newsfirstkannada.com

ಅಭಿಷೇಕ್​ ಅದ್ಭುತ ಆಟ.. ಪಂಜಾಬ್​ಗೆ 175 ರನ್​ಗಳ ಟಾರ್ಗೆಟ್​ ನೀಡಿದ ಪಂತ್​ ಪಡೆ

Share :

Published March 23, 2024 at 5:28pm

Update March 23, 2024 at 5:41pm

  ಅಭಿಷೇಕ್ ಪೊರೆಲ್​ ಅದ್ಭುತ ಆಟಕ್ಕೆ ಬೆರಗಾದ ಡೆಲ್ಲಿ ಫ್ಯಾನ್ಸ್​

  10 ಎಸೆತಕ್ಕೆ 32 ರನ್​ ಬಾರಿಸಿ ತಂಡಕ್ಕೆ ನೆರವಾದ ಡೆಲ್ಲಿ ಹುಡುಗ

  ಪಂಜಾಬ್​ ನೆಲದಲ್ಲಿ ಬ್ಯಾಟ್​​ ಬೀಸಿದ 21 ವರ್ಷದ ಯಂಗ್​ ಬಾಯ್​

ರಿಷಭ್​ ಪಂತ್​ ನಾಯಕತ್ವದ ಡೆಲ್ಲಿ ತಂಡ ಪಂಬಾಜ್​ ಕಿಂಗ್ಸ್​ಗೆ 175 ರನ್​ಗಳ ಟಾರ್ಗೆಟ್​ ನೀಡಿದೆ. ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಶಿಖರ್​ ಧವನ್​ ನಾಯಕತ್ವದ ತಂಡ ಇದೀಗ ಪಂತ್​ ತಂಡ ಹಾಕಿದ ಸವಾಲನ್ನು ಬೀಟ್​ ಮಾಡಲು ಮುಂದಾಗಿದೆ.

ಟಾಸ್​ ಸೋತು ಬ್ಯಾಟಿಂಗ್​ ಇಳಿದ ಡೆಲ್ಲಿ ತಂಡ ಓಪನಿಂಗ್ಸ್​ಗೆ ಡೇವಿಡ್​​ ವಾರ್ನರ್​ ಮತ್ತು ಮಿಚೆಲ್​ ಮಾರ್ಷ್​ರನ್ನು ಕಣಕ್ಕಿಳಿಸಿದರು. 21 ಎಸೆತಗಳನ್ನ ಎದುರಿಸಿದ ಡೇವಿಡ್​ ವಾರ್ನರ್​ 3 ಬೌಂಡರಿ, 2 ಸಿಕ್ಸ್​ ಸೇರಿ 29 ರನ್​ ಬಾರಿಸಿದರು. ಬಳಿಕ ಹರ್ಷಲ್​ ಪಟೇಲ್​​ ಎಸೆತಕ್ಕೆ ಜಿತೇಶ್​ಗೆ ಕ್ಯಾಚ್​ ನೀಡಿ ಹೊರನಡೆದರು. ಅತ್ತ ಮಾರ್ಷ್​ ಕೂಡ 12 ಎಸೆತದಲ್ಲಿ 2 ಬೌಂಡರಿ ಮತ್ತು ಸಿಕ್ಸ್​ ಬಾರಿಸುವ ಮೂಲಕ 20 ರನ್​ ಗಳಿಸಿದರು. ಬಳಿಕ ಅರ್ಷದೀಪ್​ ಎಸೆತಕ್ಕೆ ಚಾಹರ್​ಗೆ ಕ್ಯಾಚ್​ ನೀಡಿ ಹೊರನಡೆದರು.

ಶಾಯ್ ಹೋಪ್​ 25 ಎಸೆತಕ್ಕೆ 33 ರನ್​ ಬಾರಿಸಿದ್ದಾರೆ. ಅದರಲ್ಲಿ 2 ಫೋರ್​ ಮತ್ತು 2 ಸಿಕ್ಸ್ ಬಾರಿಸಿದ್ದಾರೆ. ಆದರೆ ರಬಾಡ ಎಸೆತಕ್ಕೆ ಹರ್ಪ್ರೀತ್​ಗೆ ಕ್ಯಾಚ್​ ನೀಡಿ ಹೊರನಡೆದರು. ಬಳಿಕ ಬಂದ ಪಂತ್​ ಕೂಡ 18 ರನ್​ ಬಾರಿಸಿ ಔಟ್​ ಆದರು.

ಇದನ್ನೂ ಓದಿ: ಅಬ್ಬಾ.. ಈ ತಂಡದಲ್ಲಿದ್ದಾರೆ 6 ವಿಕೆಟ್​ ಕೀಪರ್​! ಇಂದು ಯಾರಿಗೆ ಒಲಿಯಲಿದೆ ಅದೃಷ್ಟ?

ಪಂತ್​ ಬಳಿಕ ಬ್ಯಾಟ್ಸ್​ಮನ್​ಗಳಾದ ರಿಕಿ, ತ್ರಿಸ್ಟನ್, ಸುಮಿತ್​ ಕುಮಾರ್​​ ತರಗೆಲೆಯಂತೆ ಔಟ್​ ಆದರು. ಅಕ್ಸರ್​ ಪಟೇಲ್​ ಒಂದು ಸಿಕ್ಸ್​, 3 ಬೌಂಡರಿ ಸೇರಿ 21 ರನ್​ ಬಾರಿಸಿದರು. ಬಳಿ ರನ್​ ಆಗುವ ಮೂಲಕ ಪೆವಿಲಿಯನತ್ತ ಸಾಗಿದರು. ಸುಮಿಂತ್​ ಬರೀ 2 ರನ್​ ಆಡಿ ಔಟ್​ ಆದರು.

ಅಭಿಷೇಕ್​ ಅದ್ಭುತ ಆಟ

ಅಭಿಷೇಕ್ ಪೊರೆಲ್ ಅದ್ಭುತ ಆಟ ಮಾತ್ರ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.ಬರೀ 10 ಎಸೆತಕ್ಕೆ 4 ಫೋರ್​, 2 ಸಿಕ್ಸ್​ ಬಾರಿಸುವ ಮೂಲಕ 32 ರನ್​ ಬಾರಿಸಿದ್ದಾರೆ.

ಒಟ್ಟಿನಲ್ಲಿ ಡೆಲ್ಲಿ ತಂಡ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 173 ರನ್​ಗಳ ಟಾರ್ಗೆಟ್​ ನೀಡಿದೆ. ಇನ್ನು ಅರ್ಷದೀಪ್​ ಮತ್ತು ಹರ್ಷಲ್​ ಪಟೇಲ್​ ತಲಾ 2 ವಿಕೆಟ್​ ಕಬಳಿಸಿದರೆ, ರಬಾಡ, ಹರ್ಪ್ರೀತ್​, ರಾಹುಲ್​ ಚಾಹರ್​ ತಲಾ ಒಂದೊಂದು ವಿಕೆಟ್​ ಕಬಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಷೇಕ್​ ಅದ್ಭುತ ಆಟ.. ಪಂಜಾಬ್​ಗೆ 175 ರನ್​ಗಳ ಟಾರ್ಗೆಟ್​ ನೀಡಿದ ಪಂತ್​ ಪಡೆ

https://newsfirstlive.com/wp-content/uploads/2024/03/Abhishek-Porel.jpg

Load More