/newsfirstlive-kannada/media/post_attachments/wp-content/uploads/2024/08/Rishab-Shetty-2.jpg)
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಡಿವೈನ್​​​ ಸ್ಟಾರ್​ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅದರ ಜೊತೆಗೆ ಅವರ ನಟನೆಯ ಕಾಂತಾರ ಸಿನಿಮಾ ಮನರಂಜನಾ ಸಿನಿಮಾ ಪ್ರಶಸ್ತಿಗೆ ಭಾಜನವಾಗುವ ಮೂಲಕ ಕನ್ನಡಿಗರ ಕೀರ್ತಿ ಮತ್ತು ಸ್ಯಾಂಡಲ್​ವುಡ್​​ ಛಾಪನ್ನು ಮತ್ತಷ್ಟು ಏರಿಸಿದೆ. ಪ್ರಶಸ್ತಿ ಬಂದ ಖುಷಿಯಲ್ಲಿ ನಟ ರಿಷಬ್​ ಶೆಟ್ಟಿ ನ್ಯೂಸ್​ಫಸ್ಟ್ ಕನ್ನಡದ ಜೊತೆಗೆ ಮಾತನಾಡಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ.
ನಾನು ನಟನಾಗಿರಬಹುದು, ನಿರ್ದೇಶಕನಾಗಿರಬಹುದು. ಈ ಎಲ್ಲ ಯಶಸ್ಸು ನನ್ನ ತಂಡಕ್ಕೆ ಸಲ್ಲುತ್ತೆ. ಕಾಂತಾರದ ಸಕಸ್ಸನ್ನು ಅಪ್ಪು ಸರ್​ಗೆ, ದೈವ ನರ್ತಕರು ಮತ್ತು ಅವರು ಕುಟುಂಬ, ದೈವಕ್ಕೆ ನಾನು ಅರ್ಪಿಸಿದ್ದೆ. ಇದರ ಜೊತೆಗೆ ಕನ್ನಡ ಜನತೆಗೆ ಇಲ್ಲಿಯವರೆಗೆ ಬರಲು ಸಪೋರ್ಟ್​​ ಕೊಟ್ಟಿದ್ದಾರೆ. ಇಡೀ ತಂಡದ ಶ್ರಮ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿಕೊಂಡು ಬಂದು ಇವತ್ತು ಕೂಡ ನಾನು ಅದೇ ಟೀಂ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಇಡೀ ತಂಡಕ್ಕೆ ಅರ್ಪಿಸುತ್ತೇನೆ.
/newsfirstlive-kannada/media/post_attachments/wp-content/uploads/2023/06/Kantara-2-1.jpg)
ಇದನ್ನೂ ಓದಿ: ಪುನೀತ್ ಅವರಿಂದ ರಿಷಬ್ ಶೆಟ್ಟಿವರೆಗೆ.. ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ನಟರು, ಸಿನಿಮಾಗಳ ವಿವರ ಇಲ್ಲಿದೆ
ಜನರು ಸಿನಿಮಾ ಮೆಚ್ಚಿಕೊಳ್ಳೋದು ತುಂಬಾ ಮುಖ್ಯವಾಗುತ್ತದೆ. ಜನರು ಒಂದು ಕಿರೀಟವನ್ನು ಕೊಟ್ಟಿರುತ್ತಾರೆ. ಅದರ ಮೇಲೆ ಒಂದು ಗರಿಯಂಥಾ ಪ್ರಶಸ್ತಿ ದೊಡ್ಡ ಜವಾಬ್ದಾರಿಯಾಗುತ್ತೆ. ಇನ್ನು ಮುಂದೆ ಜವಾಬ್ದಾರಿಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕಾಗುತ್ತೆ.
ಪ್ರಶಸ್ತಿಗೋಸ್ಕರ ಸಿನಿಮಾ ಮಾಡೋಕೆ ಅಗಲ್ಲ. ಜನ ಒಪ್ಪಬೇಕು, ಅಲ್ಲಿರುವ ಜ್ಯೂರಿಗಳಿಗೆ ಸಿನಿಮಾ ಇಷ್ಟ ಆಗಬೇಕು. ಸೆಲೆಕ್ಷನ್​ ಕಮಿಟಿಯಲ್ಲಿರುವ ಜ್ಯೂರಿಗಳಿಗೆ, ನ್ಯಾಷನಲ್​ ಅವಾರ್ಡ್​​ ಹ್ಯಾಂಡಲ್​ ಮಾಡುವ ಎಲ್ಲರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ.
ಇದನ್ನೂ ಓದಿ: ಟೆಕ್ಕಿ ವಿಪಿನ್ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್.. ಪತ್ನಿ ಜೊತೆ ಹೋಗಲ್ಲ ಎಂದು ಹೈಡ್ರಾಮಾ! ಸಿಕ್ಕಿದ್ದೆಲ್ಲಿ ಗೊತ್ತಾ?
/newsfirstlive-kannada/media/post_attachments/wp-content/uploads/2023/06/kantara-2.jpg)
ಇಡೀ ತಂಡಕ್ಕೆ ಧನ್ಯವಾದ ಹೇಳಬೇಕು. ಡಿಓಪಿ ಅರವಿಂದ್​ ಕಶ್ಯಪ್​. ಕಾಸ್ಟ್ಯೂಮ್​ ಡಿಸೈನರ್​ ಪ್ರಗತಿ ಶೆಟ್ಟಿ. ಈ ಸಿನಿಮಾವನ್ನು ಮಾಡಲೇಬೇಕು ಎಂದು ಒತ್ತಾಯಿಸಿದ್ದು ನನ್ನ ಹೆಂಡತಿ. ನನ್ನ ಮಗಳು ಅವಳ ಹೊಟ್ಟೆಯ ಹೊಟ್ಟೆಯಲ್ಲಿದ್ದಳು. ಹೊಟ್ಟೆಯಲ್ಲಿ ಇಟ್ಟುಕೊಂಡೇ ಎಲ್ಲಾ ಕೆಲಸ ಮಾಡಿದ್ದಳು. ಅವಳಿಗೆ ಥ್ಯಾಂಕ್ಸ್​ ಹೇಳೋಕೆ ಇಷ್ಟಪಡುತ್ತೇನೆ. ಅದ್ಭುತವಾದ ಸಂಗೀತವನ್ನು ಕೊಟ್ಟು ಸಿನಿಮಾವನ್ನು ಚಂದಗಾಣಿಸಿದ ಅಜನೀಶ್​ ಲೋಕನಾಥ್ ಧನ್ಯವಾದಗಳು. ಅವರದ್ದು ಕಾಂತಾರಕ್ಕೆ ದೊಡ್ಡ ಕೊಡುಗೆ.
ಇದಲ್ಲದೆ ಅಚ್ಯುತ್​, ಕಿಶೋರ್​ ಸಾರ್​ ಎಲ್ಲರಿಗೂ ಥ್ಯಾಂಕ್ಸ್​ ಹೇಳೋಕೆ ಇಷ್ಟಪಡುತ್ತೇನೆ. ಅವರ ಕಾಂಟ್ರಿಬ್ಯೂಷನ್​ನಿಂದ ಸಿನಿಮಾ ಈ ಮಟ್ಟಿಗೆ ಬಂದಿದೆ. ಜೊತೆಗೆ ಧರಣಿ ಗಂಗೆ ಪುತ್ರ ಮತ್ತು ಅವರ ತಂಡ ಪ್ರೊಡಕ್ಷನ್​ ಮತ್ತು ಆರ್ಟ್ಸ್​​ ಡಿಸೈನರ್​ ಆಗಿ ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು.
ಇದನ್ನೂ ಓದಿ: ತರುಣ್ ಸುಧೀರ್ ಪತ್ನಿ ಸೋನಲ್ ಬ್ಲೌಸ್ ಡಿಸೈನ್ ಮಾಡಿದ್ಯಾರು? ಕಾಸ್ಟ್ಯೂಮ್ ಡಿಸೈನರ್​ಗೆ ಭಾರೀ ಡಿಮ್ಯಾಂಡ್!
/newsfirstlive-kannada/media/post_attachments/wp-content/uploads/2023/09/KANTARA_RISHAB_SHETTY.jpg)
ಇವೆಲ್ಲಕ್ಕಿಂತ ನನ್ನ ದೊಡ್ಡ ಶಕ್ತಿ ರೈಟರ್ಸ್​ಗಳು. ವಿಶೇಷವಾಗಿ ಅನಿರುದ್ಧ್​​ ರಮೇಶ್​, ಸನೀಲ್​ ಗುರು, ಶ್ಯಾಮ್​​​ ಪ್ರಸಾದ್​​, ಪ್ರಕಾಶ್​​ ತುಮ್ಮಿನಾಡು. ಜೊತೆಗೆ ಸಾಥ್​ ಕೊಟ್ಟ ಎಲ್ಲಾ ಸ್ನೇಹಿತರಿಗೆ ಥ್ಯಾಂಕ್ಸ್​ ಹೇಳ್ತೇನೆ. ಹೊಂಬಾಳೆ ಟೀಂ, ವಿಜಯನ್ನ, ಚೆಲುವೆ ಗೌಡ್ರು ಮತ್ತು ಮೆನೇಜರ್ಸ್​ಗೆ ಥ್ಯಾಂಕ್ಸ್​ ಹೇಳ್ತೇನೆ.
ಜನ ನೋಡಿ ಸಕಸ್ಸ್​​ ಕೊಟ್ಟಾಗ ದೊಡ್ಡ ಜವಾಬ್ದಾರಿ. ಪ್ರಶಸ್ತಿ ಬಂದಾಗ ಅದೇ ರೀತಿಯ ಜವಾಬ್ದಾರಿ ಇರುತ್ತದೆ. ಎಲ್ಲದಕ್ಕೂ ಒಳ್ಳೆಯ ತಂಡಬೇಕು, ರೈಟರ್ಸ್​ ಬೇಕು. ಒಬ್ಬರಿಂದ ಏನು ಮಾಡೋಕೆ ಸಾಧ್ಯವಿಲ್ಲ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us