/newsfirstlive-kannada/media/post_attachments/wp-content/uploads/2024/10/RISHAB_PANT-5.jpg)
ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಗೆ ರಿಷಭ್​ ಪಂತ್​​ ಗುಡ್​ ಬೈ ಹೇಳಲು ನಿರ್ಧರಿಸಿರೋ ಸುದ್ದಿ ಭಾರತೀಯ ಕ್ರಿಕೆಟ್​ ಲೋಕದಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಪಂತ್​ ಡೆಲ್ಲಿ ಫಸ್ಟ್​ ರಿಟೈನ್ಶನ್​ ಚಾಯ್ಸ್​ ಎಂದೇ ಎಲ್ಲರೂ ಊಹಿಸಿದ್ರು. ಪಂತ್​ ಡೆಲ್ಲಿಗೆ ಗುಡ್​​ ಬೈ ಹೇಳಲು ನಿರ್ಧರಿಸಿ ಶಾಕ್​ ಕೊಟ್ಟಿದ್ದಾರೆ.
ಇಂಡೋ-ಕಿವೀಸ್​​ ಟೆಸ್ಟ್​ ಫೈಟ್​​ನ ನಡುವೆ ಐಪಿಎಲ್​ನ ರಿಟೈನ್ಶನ್​​ ಸುದ್ದಿಗಳು ಸಖತ್​ ಸೌಂಡ್​ ಮಾಡ್ತಿವೆ. ರಿಟೈನ್ಶನ್​ ಡೆಡ್​ಲೈನ್​ ಹತ್ತಿರವಾದಂತೆ, ಶಾಕಿಂಗ್​ ಸುದ್ದಿಗಳು ಹೊರಬೀಳ್ತಿವೆ. ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್​​ ರಿಷಭ್​ ಪಂತ್,​ ಫ್ರಾಂಚೈಸಿಗೆ ಗುಡ್​ ಬೈ ಹೇಳ್ತಿರೋ ಸುದ್ದಿ ಸದ್ಯ ಸೆನ್ಸೇಷನ್​ ಸೃಷ್ಟಿಸಿದೆ. ಡೆಲ್ಲಿಗೆ ಗುಡ್​ ಬೈ ಹೇಳಿ ಆಕ್ಷನ್​ ಅಖಾಡದಲ್ಲಿ ಅಗ್ನಿಪರೀಕ್ಷೆಗಿಳಿಯಲು ಪಂತ್​ ಸಜ್ಜಾಗಿದ್ದಾರೆ.
8 ವರ್ಷಗಳ ಬಾಂಧವ್ಯಕ್ಕೆ ಪಂತ್​ ಗುಡ್​ ಬೈ?
2016ರ ಅಂಡರ್​ 19 ವಿಶ್ವಕಪ್​ ಟೂರ್ನಿಯಲ್ಲಿ ಮಿಂಚಿದ ರಿಷಭ್​ ಪಂತ್, ಅದೇ ವರ್ಷ ಡೆಲ್ಲಿ ಕ್ಯಾಪಿಟಲ್ಸ್​​ ಎಂಟ್ರಿ ಕೊಟ್ರು. ಅಂದಿನಿಂದ 2024ರವರೆಗೆ ಸುದೀರ್ಘ 8 ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್​ನ ಭಾಗವಾಗಿದ್ದ ಪಂತ್​, ಮುಂದೆಯೋ ಅದೇ ಫ್ರಾಂಚೈಸಿಯಲ್ಲಿ ಉಳೀತಾರೆ ಅನ್ನೋದು ಎಲ್ಲರ ಗೆಸ್​ ಆಗಿತ್ತು. ಪಂತ್ ಫ್ರಾಂಚೈಸಿಯಿಂದ ಹೊರ ಬರಲು ನಿರ್ಧರಿಸಿರೋ ಸುದ್ದಿ ಸದ್ಯ​ ಶಾಕ್​ ಕೊಟ್ಟಿದೆ. ಕಳೆದ ಕೆಲ ವಾರಗಳಿಂದ ಇದು ಟ್ರೆಂಡಿಂಗ್​ ಟಾಪಿಕ್​ ಆಗಿದೆ.
ಇದನ್ನೂ ಓದಿ:iPhone-16 ಬ್ಯಾನ್..! Apple ಸಂಸ್ಥೆಗೆ ಬಿಗ್ ಶಾಕ್ ಕೊಟ್ಟ ಸರ್ಕಾರ
ರಹಸ್ಯ ರಿವೀಲ್.​.!
ಪಂತ್​​ ಡೆಲ್ಲಿ ಕ್ಯಾಪಿಟಲ್ಸ್​​ ತಂಡ ತೊರೆಯಲು ನಿರ್ಧರಿಸಿರೋ ಸುದ್ದಿ ಕಳೆದ ಕೆಲ ದಿನಗಳಿಂದ ಸದ್ದು ಮಾಡ್ತಿದೆ. ಇದಕ್ಕೆ ಕಾರಣ ಏನು ಅನ್ನೋದು ಮಾತ್ರ ಇಷ್ಟು ದಿನ ರಹಸ್ಯವಾಗೇ ಉಳಿದಿತ್ತು. ಇದೀಗ ಪಂತ್​ ಫ್ರಾಂಚೈಸಿ ತೊರೆಯುವ ದೃಢ ನಿರ್ಧಾರ ಮಾಡಿರೋದ್ರ ಹಿಂದಿನ ಸೀಕ್ರೆಟ್​ ರಿವೀಲ್​ ಆಗಿದೆ. 8 ವರ್ಷಗಳ ಭಾಂದ್ಯವಕ್ಕೆ ಬ್ರೇಕ್​ ಹಾಕಲು ಪಂತ್​ ನಿರ್ಧರಿಸಿರೋದಕ್ಕೆ ಆ ಎರಡು ವಿಚಾರಗಳೇ ಪ್ರಮುಖ ಕಾರಣ ಅನ್ನೋದು ಇದೀಗ ರಿವೀಲ್​ ಆಗಿದೆ.
18 ಕೋಟಿ ಕೊಡಲು ರೆಡಿಯಾಗಿತ್ತು ಡೆಲ್ಲಿ ಕ್ಯಾಪಿಟಲ್ಸ್​
ಇಂಡೋ-ಬಾಂಗ್ಲಾ ನಡುವಿನ ಟೆಸ್ಟ್​ ಸರಣಿ ಅಂತ್ಯದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ಓನರ್ಸ್​ ಪಾರ್ಥ್​ ಜಿಂದಾಲ್​, ಕಿರಣ್​ ಕುಮಾರ್​ ಗ್ರಾಂಧಿ ರಿಷಭ್​ ಪಂತ್ ಜೊತೆಗೆ​ ಸಭೆ ನಡೆಸಿದ್ರು. ರಿಟೈನ್ಶನ್​ ವಿಚಾರವೇ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಿದೆ. ಮೀಟಿಂಗ್​ನಲ್ಲಿ ಪಂತ್​ಗೆ 18 ಕೋಟಿ ಕೊಡಲು ಫ್ರಾಂಚೈಸಿ ಓನರ್ಸ್​ ನಿರ್ಧರಿಸಿರೋ ವಿಚಾರವನ್ನ ತಿಳಿಸಿದ್ದಾರೆ. ಪಂತ್​ ಇನ್ನಷ್ಟು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಓನರ್ಸ್​​ ನಿಮಗೆ 18 ಕೋಟಿಯೇ ಸಾಕು ಎಂದಿದ್ದಾರೆ. ಈ ವಿಚಾರ ಪಂತ್​ ಬೇಸರಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ನಿಮಗೆ ಇಷ್ಟೇ ಸಾಕು ಎಂಬ ಮಾತಿಗೆ ಬೇಸರಗೊಂಡಿರೋ ಪಂತ್​​, ಫ್ರಾಂಚೈಸಿ ತೊರೆಯೋ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನಾನು ಆಕ್ಷನ್​ಗೆ ಬಂದ್ರೆ ಎಷ್ಟು ಹಣ ಸಿಗುತ್ತೆ ಅಂತಾ ಪಂತ್​ ಟ್ವೀಟ್​ ಮಾಡಿದ್ದು, ಅದೇ ರಾತ್ರಿಯೇ. ಆ ಮಿಡ್​​ನೈಟ್​ ಟ್ವೀಟ್​​ನಿಂದಲೇ ಪಂತ್​ ಡೆಲ್ಲಿ ತೊರೆಯುತ್ತಾರೆ ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ:ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ, 9 ಮಂದಿ ಗಂಭೀರ.. ಹಬ್ಬಕ್ಕೆ ಊರಿಗೆ ಹೋಗುವವರೇ ಹುಷಾರು..
ಸಪೋರ್ಟ್​​​ ಸ್ಟಾಫ್​ ಬೇಡಿಕೆಗೂ ನೋ ಎಂದ ಫ್ರಾಂಚೈಸಿ
ರಿಟೈನ್ಶನ್​ ಹಣದ ವಿಚಾರ ಮಾತ್ರವಲ್ಲ, ಸಪೋರ್ಟ್​ ಸ್ಟಾಫ್​ ವಿಚಾರದಲ್ಲೂ ಪಂತ್​ ಹಾಗೂ ಫ್ರಾಂಚೈಸಿ ನಡುವೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಹೆಡ್​ಕೋಚ್​ ಸ್ಥಾನದಿಂದ ರಿಕಿ ಪಾಂಟಿಂಗ್​, ಡೈರೆಕ್ಟರ್​ ಹುದ್ದೆಯಿಂದ ಸೌರವ್​ ಗಂಗೂಲಿಗೆ ಕೊಕ್​ ಕೊಟ್ಟ ಬಗ್ಗೆಯೂ ಚರ್ಚೆಯಾಗಿದೆ. ಇದಕ್ಕೆ ಪಂತ್​ ಬೇಸರ ವ್ಯಕ್ತಪಡಿಸಿ ತಮಗೆ ಬೇಕಾದ ಸಪೋರ್ಟ್​ ಸ್ಟಾಫ್​ಗೂ ಬೇಡಿಕೆ ಇಟ್ಟಿದ್ರಂತೆ. ಇದಕ್ಕೂ ಫ್ರಾಂಚೈಸಿ ನೋ ಎಂದಿದೆ. ಫ್ರಾಂಚೈಸಿ ತೊರೆಯೋ ನಿರ್ಧಾರ ಮಾಡಿರೋದಕ್ಕೆ ಇದೂ ಒಂದು ಕಾರಣ.
ಒಟ್ಟಿನಲ್ಲಿ ಎರಡು ಬಲವಾದ ಕಾರಣಗಳಿಂದ ಪಂತ್,​ ಡೆಲ್ಲಿ ಫ್ರಾಂಚೈಸಿ ತೊರೆಯುವ ಅತಿದೊಡ್ಡ ನಿರ್ಧಾರ ತಳೆದಿದ್ದಾರೆ. ಸುದ್ದಿ ಅನ್ನೋ ಅಧಿಕೃತವಾಗಿಲ್ಲ. ಅದಾಗಲೇ ಹಲವು ಫ್ರಾಂಚೈಸಿಗಳು ಪಂತ್​ಗೆ ಗಾಳ ಹಾಕಲು ಸ್ಕೆಚ್​ ಹಾಕಿ ಕುಳಿತಿವೆ. ಸದ್ಯ ಮುನಿಸಿಕೊಂಡಿರುವ ಪಂತ್​ನ ಡೆಲ್ಲಿ ಫ್ರಾಂಚೈಸಿ ಮನವೊಲಿಸುತ್ತಾ? ಅಥವಾ ಸಿಟ್ಟಾಗಿರೋ ಪಂತ್​ ಹರಾಜಿಗೆ ಬರ್ತಾರಾ? ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us