/newsfirstlive-kannada/media/post_attachments/wp-content/uploads/2025/04/rishab-shetty5.jpg)
ಕಾಂತಾರ ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರೋ ನಟ ಎಂದರೆ ರಿಷಬ್ ಶೆಟ್ಟಿ. ಕಾಂತಾರ ಬಳಿಕ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರೋ ಸ್ಟಾರ್ ನಟ ಕೂಡ ಹೌದು. ಸದ್ಯ ಕುಂದಾಪುರದ ಶೆಟ್ರು ಕಾಂತಾರ ಚಾಪ್ಟರ್ 1ನಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಆರಂಭಕ್ಕೂ ಮುನ್ನವೇ ಶೋಗೆ ಭಾರೀ ಸಂಕಷ್ಟ!
ಒಂದು ಕಡೆ ರಿಷಬ್ ಶೆಟ್ಟಿ ಶೈನ್ ಆಗುತ್ತಿದ್ದರೇ, ಮತ್ತೊಂದು ಕಡೆ ನಟನ ಮಕ್ಕಳು ರ್ಯಾಂಪ್ ವಾಕ್ ಮಾಡುತ್ತಾ ಮಿರ ಮಿರ ಮಿಂಚುತ್ತಿದ್ದಾರೆ. ಹೌದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಸ್ಯಾಂಡಲ್ವುಡ್ ಮಾತ್ರವಲ್ಲದೇ ಟಾಲಿವುಡ್ ಬಳಿಕ ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.
ಆದ್ರೆ, ನಟ ರಿಷಬ್ ಶೆಟ್ಟಿ ಮುದ್ದಿನ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಪತ್ನಿ ಪ್ರಗತಿ ಶೆಟ್ಟಿ ಅವರೇ ನಿಭಾಯಿಸುತ್ತಿದ್ದಾರೆ. ಇನ್ನೂ, ನಟ ರಿಷಬ್ ಶೆಟ್ಟಿ ಮಕ್ಕಳು ಈಗ ಓಕ್ವುಡ್ ಇಂಡಿಯನ್ ಸ್ಕೂಲ್ (oakwood indian school) ನಲ್ಲಿ ನಡೆದ ಕಿಡ್ಸ್ ರ್ಯಾಂಪ್ ವಾಕ್ನಲ್ಲಿ (kids ramp walk) ಭಾಗವಹಿಸಿದ್ದಾರೆ.
View this post on Instagram
ಇದೇ ವೇಳೆ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಮಕ್ಕಳಾದ ರಣ್‌ವಿತ್ ಮತ್ತು ರಾಧ್ಯಾ ಸೂಪರ್ ಆಗಿ ರ್ಯಾಂಪ್ ವಾಕ್ ಮಾಡಿದ್ದಾರೆ. ರ್ಯಾಂಪ್ ವಾಕ್ ಮಾಡುತ್ತಿರೋ ವಿಡಿಯೋವನ್ನು ಪ್ರಗತಿ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೇ ವಿಡಿಯೋದಲ್ಲಿ ರಣ್‌ವಿತ್ ಮತ್ತು ರಾಧ್ಯಾ ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ