6,6,6,6,6,4,4,4,4,4,4,4,4,4; ಬರೋಬ್ಬರಿ 99 ರನ್​ ಚಚ್ಚಿದ ಪಂತ್ ಬ್ಯಾಟಿಂಗ್​ ಹೇಗಿತ್ತು?

author-image
Ganesh Nachikethu
Updated On
6,6,6,6,6,4,4,4,4,4,4,4,4,4; ಬರೋಬ್ಬರಿ 99 ರನ್​ ಚಚ್ಚಿದ ಪಂತ್ ಬ್ಯಾಟಿಂಗ್​ ಹೇಗಿತ್ತು?
Advertisment
  • ಮೊದಲ ಇನ್ನಿಂಗ್ಸ್​​ನಲ್ಲಿ ಗಾಯಕ್ಕೆ ತುತ್ತಾಗಿದ್ದ ರಿಷಬ್​ ಪಂತ್​​
  • 2ನೇ ಇನ್ನಿಂಗ್ಸ್​​ನಲ್ಲಿ ಬರೋಬ್ಬರಿ 99 ರನ್​ ಬಾರಿಸಿದ ಸ್ಟಾರ್​​​!
  • ವಿಕೆಟ್​ ಕೀಪರ್​​ ಬ್ಯಾಟರ್​​ ರಿಷಬ್ ಪಂತ್​ ಬ್ಯಾಟಿಂಗ್​ ಹೇಗಿತ್ತು?

ಸದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​​​ ಮಧ್ಯೆ ಮೊದಲ ಟೆಸ್ಟ್​​ ಶುರುವಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಗಾಯಕ್ಕೆ ತುತ್ತಾಗಿದ್ದ ಟೀಮ್​ ಇಂಡಿಯಾ ವಿಕೆಟ್​​ ಕೀಪರ್​ ಬ್ಯಾಟರ್​​ ರಿಷಬ್​​ ಪಂತ್​​ 2ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್​​ಗೆ ಇಳಿಯೋದು ಡೌಟ್​​ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ, ಪಾಸಿಟಿವ್​​ ಇಂಟೆಂಟ್​ ಜತೆಗೆ ಬ್ಯಾಟಿಂಗ್​ ಮಾಡುತ್ತಿದ್ದ ಸರ್ಫರಾಜ್​ ಖಾನ್​ಗೆ ಸಾಥ್​ ಕೊಟ್ಟರು ಪಂತ್.

ಸರ್ಫರಾಜ್​ ಖಾನ್​ಗೆ ಸಾಥ್​ ಕೊಟ್ಟ ಪಂತ್​​

4ನೇ ವಿಕೆಟ್‌ಗೆ ರಿಷಬ್​​​ ಪಂತ್​ ಹಾಗೂ ಸರ್ಫರಾಜ್ ಖಾನ್‌ ಶತಕದ ಜೊತೆಯಾಟ ಆಡಿದ್ರು. ಈ ಜೋಡಿ 221 ಎಸೆತಗಳಲ್ಲಿ 177 ರನ್‌ ಕಾಣಿಕೆ ನೀಡಿತು. ಸರ್ಫರಾಜ್‌ ಖಾನ್​ ಬರೋಬ್ಬರಿ 18 ಬೌಂಡರಿ, 3 ಸಿಕ್ಸರ್ ನೆರವಿನಿಂದ 150 ರನ್‌ ಸಿಡಿಸಿ ವಿಕೆಟ್​​ ಒಪ್ಪಿಸಿದ್ರು.

99 ರನ್​ಗೆ ವಿಕೆಟ್​ ಒಪ್ಪಿಸಿದ ಪಂತ್​​

ಸರ್ಫರಾಜ್‌ ಔಟ್ ಆದ ಮೇಲೂ ರಿಷಬ್​​ ಪಂತ್​​ ಅಬ್ಬರದ ಬ್ಯಾಟಿಂಗ್​ ಮಾಡಿದ್ರು. ನ್ಯೂಜಿಲೆಂಡ್​ ಬೌಲರ್​​ಗಳ ಬೆಂಡೆತ್ತಿದ ಪಂತ್​ ಟೀಮ್​ ಇಂಡಿಯಾಗೆ ಗೆಲುವಿನ ಕನಸು ಚಿಗುರುವಂತೆ ಮಾಡಿದ್ರು. ತಾನು ಎದುರಿಸಿದ 105 ಬಾಲ್​​ನಲ್ಲಿ ಬರೋಬ್ಬರಿ 99 ರನ್​​ ಚಚ್ಚಿ 1 ರನ್​ನಿಂದ ಶತಕ ವಂಚಿತರಾದ್ರು. ಈ ಪೈಕಿ ಬರೋಬ್ಬರಿ 9 ಬೌಂಡರಿ, 5 ಸಿಕ್ಸರ್​ ಸೇರಿವೆ.

ದಾಖಲೆ ಬರೆದ ಪಂತ್

ರಿಷಬ್ ಪಂತ್ 2ನೇ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತಲುಪಿದ್ದಾರೆ. 131 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 61 ಸಿಕ್ಸರ್‌ಗಳನ್ನು ಬಾರಿಸಿದ್ದ ಕಪಿಲ್ ದೇವ್ ಅವರನ್ನೇ ಪಂತ್ ಹಿಂದಿಕ್ಕಿದ್ದಾರೆ. ಪಂತ್‌ ಅವರ ಹೆಸರಿನಲ್ಲಿ ಸದ್ಯ 64 ಸಿಕ್ಸರ್‌ಗಳು ಸೇರಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment