ಪಂತ್ ಭಾವುಕ ಸಂದೇಶ.. ಟೆಸ್ಟ್​​ನಿಂದ ಹೊರಬಿದ್ದ ಬೆನ್ನಲ್ಲೇ ತಂಡಕ್ಕೆ ಬಿಗ್ ಮೆಸೇಜ್..!

author-image
Ganesh
Updated On
ಪಂತ್ ಭಾವುಕ ಸಂದೇಶ.. ಟೆಸ್ಟ್​​ನಿಂದ ಹೊರಬಿದ್ದ ಬೆನ್ನಲ್ಲೇ ತಂಡಕ್ಕೆ ಬಿಗ್ ಮೆಸೇಜ್..!
Advertisment
  • ರಿಷಭ್ ಪಂತ್ ಕೆಚ್ಚೆದೆಯ ಹೋರಾಟ ಅವಿಸ್ಮರಣೀಯ
  • ರಿಯಲ್​ ಫೈಟರ್​.. ಈತನ ಹೋರಾಟಕ್ಕಿಲ್ಲ ಸರಿಸಾಟಿ
  • ಪಂತ್ ಬಗ್ಗೆ ಹೆಡ್​ ಕೋಚ್ ಗೌತಮ್​ ಗಂಭೀರ್ ಗುಣಗಾನ

ಫೈಟರ್​.. ಈ ಪದಕ್ಕೆ ಪರ್ಯಾಯ ಪದವೇ ರಿಷಭ್ ಪಂತ್​.. ಈತನ ಹೋರಾಟದ ಗುಣ. ಸೋಲಿನಲ್ಲೂ ಗೆಲ್ಲಬೇಕೆಂಬ ತುಡಿತ.. ತಂಡಕ್ಕಾಗಿ ಏನನ್ನಾದರು ಮಾಡಬೇಕೆಂಬ ಹಸಿವು.. ಇದೆಲ್ಲವೂ ರಿಷಭ್ ಪಂತ್​​​​​ ಎಂಬ ಹೋರಾಟಗಾರನಲ್ಲಿರುವ ಹುಟ್ಟುಗುಣ. ಇಂಗ್ಲೆಂಡ್ ಸಿರೀಸ್ ಇದಕ್ಕೆ ಲೇಟೆಸ್ಟ್​ ಎಕ್ಸಾಂಪಲ್​.

ಇಂಗ್ಲೆಂಡ್ ಎದುರಿನ ಪ್ರವಾಸದಲ್ಲಿ ಎಷ್ಟು ಮಂದಿ ರನ್ ಗಳಿಸಿದ್ರೂ.. ಎಷ್ಟು ಮಂದಿ ಎಷ್ಟು ಶತಕ ಸಿಡಿಸಿದ್ರೂ, ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತಿರೋದು ಒನ್​​ ಆ್ಯಂಡ್ ಒನ್ಲಿ ಡೇರ್ ಡೆವಿಲ್ ರಿಷಭ್ ಪಂತ್ ಬ್ಯಾಟಿಂಗ್.

ಇದನ್ನೂ ಓದಿ: ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ರಿಷಭ್ ಪಂತ್ ಕೆಚ್ಚೆದೆಯ ಹೋರಾಟ ಅವಿಸ್ಮರಣೀಯ

ಇಂಗ್ಲೆಂಡ್ ಪ್ರವಾಸದಿಂದ ರಿಷಭ್ ಪಂತ್ ಹೊರಬಿದ್ದಿದ್ದಾರೆ. ಈತನ ಅಲಭ್ಯತೆ ಟೀಮ್ ಇಂಡಿಯಾವನ್ನ ಕಾಡುವುದರಲ್ಲಿ ಎರಡು ಮಾತಿಲ್ಲ. ಪ್ರತಿ ಪಂದ್ಯದಲ್ಲಿ ರಿಷಭ್ ಪಂತ್ ಎಂಬ ಮಿಸೈಲ್, ಎದುರಾಳಿ ಮೇಲೆ ಎರಗಿ ಹೋರಾಡುತ್ತಿದ್ದ ಪರಿ ಅವಿಸ್ಮರಣೀಯ. ಅದ್ರಲ್ಲೂ ಲಾರ್ಡ್ಸ್​ನಲ್ಲಿ ಫಿಂಗರ್ ಇಂಜುರಿ ನಡುವೆ ತೋರಿದ ಕೆಚ್ಚೆದೆಯ ಹೋರಾಟ. ಮ್ಯಾಂಚೆಸ್ಟರ್​ನಲ್ಲಿ ಪಾದದ ಗಾಯದ ನಡುವೆ ತೋರಿದ ಛಲಕ್ಕೆ ಸರಿಯಾಟಿಯೇ ಇಲ್ಲ.

ಪಂತ್ ಗುಣಗಾನ ಮಾಡಿದ ಗಂಭೀರ್

ಮೊದಲ ಇನ್ನಿಂಗ್ಸ್​ನಲ್ಲಿ ಇಂಜುರಿ ನಡುವೆ ಹೋರಾಡಿದ್ದ ರಿಷಭ್​ ಪಂತ್, 2ನೇ ಇನ್ನಿಂಗ್ಸ್​ನಲ್ಲೂ ನೋವಿನ ನಡುವೆ ಬ್ಯಾಟಿಂಗ್​ ಬರೋಕೆ ಸಿದ್ಧರಾಗೇ ಇದ್ರು. ಇದೇ ಕಾರಣಕ್ಕೆ ಗಾಯವಾಗಿ 2 ದಿನವಾದ್ರೂ ಪ್ಲಾಸ್ಟರ್​ ಮಾಡಿಕೊಳ್ಳದೇ ನೋವನ್ನ ಸಹಿಸಿಕೊಂಡಿದ್ರು. ಪಂತ್​ರ ಈ ನಡೆ ಭವಿಷ್ಯದ ಆಟಗಾರರಿಗೆ ಪಾಠ ಅಂದ್ರೆ ತಪ್ಪಾಗಲ್ಲ.

ನಾನು ಎಂದಿಗೂ ವೈಯಕ್ತಿಕ ಪ್ರದರ್ಶನಗಳ ಬಗ್ಗೆ ಮಾತನಾಡಲ್ಲ. ನನಗೆ ಅದು ಇಷ್ಟವೂ ಇಲ್ಲ. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ, ರಿಷಭ್ ಪಂತ್ ತಮ್ಮ ಅರ್ಧಶತಕದೊಂದಿಗೆ ತಂಡಕ್ಕೆ ಹಾಕಿದ ಅಡಿಪಾಯ ಮುಖ್ಯವಾಗಿತ್ತು. ಈ ಸಂದರ್ಭದಲ್ಲಿ ಪಂತ್​ಗೆ ಅಭಿನಂದನೆ ತಿಳಿಸುತ್ತೇನೆ. ಇವರ ಕಾರ್ಯ ಕೇವಲ ಡ್ರೆಸ್ಸಿಂಗ್ ಕೋಣೆಗೆ ಮಾತ್ರವಲ್ಲ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ. ದೇಶವು ಯಾವಾಗಲೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಪಂತ್-ಗೌತಮ್ ಗಂಭೀರ್, ಟೀಂ ಇಂಡಿಯಾದ ಕೊಚ್​

ಆಟಗಾರನ ವೈಯಕ್ತಿಕ ಪ್ರದರ್ಶನದ ಬಗ್ಗೆ ಎಂದೂ ಗುಣಗಾನ ಮಾಡದ ಗೌತಮ್ ಗಂಭೀರ್​, ರಿಷಭ್ ಆಟದ ಬಗ್ಗೆ, ಆತ ತೋರಿದ ದಿಟ್ಟತನದ ಬಗ್ಗೆ ಒಮ್ಮೆ ಗುಣಗಾನ ಮಾಡಿದ್ದಾರೆ ಅಂದ್ರೆ, ರಿಷಭ್ ಆಟದ ಇಂಪ್ಯಾಕ್ಟ್​ ಎಷ್ಟಿತ್ತು ಅನ್ನೋದನ್ನ ನೀವೇ ಯೋಚಿಸಿ. ಮ್ಯಾಂಚೆಸ್ಟರ್​ನಲ್ಲಿ ರಿಷಭ್ ಇಂಜುರಿ ನಡುವೆ ಬ್ಯಾಟಿಂಗ್​ಗೆ ಬಂದಿದ್ದು, ಕೇವಲ ನಿರ್ಧಾರವಾಗಿಲಿಲ್ಲ. ಗೆಲುವಿನ ಕಡೆಗೆ ಇಟ್ಟ ದೃಢ ಹೆಜ್ಜೆಯಾಗಿತ್ತು.

ಇದನ್ನೂ ಓದಿ: ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

ಇದು ನಿಜಕ್ಕೂ ಕಠಿಣ. ಪದಗಳಲ್ಲಿ ಭಾವನೆಗಳನ್ನು ಹೇಳಲು ಕಷ್ಟಕರ. ಯಾಕಂದ್ರೆ, ಪಂತ್ ಕಾಲ್ಬೆರಳಿಗೆ ಇಂಜುರಿಯಾಗಿತ್ತು. ಆತ ನೋವಿನಲ್ಲಿದ್ದ. ನಾನು ನೋಡಿದಾಗ ಆತನ ಪಾದ ಊದಿಕೊಂಡಿತ್ತು. ಇಡೀ ದೇಶಕ್ಕೆ ಆತನ ಬಗ್ಗೆ ಹೆಮ್ಮೆ ಇದೆ. ಆತ ದೇಶದ ಸುಪುತ್ರ -ಗಂಭೀರ್, ಕೋಚ್

ಟೀಮ್ ಇಂಡಿಯಾಗೆ ರಿಷಭ್ ಪಂತ್ ಸಂದೇಶ ಏನು..?

ಸರಣಿಯಿಂದ ಹೊರಬಿದ್ದಿರೋ ಪಂತ್​ ಟೀಮ್ ಇಂಡಿಯಾಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ. ವೈಯಕ್ತಿಕ ಸಾಧನೆಗಿಂತ, ತಂಡದ ಹಿತ ಮುಖ್ಯ ಎಂದಿರುವ ಪಂತ್, ಸಹ ಆಟಗಾರರಿಗೆ ದೇಶಕ್ಕಾಗಿ ಗೆಲ್ಲುವಂತೆ ಮನವಿ ಮಾಡಿದ್ದಾರೆ.

ವೈಯಕ್ತಿಕ ಗುರಿಗಳ ಬಗ್ಗೆ ಯೋಚಿಸದೆ, ತಂಡ ಗೆಲ್ಲಲು ನನ್ನಿಂದ ಸಹಾಯ ಮಾಡಲು ಬಯಸುತ್ತೇನೆ. ಇಂತಹ ಸಮಯದಲ್ಲಿ ನನ್ನ ಎಲ್ಲಾ ಸಹ ಆಟಗಾರರೂ ನನ್ನ ಬೆಂಬಲಕ್ಕೆ ನಿಂತಿರುವುದು ಒಳ್ಳೆಯದು. ದೇಶಕ್ಕಾಗಿ ಆಡುವಾಗ, ಒತ್ತಡದಲ್ಲಿದ್ದಾಗಲೂ ಎಲ್ಲರೂ ತಂಡವನ್ನ ಬೆಂಬಲಿಸುತ್ತಾರೆ. ಇಡೀ ದೇಶ ಬೆಂಬಲಕ್ಕೆ ನಿಲ್ಲುವ ಆ ಭಾವನೆ ವಿವರಿಸುವುದು ಕಷ್ಟ. ನನ್ನ ದೇಶಕ್ಕಾಗಿ ಆಡುವುದು ನನಗೆ ಯಾವಾಗಲೂ ಹೆಮ್ಮೆಯ ವಿಷಯ. ನನ್ನ ತಂಡಕ್ಕೆ ನನ್ನ ಬಳಿ ಒಂದೇ ಒಂದು ಸಂದೇಶವಿದೆ. ಮುಂದಿನ ಪಂದ್ಯವನ್ನ ಗೆಲ್ಲೋಣ. ನಾವು ದೇಶಕ್ಕಾಗಿ ಪಂದ್ಯವನ್ನ ಗೆಲ್ಲೋಣ- ರಿಷಬ್ ಪಂತ್, ಟೀಂ ಇಂಡಿಯಾದ ಆಟಗಾರ

ರಿಷಭ್​ ಪಂತ್, ಯಾವತ್ತೂ ಟೀಮ್ ಇಂಡಿಯಾವನ್ನು ಕೈಬಿಟ್ಟವರಲ್ಲ. ಗೆಲುವಿಗಾಗಿ ಹೋರಾಡಿದವರು. ಇದೀಗ ಕೊನೆ ಪಂದ್ಯ ಗೆಲ್ಲುವಂತೆ ಸಹ ಆಟಗಾರರಿಗೆ ಪಂತ್ ಮನವಿ ಮಾಡಿದ್ದಾರೆ. ಸರಣಿಯಲ್ಲಿ ಸಮಬಲ ಸಾಧಿಸಿ ಎಂಬ ಸಂದೇಶ ನೀಡಿದ್ದಾರೆ. ದೇಶಕ್ಕಾಗಿ ಒಂದು ಪಂದ್ಯವನ್ನು ಗೆಲ್ಲವಂತೆ ರಿಷಭ್​ ಪಂತ್ ನೀಡಿರುವ ಸಂದೇಶ ಇಡೀ ತಂಡದಲ್ಲಿ ಸ್ಪೂರ್ತಿ ತುಂಬಲಿ.

ಇದನ್ನೂ ಓದಿ: ರಾಜ್ಯದ ರೈತರಿಗೆ ಸಿಹಿ ಸುದ್ದಿ.. ಕೇಂದ್ರ ಸಚಿವರ ಭೇಟಿ ಬೆನ್ನಲ್ಲೇ ಬೊಮ್ಮಾಯಿ ಮಹತ್ವದ ಮಾಹಿತಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment