newsfirstkannada.com

IPL​ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್​​ನ್ಯೂಸ್​.. ಅಖಾಡಕ್ಕಿಳಿಯಲು ಸಜ್ಜಾದ ಪಕ್ಕಾ ಎಂಟರ್​​ಟೈನರ್​..!

Share :

Published February 22, 2024 at 2:28pm

  ಇಂಡಿಯನ್​ ಪ್ರೀಮಿಯರ್​​ ಲೀಗ್​ಗೆ ಕೌಂಟ್​ಡೌನ್​​

  ಫ್ಯಾನ್ಸ್​ಗೆ ಕಾದಿದೆ ಜಬರ್ದಸ್ತ್​​ ಎಂಟರ್​ಟೈನ್​ಮೆಂಟ್

  ಇದ್ದ ಅನುಮಾನಗಳಿಗೆಲ್ಲಾ ಬಿತ್ತು ಫುಲ್​ ಸ್ಟಾಫ್​..!

ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಕ್ಕೆ ಕೌಂಟ್​​ಡೌನ್​ ಶುರುವಾದ ಬೆನ್ನಲ್ಲೇ ಅಭಿಮಾನಿಗಳಿಗೆ ಸಖತ್​ ಸುದ್ದಿ ಹೊರಬಿದ್ದಿದೆ. ಮಿಸ್ಟರ್​​ ಎಂಟರ್​​ಟೈನರ್​ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಕಳೆದ ವರ್ಷ ಫ್ಯಾನ್ಸ್​ ಯಾವ ಮಿಸ್​ ಮಾಡಿಕೊಂಡಿದ್ದ ಎಂಟರ್​​ಟೈನ್​ಮೆಂಟ್​ ಈ ಸೀಸನ್​ನಲ್ಲಿ ಅಭಿಮಾನಿಗಳಿಗೆ ಸಿಗಲಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್ ಆರಂಭಕ್ಕೆ ಕೌಂಟ್​ಡೌನ್​​ ಶುರುವಾಗಿದೆ. ಬಿಸಿಸಿಐ ವಲಯದಲ್ಲಿ ಮಿಲಿಯನ್​ ಡಾಲರ್​ ಟೂರ್ನಿಗೆ ಸಿದ್ಧತೆಗಳೆಲ್ಲಾ ಮುಗಿದಿವೆ. ಇನ್ನೇನು ಅಧಿಕೃತವಾಗಿ ಡೇಟ್​ ಅನೌನ್ಸ್​ಮೆಂಟ್​ ಅಷ್ಟೇ ಬಾಕಿ ಉಳಿದಿರೋದು. ಫ್ರಾಂಚೈಸಿಗಳು ಕೂಡ ಟಿ20 ಜಾತ್ರೆಗೆ ಭರದ ಸಿದ್ಧತೆಯನ್ನ ನಡೆಸ್ತಿವೆ. ಫ್ಯಾನ್ಸ್​ ಅಂತೂ ರಣ ರೋಚಕ ಫೈಟ್​ಗಳನ್ನ ಕಣ್ತುಂಬಿಕೊಳ್ಳಲು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.

IPL​ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್​​ನ್ಯೂಸ್​
ಕಳೆದ ಆವೃತ್ತಿಯ ಐಪಿಎಲ್​ ಟೂರ್ನಿಗೆ ಬಹುತೇಕರಿಗೆ ಬೋರ್​ ತರಿಸಿತ್ತು. ಧೋನಿ, ರೋಹಿತ್​, ಕೊಹ್ಲಿ ಎಲ್ಲರೂ ಇದ್ರು.. ಟ್ವಿಸ್ಟ್​ ಅಂಡ್ ಟರ್ನ್​​ಗಳು, ರಣ ರೋಚಕ ಅಂತ್ಯಗಳು ಎಲ್ಲವೂ ನಡೆದ್ವು. ಆದರೆ ಐಪಿಎಲ್​ನ ಅಸಲಿ ಎಂಟರ್​ ಟೈನರ್​ ಟೂರ್ನಿಯಲ್ಲಿ ಆಡ್ಲಿಲ್ಲ. ಆ ಒಬ್ಬನ ಅಲಭ್ಯತೆ ಬಹುತೇಕರನ್ನ ಕಾಡಿದ್ದು ಸುಳ್ಳಲ್ಲ. ಈ ಬಾರಿ ಹಾಗಾಗಲ್ಲ.. ಅಭಿಮಾನಿಗಳ ನೆಚ್ಚಿನ ಎಂಟರ್​​ಟೈನರ್​ ಕಮ್​ಬ್ಯಾಕ್​ಗೆ ಸಜ್ಜಾಗಿದ್ದಾರೆ. ಆ ಸೂಪರ್​​ಸ್ಟಾರ್​ ಬೇರಾರೂ ಅಲ್ಲ.. ಒನ್​ ಅಂಡ್ ಒನ್ಲಿ ರಿಷಬ್ ಪಂತ್​.

ಬ್ಯಾಟ್​ ಹಿಡಿದು ಕ್ರಿಸ್​ಗಿಳಿದ್ರೆ ಬೌಂಡರಿ, ಸಿಕ್ಸರ್​ ಬೋರ್ಗರೆತ
ಕ್ರಿಸ್​​ಗಿಳಿದ್ರೆ ಸಾಕು ಬೌಂಡರಿ, ಸಿಕ್ಸರ್​​ಗಳ ಬೋರ್ಗರೆತ.. ಎದುರಾಳಿ ಯಾರು? ಸಿಚ್ಯುವೇಶನ್​ ಏನು? ಅನ್ನೋ ಪ್ರಶ್ನೆಗಳೇ ಉದ್ಭವಿಸಲ್ಲ. ಬ್ಯಾಟ್​ ಅನ್ನೋ ಅಸ್ತ್ರ ಹಿಡಿದು ಕಣಕ್ಕಿಳಿದ್ರೆ ದಂಡಯಾತ್ರೆ ಫಿಕ್ಸ್​.! ಅ ವಿಚಾರದಲ್ಲಿ ಪಂತ್​ಗೆ ಪಂತೇ ಸಾಟಿ.. ಆ​ ಬ್ಯಾಟಿಂಗ್​ ಖದರ್​​ ಬೇರೆಯೇ.

ಫ್ಯಾನ್ಸ್​ಗೆ ಕಾದಿದೆ ಜಬರ್ದಸ್ತ್​​ ಎಂಟರ್​ಟೈನ್​ಮೆಂಟ್​.!
ಕೀಪಿಂಗ್​ ಹಾಗೂ ನಾಯಕತ್ವದಲ್ಲೂ ಪಂತ್​ ದರ್ಬಾರ್​ ನಡೆಸಿದ್ದಾರೆ. ವಿಕೆಟ್​ ಹಿಂದೆ ಮೋಡಿ ಮಾಡೋ ಪಂತ್​, ಡೇರಿಂಗ್​ ಕ್ಯಾಪ್ಟನ್ಸಿಯಿಂದಲೂ ಎದುರಾಳಿಗಳಿಗೆ ಶಾಕ್​ ಕೊಡೋದ್ರಲ್ಲಿ ಪಂಟರ್​. ಕೇವಲ ಆಟದಿಂದ ಮಾತ್ರವಲ್ಲ.. ತನ್ನ ಪಂತ್​ರ ಪ್ರತಿ ನಡೆಯಲ್ಲೂ ಎಂಟರ್​​ಟೈನ್​ಮೆಂಟ್​ ಫಿಕ್ಸ್.! ವಿಕೆಟ್​ ಹಿಂದಿನಿಂದ ಸ್ಲೆಡ್ಜ್​ ಮಾಡ್ತಾ, ಎಲ್ರ ಕಾಲೇಳಿತಾರೆ. ಈ ವಿಚಾರದಲ್ಲಿ ಕೊಹ್ಲಿಯನ್ನೇ ಬಿಟ್ಟಿಲ್ಲ..

ಇದ್ದ ಅನುಮಾನಗಳಿಗೆಲ್ಲಾ ಬಿತ್ತು ಫುಲ್​ ಸ್ಟಾಫ್​.!
ಆ್ಯಕ್ಸಿಂಡೆಂಟ್​​ಗೆ ತುತ್ತಾಗಿ ಕಳೆದ ಐಪಿಎಲ್​ ಟೂರ್ನಿಯಿಂದ ಹೊರಗುಳಿದಿದ್ದ ರಿಷಭ್​ ಪಂತ್,​ ಈ ಸೀಸನ್​ನಲ್ಲಿ ಕಮ್​ಬ್ಯಾಕ್​ ಮಾಡಲು ಸಜ್ಜಾಗಿದ್ದಾರೆ. ಇಷ್ಟು ದಿನ ಇದ್ದ ಅಂತೆ-ಕಂತೆಗಳಿಗೆ ಫುಲ್​ ಸ್ಟಾಫ್​ ಬಿದ್ದಿದ್ದು, ಕೆಲವೇ ವಾರಗಳಲ್ಲಿ ಆರಂಭವಾಗಲಿರೋ 17ನೇ ಆವೃತ್ತಿ ಐಪಿಎಲ್​ನಲ್ಲಿ ಪಂತ್​ ಕಣಕ್ಕಿಳಿಯೋದು ಕನ್​ಫರ್ಮ್​ ಆಗಿದೆ. ಫುಲ್​ ಫಿಟ್​ ಆಗಿರೋ ಪಂತ್​, ಟೂರ್ನಿಗೆ ಸಿದ್ಧತೆಯನ್ನೂ ಸ್ಟಾರ್ಟ್​​​ ಮಾಡಿದ್ದಾರೆ.

ಕೀಪಿಂಗ್​ ಮಾಡಲ್ಲ.. ಬ್ಯಾಟಿಂಗ್​ ಮಾಡ್ತಾರೆ..!
ಬೆಂಗಳೂರಿನ ಆಲೂರಿನಲ್ಲಿ ರಿಷಭ್​ ಪಂತ್​ ಐಪಿಎಲ್​ಗೆ ಸಿದ್ಧತೆಯನ್ನ ಆರಂಭಿಸಿದ್ದಾರೆ. ವಿಕೆಟ್​ ಕೀಪಿಂಗ್​ ಜೊತೆಗೆ ಬ್ಯಾಟಿಂಗ್​ ಅಭ್ಯಾಸವನ್ನು ಪಂತ್​ ಮಾಡ್ತಿದ್ದಾರೆ. ಸದ್ಯ ಪಂತ್​ ಫುಲ್​ ಫಿಟ್​ ಆಗಿದ್ದಾರೆ. ಹಾಗಿದ್ದರೂ ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ದೃಷ್ಟಿಯಿಂದ ಈ ಐಪಿಎಲ್​ನಲ್ಲಿ ಕೇವಲ ಸ್ಪೆಷಲಿಸ್ಟ್​ ಬ್ಯಾಟರ್​ ಆಗಿ ಪಂತ್​ ಕಾಣಿಸಿಕೊಳ್ಳಲಿದ್ದಾರೆ. ಕೀಪಿಂಗ್​ನಿಂದ ದೂರ ಉಳಿಯೋ ಸಾಧ್ಯತೆ ಇದೆ. ಆದರೆ ನಾಯಕರಾಗಿ ತಂಡ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

ಎಮ್​.ಎಸ್​ ಧೋನಿ, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾರಂತೆ ರಿಷಬ್​ ಪಂತ್​ ಕೂಡ ಸಪರೇಟ್​ ಫ್ಯಾನ್​ ಬೇಸ್​ ಹೊಂದಿದ್ದಾರೆ. ಭಾರತ ಮಾತ್ರವಲ್ಲ.. ಕ್ರಿಕೆಟ್​ ಅನ್ನ ಪ್ರೀತಿಸುವ ವಿಶ್ವದ ಪ್ರತಿಯೊಬ್ಬರೂ ಕಳೆದೊಂದು ವರ್ಷದಿಂದ ಪಂತ್​ರ​ ಫೆಂಟಾಸ್ಟಿಕ್​ ಆಟವನ್ನ ಮಿಸ್​​ ಮಾಡಿಕೊಂಡಿದ್ದಾರೆ. ಆ ಬೇಸರಕ್ಕೆ ಈ ಸೀಸನ್​ನಲ್ಲಿ ಬ್ರೇಕ್​ ಬೀಳಲಿದೆ. ಕಮ್​​ಬ್ಯಾಕ್​ಗೆ ಸಜ್ಜಾಗಿರೋ ಪಂತ್​, ಡೇರ್​ ಡೆವಿಲ್​ ಆಟದಿಂದ ಘರ್ಜಿಸಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPL​ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್​​ನ್ಯೂಸ್​.. ಅಖಾಡಕ್ಕಿಳಿಯಲು ಸಜ್ಜಾದ ಪಕ್ಕಾ ಎಂಟರ್​​ಟೈನರ್​..!

https://newsfirstlive.com/wp-content/uploads/2023/11/IPL-2024-1.jpg

Load More