಸಿಂಗ್​ ತಂದೆ ಈ ಮೊದಲು ಮನೆ ಮನೆಗೆ ಅಡುಗೆ ಸಿಲಿಂಡರ್ ತಲುಪಿಸುವ ಕೆಲಸ ಮಾಡುತ್ತಿದ್ದರು, ತುಂಬಾ ಕಷ್ಟದಲ್ಲಿಯೇ ತಮ್ಮ ಮಗನನ್ನು ಸಾಕು ಸಲುಹಿದರು ತಮ್ಮ ಪುತ್ರ ಕ್ರಿಕೆಟಿಗನಾಗಬೇಕು ಎಂಬ ಕನಸಿಗೆ ಚಿಕ್ಕಂದಿನಿಂದಲೇ ನೀರು ಎರೆದು ಬೆಳೆಸಿದರು. ಈಗ ಅವರ ಪುತ್ರ ರಿಂಕು ಸಿಂಗ್ ಅಸಮಾನ್ಯ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್​ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿಯೂ ಕೂಡ ಮಿಂಚಿದ್ದಾರೆ. ಕಷ್ಟದ ದಿನಗಗಳು ಈಗ ಕರಗಿವೆ. ಅವರ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ.
ಭಾರತದ ಕ್ರಿಕೆಟಿಗ ರಿಂಕು ಸಿಂಗ್. ತಮ್ಮ ತಂದೆಗೆ ಸ್ಪೋರ್ಟ್ಸ್ ಬೈಕ್ ಉಡುಗೊರೆ ನೀಡಿದ್ದಾರೆ. ಈಗಾಗಲೇ ಹೇಳಿದಂತೆ ರಿಂಕು ಸಿಂಗ್​ ತಂದೆ ಖಂಚಂದ್ ಸಿಂಗ್ ಜೀವನ ನಿರ್ವಹಣೆಗೆ ಅಂತಾ ಅಡುಗೆ ಸಿಲಿಂಡರ್‌ಗಳನ್ನ ವಿತರಿಸುತ್ತಿದ್ದರು. ಅವರ ಮಗ ಈಗ ಪ್ರಸಿದ್ಧ ಕ್ರಿಕೆಟಿಗನಾಗಿ ಬೆಳೆದಿದ್ದು, ಅವರ ಜೀವನ ಜೈಲಿಯೇ ಬದಲಾಗಿದೆ. ಇತ್ತೀಚೆಗಷ್ಟೇ ರಿಂಕು ಸಂಗ್ ತನ್ನ ತಂದೆಗೆ ಕವಾಸಕಿ ನಿಂಜಾ 400 ಸ್ಪೋರ್ಟ್ಸ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದು, ಇದರ ಬೆಲೆ 5 ಲಕ್ಷ ರೂಪಾಯಿ.. ಕೆಕೆಆರ್​ ತಂಡದಲ್ಲಿ ಅತ್ಯತ್ತಮ ಆಟವಾಡಿ ಎಲ್ಲರ ಮನ ಗೆದ್ದಿದ್ದ ರಿಂಕು ತಂದೆ ಸ್ಪೋರ್ಟ್ಸ್ ಬೈಕ್ ಓಡಿಸ್ತಾ. ಅದರಲ್ಲೇ ಕೆಲಸಕ್ಕೆ ಹೋಗ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us