/newsfirstlive-kannada/media/post_attachments/wp-content/uploads/2024/09/RISHAB-PANT-2.jpg)
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ಟೀಮ್ ಇಂಡಿಯಾ ದುಬೈ ತಲುಪಿದ್ದು, ಅಭ್ಯಾಸ ಆರಂಭಿಸಿದೆ. ಹೆಡ್‌ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಆಟಗಾರರು ಪ್ರಾಕ್ಟೀಸ್ ನಡೆಸುತ್ತಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾ ಫ್ಯಾನ್ಸ್ಗೆ ಶಾಕಿಂಗ್ ಸುದ್ದಿ ಒಂದಿದೆ.
ಅಂಥದ್ದೇನಾಯ್ತು?
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್. ಇವರು ಪ್ರಾಕ್ಟೀಸ್ ಮಾಡುವಾಗ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರ ಮೊಣಕಾಲಿಗೆ ಗಾಯವಾಗಿದೆ. ಕಳೆದ ಸಲ ಅಪಘಾತಕ್ಕೆ ಒಳಗಾಗಿದ್ದ ಪಂತ್ ಅವರ ಮೊಣಕಾಲಿಗೆ ಸರ್ಜರಿ ಆಗಿತ್ತು. ಈಗ ಅದೇ ಜಾಗದಲ್ಲಿ ಗಾಯ ಆಗಿದೆ ಎಂದು ತಿಳಿದು ಬಂದಿದೆ.
ಚಾಂಪಿಯನ್ಸ್ ಟ್ರೋಫಿಯಿಂದ ಪಂತ್ ಔಟ್?
ರಿಷಬ್ ಪಂತ್ ಗಾಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ಪಂತ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದರೆ ಟೀಮ್ ಇಂಡಿಯಾಗೆ ಇದು ಆಘಾತ ತರುತ್ತದೆ. ಇವರ ಬದಲಿಗೆ ಬೇರೆ ಯಾರನ್ನಾದ್ರೂ ಸೇರಿಸಿಕೊಳ್ಳಬೇಕಾಗಬಹುದು.
15 ಸದಸ್ಯರ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಅವರೊಂದಿಗೆ 2ನೇ ವಿಕೆಟ್ ಕೀಪರ್ ಆಗಿ ಪಂತ್ ಆಯ್ಕೆಯಾಗಿದ್ದರು. ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ನಲ್ಲಿ ಕೆ.ಎಲ್ ರಾಹುಲ್ ಮೊದಲ ವಿಕೆಟ್ ಕೀಪರ್ ಆಗಿ ಆಡಲಿದ್ದಾರೆ ಎಂದು ಕೋಚ್ ಗೌತಮ್ ಗಂಭೀರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಪಂತ್ ಜಾಗದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.
ಟೀಮ್ ಇಂಡಿಯಾ ಹೀಗಿದೆ!
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ.
ಇದನ್ನೂ ಓದಿ:IPL 2025: ಮುಂಬೈಗೆ ಬಿಗ್ ಶಾಕ್; ಹಾರ್ದಿಕ್ ಪಾಂಡ್ಯ ಮೇಲೆ ಬಿಸಿಸಿಐ ನಿಷೇಧ; ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ