/newsfirstlive-kannada/media/post_attachments/wp-content/uploads/2024/10/Rishabh_Pant-1.jpg)
ಗಬ್ಬಾ ಟೆಸ್ಟ್ ಶುರುವಾಗಿದೆ. ಮಳೆರಾಯನ ಕಾಟವೂ ಶುರುವಾಗಿದೆ. ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಮದಗಜಗಳು, ಈಗಾಗಲೇ ತೆರೆ ಹಿಂದಿನ ಕಾರ್ಯತಂತ್ರಗಳನ್ನೂ ರೂಪಿಸಿ ರಣರಂಗಕ್ಕಿಳಿದಿವೆ. ಆಸ್ಟ್ರೇಲಿಯಾ ಹಳೇಯ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇದಕ್ಕೆಲ್ಲ ಕಾರಣ 2021ರ ಗಾಬಾ ಟೆಸ್ಟ್ ಸೋಲಿನ ಕಹಿ ನೆನಪು.
ಜನವರಿ 19, 2021
2021, ಜನವರಿ 19.. ಆಸ್ಟ್ರೇಲಿಯಾ ಎಂಬ ಮದಗಜಗಳ ಸೊಕ್ಕು ಮುರಿದ ದಿನ. ಆಸ್ಟ್ರೇಲಿಯಾದ ಭದ್ರಕೋಟೆಯಲ್ಲೇ ಕಾಂಗೂರು ಬೇಟೆಯಾಡಿ ಸರಣಿ ಗೆದ್ದ ದಿನ. 33 ವರ್ಷಗಳ ಸೋಲಿಲ್ಲದ ಸರದಾರನಂತೆ ಗಬ್ಬಾದಲ್ಲಿ ಮೆರೆದಾಡಿದ್ದ ಆಸ್ಟ್ರೇಲಿಯಾಗೆ ಗರ್ವಭಂಗವಾದ ದಿನ. ಟೀಮ್ ಇಂಡಿಯಾದ ಯುವ ಪಡೆಯ ಹೋರಾಟಕ್ಕೆ ದೇಶವೇ ಸಲಾಂ ಹೊಡೆದ ದಿನ. ರಿಷಭ್ ಪಂತ್ ಎಂಬ ಡೇಂಜರ್ ಬ್ಯಾಟರ್ ಗಬ್ಬಾಹೀರೋ ಆಗಿ ಮೆರೆದಾಡಿದ ದಿನ.
ಇದನ್ನೂ ಓದಿ:LK ಅಡ್ವಾಣಿಗೆ ಅನಾರೋಗ್ಯ; ದೆಹಲಿಯ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ
ಇದೀಗ ಮತ್ತೆ ರಿಷಬ್ ಪಂತ್ ಜೊತೆ ಆಸ್ಟ್ರೇಲಿಯಾ ಎದುರಾಗಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಪಂದ್ಯದ ಮೊದಲ ದಿನವೇ ಮಳೆ ಬಂದ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.
ಕಮ್ಬ್ಯಾಕ್ ಮಾಡಬೇಕಿದೆ ಪಂತ್
ಪರ್ತ್ನಲ್ಲಿ ಟೀಮ್ ಇಂಡಿಯಾ ಗೆದ್ದರೂ, ಅಡಿಲೇಡ್ನಲ್ಲಿ ಟೀಮ್ ಇಂಡಿಯಾ ಸೋತರು, ರಿಷಭ್ ಪಂತ್ ಆಟ ಮಾತ್ರ, ಆರಕ್ಕೇರಲಿಲ್ಲ. ಮೂರಕ್ಕಿಳಿಯಲಿಲ್ಲ ಎಂಬಂತಿದೆ. ಪರ್ತ್ನಲ್ಲಿ ಜಸ್ಟ್ 37, 1 ರನ್ಗೆ ಸೀಮೀತವಾಗಿದ್ದ ಪಂತ್, ಅಡಿಲೇಡ್ನಲ್ಲಿ 21, 28ಕ್ಕೆ ಸೀಮಿತವಾಗಿತ್ತು. ಇದು ಟೀಮ್ ಇಂಡಿಯಾವನ್ನು ಚಿಂತೆಗೆ ದೂಡಿದೆ. ಪಂತ್ ಕಮ್ಬ್ಯಾಕ್ ಅತ್ಯಗತ್ಯ.
ಹೀರೋ ಸಿಡಿದರಷ್ಟೇ ಗೆಲುವು
ಗಬ್ಬಾ ಎಂದಾಕ್ಷಣ ನೆನಪಿಗೆ ಬರೋದೇ ರಿಷಭ್ ಪಂತ್, ಅಜೇಯ 89 ರನ್ಗಳ ಹೋರಾಟದ ಇನ್ನಿಂಗ್ಸ್. ಈ ಒಂದು ಇನ್ನಿಂಗ್ಸ್ ಟೀಮ್ ಇಂಡಿಯಾಗೆ ಗೆಲುವಿನ ಸಿಹಿಯ ಜೊತೆಗೆ ಸರಣಿ ಗೆಲುವಿಗೂ ಕಾರಣವಾಯ್ತು. ಇಂಥದ್ದೇ ಗೆಲುವು ಟೀಮ್ ಇಂಡಿಯಾಗೆ ಬೇಕಾಗಿದೆ. ಈ ಟೆಸ್ಟ್ ಗೆದರಷ್ಟೇ ಸರಣಿ ಗೆಲುವು ಸಾಧ್ಯ. ಹೀಗಾಗಿ ಗಬ್ಬಾ ಹೀರೋ ಎಂಬ ಹೆಸರಿಗೆ ತಕ್ಕಂತ ಆಟ ಪಂತ್ರಿಂದ ಬಂದರಷ್ಟೇ ಗೆಲುವು ಸುಲಭ.
ಇದನ್ನೂ ಓದಿ:IND vs AUS: ಮೂರನೇ ಟೆಸ್ಟ್ಗೆ ದಿಢೀರ್ ಅಡ್ಡಿ.. ಅರ್ಧಕ್ಕೆ ಸ್ಥಗಿತಗೊಂಡ ಆಟ..!
ಎದ್ದೇಳು ಪಂತ್
ಮೊದಲ ಎರಡು ಟೆಸ್ಟ್ನಲ್ಲಿ ಸೈಲೆಂಟ್ ಆಗಿದ್ದ ಪಂತ್ಗೆ, ಈಗ ಸಿಡಿಯುವ ಟೈಮ್ ಬಂದಾಗಿದೆ. ಸರಣಿ ಗೆಲುವಿನ ದೃಷ್ಟಿಯಿಂದ ಮಾತ್ರವೇ ಅಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ಹಾದಿಯ ದೃಷ್ಟಿಯಿಂದ ರಿಷಭ್ ಪಂತ್, ಸಿಡಿಯಬೇಕಿದೆ. ಎಂದಿನಂತೆ ಆಕ್ರಮಣಕಾರಿ ಆಟ ಆಡಬೇಕಿದೆ. ಇಲ್ಲ ಟೀಮ್ ಇಂಡಿಯಾದ ಮುಂದಿನ ಭವಿಷ್ಯ ಮತ್ತಷ್ಟು ಕಷ್ಟಕರ ಆಗೋದ್ರಲ್ಲಿ ಡೌಟಿಲ್ಲ.
ಆಸ್ಟ್ರೇಲಿಯಾಗೂ ಟೆನ್ಶನ್.. ಟೆನ್ಶನ್
ಪಂತ್ ಬ್ಯಾಟ್ ಎರಡು ಪಂದ್ಯಗಳಿಂದ ಮಂಕಾಗಿದೆ. ಇದರಿಂದ ಟೀಮ್ ಇಂಡಿಯಾಗೆ ನಿರಾಸೆ ಮೂಡಿಸಬಹುದು. ಇದೇ ಸೈಲೆಂಟ್ ಆಸ್ಟ್ರೇಲಿಯನ್ ಕ್ಯಾಂಪ್ನ ನಿದ್ದೆ ಗೆಡಿಸಿದೆ. ಸೈಲೆಂಟ್ ಆಗಿರುವ ಪಂತ್, ಯಾವಾಗ ಹೇಗೆ ವೈಲೆಂಟ್ ಆಗ್ತಾರೆ ಅನ್ನೋದು ಗೊತ್ತಿಲ್ಲ. ಈ ವೈಲೆಂಟ್ ಎದುರಾಳಿ ಪಡೆಯನ್ನೇ ಧೂಳಿಪಟ ಮಾಡುತ್ತೆ. ಹೀಗಾಗಿ ಪಂತ್, ಭಯ ಆಸಿಸ್ಗೆ ಕಾಡ್ತಿದ್ದು, ರಿಷಭ್ ಬೇಟೆಗಾಗಿ ಹೊಸ ಸ್ಟ್ರಾಟರ್ಜಿಯನ್ನು ಮಾಡೇ ಮಾಡುತ್ತೆ.
ಇದನ್ನೂ ಓದಿ:ಮುಡಾಗೆ ಮೇಜರ್ ಸರ್ಜರಿ ಮಾಡಲು ನಿರ್ಧಾರ; ಇನ್ಮುಂದೆ BDA ಮಾದರಿಯಲ್ಲೇ ಮೈಸೂರು ಅಭಿವೃದ್ಧಿ ಪ್ರಾಧಿಕಾರ..!
ಗಬ್ಬಾ ಟೆಸ್ಟ್ ಹೀರೋ ರಿಷಭ್ ಪಂತ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದ್ದು, ಸಿಡಿದೇಳ್ತಾರಾ? ಮತ್ತೊಮ್ಮೆ ಗಬ್ಬಾ ಹೀರೋ ಆಗಿ ಮೆರೆದಾಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್