Advertisment

VIDEO: ನಟ ರಿಷಬ್​ ಶೆಟ್ಟಿಗೆ ಕಾಂತಾರ ಶೈಲಿಯಲ್ಲಿ ಅಭಯ ನೀಡಿದ ದೈವ.. ಹೇಳಿದ್ದೇನು?

author-image
Veena Gangani
Updated On
VIDEO: ನಟ ರಿಷಬ್​ ಶೆಟ್ಟಿಗೆ ಕಾಂತಾರ ಶೈಲಿಯಲ್ಲಿ ಅಭಯ ನೀಡಿದ ದೈವ.. ಹೇಳಿದ್ದೇನು?
Advertisment
  • ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ ಭಾಗಿ
  • ರಿಷಬ್​ಗೆ ದೈವ ʻಭಯ ಪಡಬೇಡ ನಾನಿದ್ದೇನೆʼ ಎಂದು ಅಭಯ
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ವಿಡಿಯೋ

ಮಂಗಳೂರು: ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ರಿಷಬ್ ಶೆಟ್ಟಿ ಅವರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಕಾಂತಾರ ಚಾಪ್ಟರ್ 1 ಕೆಲಸಗಳು ಸುಸೂತ್ರವಾಗಿ ನಡೆಯಲು ಮತ್ತೆ ದೈವದ ಮೊರೆ ಹೋಗಿದ್ದಾರೆ.

Advertisment

publive-image

ನಟ ರಿಷಬ್ ಶೆಟ್ಟಿ ಮಂಗಳೂರಿನ ಗುರುಪುರದಲ್ಲಿರುವ ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ಭಾಗಿಯಾಗಿದ್ದರು. ಕೋಲದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ರಿಷಬ್​​​ ಶೆಟ್ಟಿಗೆ​ ಕಾಂತಾರ ರೀತಿಯಲ್ಲೇ ದೈವ ಅಭಯ ನೀಡಿದೆ. ಕಾಂತಾರ ಗೆಲುವಿಗಾಗಿ ದೈವದ ಮುಂದೆ ತಲೆಬಾಗಿ ರಿಷಬ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಗ ರಿಷಬ್ ಶೆಟ್ಟಿಗೆ ‘ಧೈರ್ಯ ಕಳೆದುಕೊಳ್ಳದಂತೆ, ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ಹಿಂದೆ ನಾನಿದ್ದೇನೆ’ ಎಂಬ ಅಭಯ ನೀಡಿದೆ.

ಇದನ್ನು ಓದಿ: BIGG BOSS: ಬರೀ ‘ಈಗೋ’ ಆಟ.. ಬಿಗ್​ಬಾಸ್​ ಸ್ಪರ್ಧಿಗಳಿಗೆ ಹೊಸ ಹಣೆಪಟ್ಟಿ ಕಟ್ಟಿದ ಕಿಚ್ಚ; ಕಾರಣವೇನು?

Advertisment

ಸದ್ಯ ಕಾಂತಾರ: ಚಾಪ್ಟರ್ 1’ ಚಿತ್ರವನ್ನು ನಟ ರಿಷಬ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಪಂಜಾಬಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment