/newsfirstlive-kannada/media/post_attachments/wp-content/uploads/2025/07/PANT-7.jpg)
ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಗೆಲ್ಲುತ್ತೋ? ಇಲ್ವೋ? ಗೊತ್ತಿಲ್ಲ. ಆದ್ರೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್, ಕ್ರಿಕೆಟ್ ಲೋಕವನ್ನ ಗೆದ್ದಿದ್ದಾರೆ. ಫೈಟರ್ ಪಂತ್ ಪರಾಕ್ರಮಕ್ಕೆ ಕ್ರಿಕೆಟ್ ಜಗತ್ತು ಶಾಕ್ ಆಗಿದೆ. ಫ್ಯಾನ್ಸ್, ಲೆಜೆಂಡ್ಸ್ ಎಲ್ಲರೂ ರಿಯಲ್ ಫೈಟರ್ ಎಂದು ಫೆಂಟಾಸ್ಟಿಕ್ ಪಂತ್ನ ಕೊಂಡಾಡ್ತಿದ್ದಾರೆ.
ಉತ್ತರಾಖಾಂಡದ ರೂರ್ಕಿ ಬಳಿ ನಡೆದ ರಣ ಭೀಕರ ಅಪಘಾತವದು. ಟೀಮ್ ಇಂಡಿಯಾ ಡೇರ್ ಡೆವಿಲ್ ಬ್ಯಾಟರ್ ರಿಷಭ್ ಪಂತ್ ಭೀಕರ ಅಪಘಾತಕ್ಕೆ ತುತ್ತಾಗಿದ್ರು. ಬೆಂಜ್ ಕಾರು ಧಗಧಗನೇ ಹೊತ್ತಿ ಉರಿದಿತ್ತು. ಆ ದೃಶ್ಯವನ್ನ ನೋಡಿದ ಎಲ್ಲರೂ ಹೇಳಿದ್ದು 2 ಮಾತುಗಳನ್ನ. ಒಂದು ಪಂತ್ ಬದುಕುಳಿದಿದ್ದೇ ಪವಾಡ ಅನ್ನೋದು. ಇನ್ನೊಂದು ಪಂತ್ ಕಥೆ ಮುಗೀತು ಅನ್ನೋದು. ಆದ್ರೆ ಸಾವನ್ನೇ ಗೆದ್ದು ಬಂದ ಪಂತ್ ನಿರೀಕ್ಷೆಯೂ ಮಾಡದ ರೀತಿಯಲ್ಲಿ ಕ್ರಿಕೆಟ್ ಫೀಲ್ಡ್ಗೆ ಕಮ್ಬ್ಯಾಕ್ ಮಾಡಿದ್ರು. ನಿನ್ನೆ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಪರ್ಡ್ನಲ್ಲಿ ನಡೆದ ಘಟನೆ ಪಂತ್ ಎಂತಹ ಹೋರಾಟಗಾರ ಅನ್ನೋದನ್ನು ಮತ್ತೊಮ್ಮೆ ಕ್ರಿಕೆಟ್ ಜಗತ್ತಿಗೆ ತಿಳಿಸಿದೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಮಳೆಯಿಂದಾಗಿ ನದಿಗೆ ಪಲ್ಟಿಯಾದ ವಾಹನ.. ರಾಜ್ಯದಲ್ಲಿ ಮಳೆಯಿಂದ ಏನೆಲ್ಲ ಆಗಿದೆ..?
ಮೊದಲ ದಿನ: ನೋವಲ್ಲಿ ನರಳಾಟ, ಮೈದಾನದಿಂದ ಆಸ್ಪತ್ರೆಗೆ
ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲ ದಿನದಾಟದ ಅಂತ್ಯದ ಹೊತ್ತಲ್ಲಿ ದುರ್ಘಟನೆ ನಡೆದು ಬಿಡ್ತು. ಕ್ರಿಸ್ವೋಕ್ಸ್ ಬೌಲಿಂಗ್ನಲ್ಲಿ ರಿಷಭ್ ಪಂತ್ ಭಾರೀ ಇಂಜುರಿಗೆ ತುತ್ತಾದ್ರು. ಬಾಲ್ ಪಾದಕ್ಕೆ ರಭಸಕ್ಕೆ ರಕ್ತ ಚಿಮ್ಮಿತು. ಓಡೋದು, ನಡೆಯೋದು ಬಿಡಿ. ಕನಿಷ್ಟ ಕಾಲನ್ನೂರಿ ನಿಲ್ಲಲಾಗದಷ್ಟು ನೋವಲ್ಲಿ ಪಂತ್ ಒದ್ದಾಡಿದ್ರು. ಗಾಲ್ಫ್ ಕಾರ್ಟ್ನಲ್ಲಿ ಮೈದಾನ ತೊರೆದ ಪಂತ್, ಆಂಬುಲೆನ್ಸ್ ಹತ್ತಿ ನೇರವಾಗಿ ಆಸ್ಪತ್ರೆಗೆ ಹೋದ್ರು.
2ನೇ ದಿನ: ಸಹಿಸಲಸಾಧ್ಯ ನೋವಲ್ಲೂ ಬ್ಯಾಟಿಂಗ್ಗೆ ಬಂದ ಪಂತ್
ಆ ಇಂಜುರಿಯೇ ಪ್ರಮಾಣವೇ ಪಂತ್ ಸರಣಿಯಿಂದ ಔಟ್ ಅನ್ನೋದನ್ನ ಸಾರಿ ಸಾರಿ ಹೇಳಿತ್ತು. ಬಿಸಿಸಿಐ ಕೂಡ 6 ವಾರ ಪಂತ್ ಕ್ರಿಕೆಟ್ನಿಂದ ಔಟ್ ಅನ್ನೋದನ್ನ ಕನ್ಫರ್ಮ್ ಮಾಡ್ತು. ಶಾರ್ದೂಲ್ ಠಾಕೂರ್ ಔಟಾದ ಬಳಿಕ ಎಲ್ಲರಿಗೂ ಅಚ್ಚರಿ ಕಾದಿತ್ತು. ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದು ರಿಷಭ್ ಪಂತ್.
ಇದನ್ನೂ ಓದಿ: WWE ದಿಗ್ಗಜ ಹಲ್ಕ್ ಹೋಗಾನ್ ಇನ್ನಿಲ್ಲ.. ಹಠಾತ್ ನಿಧನಕ್ಕೆ ಆಗಿದ್ದೇನು..?
ಕಾಲ್ಬೆರಳು ಮುರಿದಿದೆ. ಅಸಾಧ್ಯ ನೋವಿದೆ. ಡಾಕ್ಟರ್ ನೀವು 6 ವಾರ ಕ್ರಿಕೆಟ್ ಆಡೋಕೆ ಆಗಲ್ಲ ಎಂದಿದ್ದಾರೆ. ತಂಡಕ್ಕಾಗಿ ಹೋರಾಡಲು ಪಂತ್ ಮೈದಾನಕ್ಕಿಳಿದೇ ಬಿಟ್ರು. ಛಲದಂಕಮಲ್ಲ ಪಂತ್ ಧೈರ್ಯ, ಕಮಿಟ್ಮೆಂಟ್ಗೆ ಕಂಡು ಇಂಗ್ಲೆಂಡ್ ಫ್ಯಾನ್ಸ್ ಕೂಡ ಪುಳಕಿರಾದ್ರು.
ತಂಡಕ್ಕಾಗಿ ಹೋರಾಟ, ಅರ್ಧಶತಕ ಸಿಡಿಸಿ ಸಂಭ್ರಮ.!
37 ರನ್ಗಳೊಂದಿಗೆ 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಪಂತ್, ಸಹಿಸಲಾಗದ ನೋವಿನ ನಡುವೆಯೂ ಇಂಗ್ಲೆಂಡ್ಗೆ ಬೌಲರ್ಗಳಿಗೆ ಕೌಂಟರ್ ಕೊಟ್ರು. ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್ ಪಂತ್ ಧೈರ್ಯಕ್ಕೆ ಶಾಕ್ ಆದ್ರು. ಕೆಚ್ಚೆದೆಯ ಹೋರಾಟ ನಡೆಸಿದ ಪಂತ್ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಈ ಹಾಫ್ ಸೆಂಚುರಿ ನೂರು ಶತಕಕ್ಕೆ ಸಮ.
ಇದನ್ನೂ ಓದಿ: ತ್ರಿವಿಕ್ರಮ್ ಫ್ಯಾನ್ಸ್ಗೆ ಗುಡ್ನ್ಯೂಸ್.. ಒಂದೇ ಫ್ರೇಮ್ನಲ್ಲಿ ಬಿಗ್ಬಾಸ್ ದೋಸ್ತರು; ವಿಶೇಷ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ