Advertisment

ಕಾಂತಾರಗೆ ತಮಿಳು ಸ್ಟಾರ್ ನಟ ಎಂಟ್ರಿ ಕೊಡ್ತಾರಾ? ವಿಕ್ರಮ್- ರಿಷಬ್​ ಶೆಟ್ಟಿ ಭೇಟಿಯಾಗಿದ್ದೇಕೆ?

author-image
Bheemappa
Updated On
ಕಾಂತಾರಗೆ ತಮಿಳು ಸ್ಟಾರ್ ನಟ ಎಂಟ್ರಿ ಕೊಡ್ತಾರಾ? ವಿಕ್ರಮ್- ರಿಷಬ್​ ಶೆಟ್ಟಿ ಭೇಟಿಯಾಗಿದ್ದೇಕೆ?
Advertisment
  • ರಿಷಬ್​ ಶೆಟ್ಟಿ, ವಿಕ್ರಮ್​ರನ್ನ ಭೇಟಿಯಾಗಿದ್ದು ಕೂತುಹಲಕ್ಕೆ ಕಾರಣ
  • ಕಾಂತಾರದಲ್ಲಿ ನ್ಯೂ ರೋಲ್​ನಲ್ಲಿ ವಿಕ್ರಮ್ ಅವರು ಕಾಣಿಸ್ತಾರಾ?
  • ಕನ್ನಡ ಸಿನಿಮಾದಲ್ಲಿ ನಟ ವಿಕ್ರಮ್ ಅಭಿನಯ ಮಾಡ್ತಾರಾ, ಇಲ್ವಾ?

ಕಾಂತಾರ ಪ್ರೀಕ್ವೆಲ್‌ ಈಗಾಗಲೇ ಶೂಟಿಂಗ್ ಭರದಿಂದ ಸಾಗಿದೆ. ಈ ಚಿತ್ರದ ಪಾತ್ರಕ್ಕಾಗಿ ರಿಷಬ್‌ ಶೆಟ್ಟಿ ಒಂದು ವರ್ಷದಿಂದ ಗಡ್ಡ ಹಾಗೂ ತಲೆಗೂದಲು ಬಿಟ್ಟು ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂತಾರ ಅಧ್ಯಾಯ 1 ಸಿನಿಮಾದ ಕೆಲಸಗಳು ಭರದಿಂದ ಸಾಗಿರುವುದರ ಜೊತೆ ಜೊತೆಗೆ ರಿಷಬ್‌ ಶೆಟ್ಟಿಯವರು ತಮಿಳು ಸ್ಟಾರ್​​ ನಟರೊಬ್ಬರನ್ನ ಭೇಟಿಯಾಗಿದ್ದಾರೆ.

Advertisment

ಇದನ್ನೂ ಓದಿ:ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ.. 700ಕ್ಕೂ ಹೆಚ್ಚು ಮನೆಗಳು ಜಲಾವೃತ, 8 ಗ್ರಾಮಗಳಲ್ಲಿ ಆತಂಕ

publive-image

ರಿಷಬ್​ ಶೆಟ್ಟಿ ನಿರ್ದೇಶನ ಮಾಡಿ, ಅಭಿನಯ ಮಾಡುತ್ತಿರೋ ಬಹು ನಿರೀಕ್ಷಿತ ಮೂವಿ ಕಾಂತಾರ. ಈಗಾಗಲೇ ಇದು ಸೀಕ್ವೆಲ್​ನಲ್ಲಿ ಸಖತ್ ಸದ್ದು ಮಾಡಿತ್ತು. ಅದರಂತೆ ಕಾಂತಾರ ಪ್ರೀಕ್ವೆಲ್‌ ಕೂಡ ವಿಶ್ವಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತೆಂದು ಭಾವಿಸಲಾಗಿದೆ. ಎಲ್ಲದರ ಮಧ್ಯೆ ರಿಷಬ್ ಶೆಟ್ಟಿಯವರು ತಮಿಳಿನ ಸ್ಟಾರ್ ನಟ ವಿಕ್ರಮ್ ಅವರನ್ನು ಭೇಟಿಯಾಗಿದ್ದು ಸಿನಿಮಾ ಮಾಡಲು ನನಗೆ ವಿಕ್ರಮ್ ಸ್ಫೂರ್ತಿಯಾಗಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಸೇಲೋ ಟೇಪ್ ಕಾರ್ಖಾನೆಯಲ್ಲಿ ಭಯಾನಕ ಸ್ಫೋಟ.. ಕ್ಷಣಾರ್ಧದಲ್ಲಿ ಇಡೀ ಫ್ಯಾಕ್ಟರಿಗೆ ಬೆಂಕಿ, ಓರ್ವ ಮಿಸ್

Advertisment


">August 6, 2024

ಈ ಸಂಬಂಧ ರಿಷಬ್ ಶೆಟ್ಟಿ ತಮ್ಮ ಎಕ್ಸ್​ ಅಕೌಂಟ್​ನಲ್ಲಿ ನಟ ವಿಕ್ರಮ್​ರನ್ನ ಭೇಟಿ ಆಗಿರೋ ಫೋಟೋ ಸಮೇತ ಪೋಸ್ಟ್ ಶೇರ್ ಮಾಡಿದ್ದಾರೆ. ಆ್ಯಕ್ಟರ್ ಆಗಲು ನನ್ನ ಪ್ರಯಾಣದಲ್ಲಿ ವಿಕ್ರಮ್ ಸರ್ ಯಾವಾಗಲೂ ಸ್ಫೂರ್ತಿಯಾಗಿದ್ದರು. ಸುದೀರ್ಘವಾಗಿ 24 ವರ್ಷ ಕಾಯುವಿಕೆ ಬಳಿಕ ಸದ್ಯ ಇದೀಗ ನನ್ನ ಸ್ಪೂರ್ತಿಯ ವಿಗ್ರಹ ನೋಡಿ ತುಂಬಾ ಸಂತೋಷವಾಗಿದೆ. ಇವರನ್ನು ನೋಡಿದ ಭೂಮಿಯ ಮೇಲಿನ ಅದೃಷ್ಟಶಾಲಿ ನಾನು ಎಂದಿದ್ದಾರೆ. ನನ್ನಂತಹ ನಟರಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ವಿಕ್ರಮ್ ಸರ್​ಗೆ ಧನ್ಯವಾದಗಳು. ಅವರ ಬಹು ನಿರೀಕ್ಷಿತ ತಂಗಲಾನ್‌ ಮೂವಿ ಬಿಗ್ ಹಿಟ್ ಆಗಲಿ ಎಂದು ಶುಭ ಹಾರೈಸಿದ್ದಾರೆ. ಇದೇ ವೇಳೆ ಕಾಂತಾರ ಸಿನಿಮಾದಲ್ಲಿ ನಟನೆ ಕುರಿತು ಏನನ್ನು ಮಾತನಾಡಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment