newsfirstkannada.com

ಆ್ಯಕ್ಸಿಡೆಂಟ್​​ ಬಳಿಕ ಭರ್ಜರಿ ಕಮ್​ಬ್ಯಾಕ್​​.. 3 ಸಿಕ್ಸರ್​​.. 4 ಫೋರ್​​.. 51 ರನ್​ ಚಚ್ಚಿದ ಪಂತ್​​!

Share :

Published March 31, 2024 at 10:22pm

    ಇಂದು ಸಿಎಸ್​​ಕೆ, ಡೆಲ್ಲಿ ಕ್ಯಾಪಿಟಲ್ಸ್​ ಮಧ್ಯೆ ಜಿದ್ದಾಜಿದ್ದಿ ಪಂದ್ಯ

    ಚೆನ್ನೈ ವಿರುದ್ಧ ರಿಷಬ್​ ಪಂತ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು

    ಆ್ಯಕ್ಸಿಡೆಂಟ್​ ಆದ ಬಳಿಕ ಮೊದಲ ಬಾರಿ ಅರ್ಧಶತಕ ಸಿಡಿಸಿದ್ರು!

ಇಂದು ಡಾ. ವೈಎಸ್​​ ರಾಜಶೇಖರ್​​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ರು.

ಒಂದೂವರೆ ವರ್ಷದ ಹಿಂದೆ ಸಂಭವಿಸಿದ ಭೀಕರ ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರೋ ರಿಷಬ್ ಪಂತ್ ಮೊದಲ ಬಾರಿಗೆ ಭರ್ಜರಿ ಕಮ್​ಬ್ಯಾಕ್​ ಮಾಡಿದ್ರು. ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 160 ಇತ್ತು.

ಇನ್ನು, ತಾನು ಆಡಿದ ಕೇವಲ 32 ಎಸೆತಗಳಲ್ಲಿ ಪಂತ್​ ಬರೋಬ್ಬರಿ 51 ರನ್​ಗಳು ಸಿಡಿಸಿದ್ರು. ಇದರಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸೇರಿವೆ. ವಿಶೇಷ ಎಂದರೆ ಪಂತ್​ ಮೊದಲ 23 ಬಾಲ್​​ಗಳಲ್ಲಿ 23 ರನ್‌ ಕಲೆ ಹಾಕಿದ್ದರು. ಇದಾದ ಬಳಿಕ ಅದ್ಭುತ ಬ್ಯಾಟಿಂಗ್ ಮಾಡಿ ಮುಂದಿನ 9 ಎಸೆತಗಳಲ್ಲಿ 28 ರನ್ ಸಿಡಿಸಿದ್ರು.

ಇದನ್ನೂ ಓದಿ: VIDEO: ಜಸ್ಟ್​​ ವಾವ್ಹ್.. ಅದ್ಧೂರಿಯಾಗಿ ಬರ್ತ್​ಡೇ ಸೆಲೆಬ್ರೇಟ್​​ ಮಾಡಿದ ನಟಿ ರಾಧಿಕಾ ಪಂಡಿತ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ್ಯಕ್ಸಿಡೆಂಟ್​​ ಬಳಿಕ ಭರ್ಜರಿ ಕಮ್​ಬ್ಯಾಕ್​​.. 3 ಸಿಕ್ಸರ್​​.. 4 ಫೋರ್​​.. 51 ರನ್​ ಚಚ್ಚಿದ ಪಂತ್​​!

https://newsfirstlive.com/wp-content/uploads/2024/03/Pant_Fifty.jpg

Load More