ಕೈಕೊಟ್ಟ ರಿಷಭ್ ಪಂತ್​​.. 1 ರನ್​ ಕದಿಯಲು ಹೋಗಿ ಭಾರೀ ಹೊಡೆತ ತಿಂದ ವಿಕೆಟ್​ ಕೀಪರ್!​

author-image
Bheemappa
Updated On
ಕೈಕೊಟ್ಟ ರಿಷಭ್ ಪಂತ್​​.. 1 ರನ್​ ಕದಿಯಲು ಹೋಗಿ ಭಾರೀ ಹೊಡೆತ ತಿಂದ ವಿಕೆಟ್​ ಕೀಪರ್!​
Advertisment
  • ಅದ್ಭುತವಾದ ಇನ್ನಿಂಗ್ಸ್​ ಕಟ್ಟಿದ್ದ ರಿಷಭ್ ಪಂತ್- KL ರಾಹುಲ್
  • ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ
  • ಅವಶ್ಯಕತೆ ಇಲ್ಲದ ರನ್ ಕದಿಯಲು ಹೋಗಿ ಕೈಸುಟ್ಟುಕೊಂಡ್ರಾ?

ಲಂಡನ್​ನ ಲಾರ್ಡ್ಸ್​​ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟೈಡರ್​ ಮ್ಯಾನ್ ರಿಷಭ್ ಪಂತ್ ಅವರು ರನ್​ ಔಟ್​ ಆಗುವ ಮೂಲಕ ಭಾರೀ ನಿರಾಸೆ ಮೂಡಿಸಿದ್ದಾರೆ. ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದು ಪಂತ್ ಒಂದು ರನ್​ ಕದಿಯಲು ಹೋಗಿ ಭಾರೀ ಪೆಟ್ಟು ತಿಂದರು.

ಇಂಗ್ಲೆಂಡ್​ ತಂಡದ 66ನೇ ಓವರ್​ ಅನ್ನು ಮಾಡುತ್ತಿದ್ದ ಬೌಲರ್​ ಶೋಯೆಬ್ ಬಶೀರ್ ಅವರ 3ನೇ ಬೌಲ್ ಅನ್ನು ಪಿಚ್ ಸನಿಪದಲ್ಲೇ ಪಂತ್ ಹೊಡೆದಿದ್ದರು. ತಕ್ಷಣ ಒಂದು ರನ್​ ಓಡಲು ಹೋಗಿದ್ದರು. ಆದರೆ ಈ ವೇಳೆ ಅಲ್ಲೇ ಇದ್ದಂತಹ ಫೀಲ್ಡರ್ ಬೆನ್​ಸ್ಟೋಕ್ಸ್​ ಬಾಲ್ ಅನ್ನು ನೇರವಾಗಿ ವಿಕೆಟ್​ಗೆ ಹೊಡೆದರು. ತಕ್ಷಣ ಅಂಪೈರ್​ಗೆ ಅಫೀಲ್ ಮಾಡಲಾಯಿತು.

ಇದನ್ನೂ ಓದಿ:ಎಲ್ಲ ಕ್ರಿಕೆಟರ್​​ಗಳಂತೆ ರಿಷಭ್ ಪಂತ್​​ಗೆ ಇರೋ ನಿಕ್ ನೇಮ್​ ಯಾವುದು.. ಈ ವಿಕೆಟ್​ ಕೀಪರ್​ಗೆ ಏನಂತಾರೆ?

publive-image

ಇದು 3ನೇ ಅಂಪೈರ್​​ ಬಳಿಗೆ ಹೋದಾಗ ರಿಷಭ್ ಪಂತ್ ಗೆರೆಯಿಂದ ಹೊರಗಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಔಟ್ ಎಂದು ಘೋಷಿಸಲಾಯಿತು. ಊಟದ ಸಮಯಕ್ಕೆ ಸರಿಯಾಗಿ ಔಟ್ ಆಗಿರುವುದು ರಿಷಭ್ ಪಂತ್​ಗೆ ದೊಡ್ಡ ಆಘಾತವಾಯಿತು. ಏಕೆಂದರೆ ತಂಡದಲ್ಲಿ 74 ರನ್​ಗಳಿಸಿ ವೇಗದಿಂದ ಬ್ಯಾಟ್​ ಬೀಸುತ್ತಿದ್ದ ವಿಕೆಟ್​ ಕೀಪರ್​ ಸೆಂಚುರಿಯ ನಿರೀಕ್ಷೆಯಲ್ಲಿದ್ದರು. ಆದರೆ ಅದಕ್ಕಿಂತ ಮೊದಲೇ ಕೈ ಸುಟ್ಟುಕೊಂಡಿದ್ದಾರೆ.

3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ ನಾಯಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಆಂಗ್ಲರು ಬೂಮ್ರಾ ಅವರ ಬೌಲಿಂಗ್ ದಾಳಿಗೆ ಧೂಳೀಪಟವಾಗಿದ್ದರು. ಜೋ ರೂಟ್ ಅವರ ಸೆಂಚುರಿ ಬಿಟ್ಟರೇ ಉಳಿದ ಬ್ಯಾಟ್ಸ್​ಮನ್​ಗಳು 50ರ ಗಡಿಗೆ ಬರುವಷ್ಟರಲ್ಲಿ ಔಟ್​ ಆಗಿದ್ದರು. ಹೀಗಾಗಿ ಇಂಗ್ಲೆಂಡ್​ ತಂಡ 2ನೇ ದಿನದ ಅರ್ಧದಲ್ಲೇ 387 ರನ್​ಗೆ ಆಲೌಟ್​ ಆಗಿತ್ತು. ಸದ್ಯ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ 4 ವಿಕೆಟ್​ಗೆ 248 ರನ್​ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ. ಕೆ.ಎಲ್ ರಾಹುಲ್ 98 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment