/newsfirstlive-kannada/media/post_attachments/wp-content/uploads/2024/06/Rishab-shetty-2.jpg)
ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ದೊಡ್ಡ ಮಟ್ಟದ ಯಶಸ್ಸಿನ ಹಿಂದೆ ಇರುವ ಉಡುಪಿಯ ಬೈಲೂರು ಭಾಗದ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಸನ್ನಿಧಾನದಲ್ಲಿರುವ ಕೊರಗಜ್ಜನಿಗೆ ಮದ್ಯ, ಚಕ್ಕುಲಿ, ಬೀಡ ಇಟ್ಟು ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/06/Rishab-shetty.jpg)
ಇದನ್ನೂ ಓದಿ: ಗುಟ್ಕಾ ತಂದುಕೊಟ್ಟಿಲ್ಲ ಎಂದು ಬಾಲಕಿಯ ಭೀಕರ ಹತ್ಯೆ.. ಗೋಣಿ ಚೀಲದಲ್ಲಿ ಸುತ್ತಿ ಪಾಳುಬಿದ್ದ ಮನೆಯಲ್ಲೆಸೆದ ಮೆಕ್ಯಾನಿಕ್
ಕೊರಗಜ್ಜನಿಗೆ ಪ್ರಾರ್ಥನೆ
ಸನ್ನಿಧಾನದಲ್ಲಿರುವ ಬಬ್ಬುಸ್ವಾಮಿ ಕೊರಗಜ್ಜ ಬಳಿ ಪ್ರಾರ್ಥನೆ ಮಾಡಿದ ವೇಳೆ ಪಂಜುರ್ಲಿ ದೈವದ ಮೇಲೆ ಕಥೆ ನಿರ್ಮಿಸಿ ಎನ್ನುವ ನುಡಿ ಕೇಳಿ ಬಂದಿತ್ತಂತೆ. ಕಾಂತಾರ ಯಶಸ್ಸಿನ ಬಳಿಕ ಮತ್ತೆ ರಿಶಬ್ ಶೆಟ್ಟಿ ಪತ್ನಿ ಹಾಗೂ ಮಕ್ಕಳ ಜೊತೆ ಆಗಮಿಸಿ ಕೊರಗಜ್ಜ, ಬಬ್ಬುಸ್ವಾಮಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ರು.
/newsfirstlive-kannada/media/post_attachments/wp-content/uploads/2024/06/Rishab-shetty-1.jpg)
ಸದ್ಯ ಕಾಂತಾರ-2 ಸಿನಿಮಾ ಬರಲು ಬಾಕಿ ಇದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಅಂದಹಾಗೆಯೇ ಕಾಂತಾರ-2 ಯಾವಾಗ ಬರುತ್ತೆ ಎಂಬುದನ್ನು ರಿಷಬ್​ ಶೆಟ್ಟಿಯವರೇ ಹೇಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us