Advertisment

ಡೆಲ್ಲಿ ಕ್ಯಾಪಿಟಲ್ಸ್​​ಗೆ ಬಿಗ್ ಶಾಕ್ ಕೊಟ್ಟ ಪಂತ್.. ತಂಡ ತೊರೆಯಲು ನಿರ್ಧಾರ.. ಆಗಿದ್ದೇನು..?

author-image
Ganesh
Updated On
ಡೆಲ್ಲಿ ಕ್ಯಾಪಿಟಲ್ಸ್​​ಗೆ ಬಿಗ್ ಶಾಕ್ ಕೊಟ್ಟ ಪಂತ್.. ತಂಡ ತೊರೆಯಲು ನಿರ್ಧಾರ.. ಆಗಿದ್ದೇನು..?
Advertisment
  • ರಿಕಿ ಪಾಂಟಿಂಗ್​​ಗೆ ಗೇಟ್​ಪಾಸ್ ನೀಡಿದ್ದ ಸೌರವ್ ಗಂಗೂಲಿ
  • ಇದೀಗ ರಿಷಬ್ ಪಂತ್ ತಂಡ ತೊರೆಯುವ ಬಗ್ಗೆ ಮಾತು
  • 7 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡ್ತಿರುವ ಪಂತ್

ವಿಕೆಟ್ ಕೀಪರ್ ಅಂಡ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಬಹುದು. ಮಾಹಿತಿಗಳ ಪ್ರಕಾರ.. ಐಪಿಎಲ್ 2025ರ ಮೆಗಾ ಹರಾಜಿನ ಮುಂಚೆಯೇ ಪಂತ್ ತಮ್ಮ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisment

ಪಂತ್​​ಗೂ ಮುನ್ನವೇ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಹೊಡೆತ ನೀಡಿದ್ದಾರೆ. ಪಾಂಟಿಂಗ್ 7 ವರ್ಷಗಳ ಕಾಲ DCಯೊಂದಿಗೆ ಸಂಬಂಧ ಹೊಂದಿದ್ದರು. ಅವರ ನಿರ್ಗಮನದಿಂದ ತಂಡದ ಮುಖ್ಯ ಕೋಚ್ ಹುದ್ದೆ ಖಾಲಿಯಾಗಿದೆ.

ರಿಷಬ್ ಪಂತ್ ಮತ್ತು ರಿಕಿ ಪಾಂಟಿಂಗ್ ಉತ್ತಮ ಸ್ನೇಹಿತರಾಗಿದ್ದಾರೆ. ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದಿರುವ ಹಿನ್ನೆಲೆಯಲ್ಲಿ ಪಂತ್ ಕೂಡ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ. ಪಂತ್, 2016 ರಿಂದ ದೆಹಲಿ ತಂಡದೊಂದಿಗೆ ಇದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡ ನಂತರ 2021 ರಲ್ಲಿ ಪಂತ್ ನಾಯಕತ್ವ ಜವಾಬ್ದಾರಿ ವಹಿಸಿಕೊಂಡರು. ಪಂತ್ ದೆಹಲಿ ತಂಡವನ್ನು ತೊರೆದರೆ ಮೆಗಾ ಹರಾಜಿನಲ್ಲಿ ನಿಸ್ಸಂಶಯವಾಗಿ ಕೋಟ್ಯಂತರ ರೂಪಾಯಿಗಳನ್ನು ಬಿಡ್ ಮಾಡಬಹುದು.

ಇದನ್ನೂ ಓದಿ:ಲಂಕಾ ವಿರುದ್ಧದ ODI ಪಂದ್ಯ ನಾನು ಆಡಲ್ಲ -ಗಂಭೀರ್​​ಗೆ ಬಿಗ್ ಶಾಕ್ ಕೊಟ್ಟ ಪಾಂಡ್ಯ.. ಆಗಿದ್ದೇನು..

Advertisment

publive-image

ಪಂತ್ ನಾಯಕತ್ವದಲ್ಲಿ ದೆಹಲಿಯ ಪ್ರದರ್ಶನ
ರಿಷಬ್ ಪಂತ್ ಕಳೆದ ನಾಲ್ಕು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ ಡೆಲ್ಲಿ ಒಂದು ಬಾರಿ ಮಾತ್ರ ಪ್ಲೇ ಆಫ್ ತಲುಪಿದೆ. 2021ರಲ್ಲಿ ಡಿಸಿ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತಿತು. ಮೂರು ವರ್ಷಗಳಲ್ಲಿ ಒಮ್ಮೆಯೂ ಪ್ಲೇ ಆಫ್ ತಲುಪಲು ಸಾಧ್ಯವಾಗಿರಲಿಲ್ಲ.

2024ರಲ್ಲಿ ದೆಹಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದನ್ನು ತಂಡದ ನಿರ್ದೇಶಕ ಸೌರವ್ ಗಂಗೂಲಿ ಲೇವಡಿ ಮಾಡಿದ್ದರು. ರಿಕಿ ಪಾಂಟಿಂಗ್​ಗೆ ಗೇಟ್ ಪಾಸ್ ನೀಡಿದ ಬೆನ್ನಲ್ಲೇ ಮಾತನಾಡಿದ್ದ ಗಂಗೂಲಿ, ನಾನು ನಿಮಗೆ ಒಂದು ಸುದ್ದಿ ಹೇಳಲು ಬಯಸುತ್ತೇನೆ. ರಿಕಿ ಪಾಂಟಿಂಗ್ ಇನ್ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿರುವುದಿಲ್ಲ. ರಿಕಿ ಪಾಂಟಿಂಗ್ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ 7 ವರ್ಷಗಳಲ್ಲಿ ತೆಗೆದುಕೊಳ್ಳಲಾಗಿದೆ ಎಂದಿದ್ದರು.

ಇದನ್ನೂ ಓದಿ:ಕೊನೆಯ 2 ಓವರ್​ನಲ್ಲಿ 61 ರನ್​ ಬೇಕಿತ್ತು.. 8 ಸಿಕ್ಸರ್​, 2 ಬೌಂಡರಿ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟ ಸ್ಟಾರ್..! Video

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment