/newsfirstlive-kannada/media/post_attachments/wp-content/uploads/2025/06/RISHABH_PANT_100.jpg)
5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಸೆಂಚುರಿಗಳು ಮೂಡಿ ಬರುತ್ತಿವೆ. ಇಂಗ್ಲೆಂಡ್ ವಿರುದ್ಧ ಓಪನರ್ ಜೈಸ್ವಾಲ್ ಹಾಗೂ ನಾಯಕ ಶತಕ ಬಾರಿಸಿದ್ದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಅಮೋಘವಾದ ಶತಕ ಬಾರಿಸಿದ್ದಾರೆ. ಈ ಮೂಲಕ ತಂಡದಲ್ಲಿ ಒಟ್ಟು ಮೂವರು ಬ್ಯಾಟರ್ಸ್ ಶತಕ ಸಿಡಿಸಿದಂತೆ ಆಗಿದೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ ಬೃಹತ್ ಮೊತ್ತದ ರನ್ ಗಳಿಕೆ ಕಡೆ ಹೊರಟಿದೆ. ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಈಗಾಗಲೇ 7 ವಿಕೆಟ್ ಕಳೆದುಕೊಂಡು 450 ರನ್ಗಳ ಗಡಿ ದಾಟಿದೆ. ಇನ್ನು ರಿಷಭ್ ಪಂತ್ ಆಂಗ್ಲರಿಗೆ ಫುಲ್ ಕ್ರಿಕೆಟರ್ ಚಿತ್ರಣ ತೋರಿಸಿದ್ದಾರೆ.
ಸಾಯಿ ಸುದರ್ಶನ್ ಡಕೌಟ್ ಆದ ಬಳಿಕ ಕ್ರೀಸ್ಗೆ ಬಂದ ರಿಷಭ್ ಪಂತ್ ಮೈದಾನದ ಮೂಲೆ ಮೂಲೆಗೂ ಬಾಲ್ ಕಳಿಸಿದರು. ಪಂತ್ ಬ್ಯಾಟಿಂಗ್ನಿಂದ ಟೆಸ್ಟ್ ಮ್ಯಾಚ್ ಆದರೂ ಏಕದಿನ ಪಂದ್ಯದಂತೆ ರನ್ಗಳು ಹರಿದು ಬಂದವು. ಸ್ಟೇಡಿಯಂ ಗ್ಯಾಲರಿಯಲ್ಲಿ ಕುಳಿತ್ತಿದ್ದ ಅಭಿಮಾನಿಗಳು ರಿಷಭ್ ಪಂತ್ ಬ್ಯಾಟಿಂಗ್ ವೈಭವನನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ:WTC ಟ್ರೋಫಿ ಗೆಲ್ಲಿಸಿಕೊಟ್ಟ ಆಫ್ರಿಕಾ ಕ್ಯಾಪ್ಟನ್ಗೆ ಬಿಗ್ ಶಾಕ್.. ಟೆಸ್ಟ್ ಸರಣಿಯಿಂದ ಹೊರಕ್ಕೆ
ಇನ್ನು ಮೊದಲ ಇನ್ನಿಂಗ್ಸ್ನಲ್ಲಿ 146 ಬಾಲ್ ಎದುರಿಸಿದ ಪಂತ್ 10 ಬೌಂಡರಿ ಹಾಗೂ 3 ಸಿಕ್ಸರ್ಗಳಿಂದ 100 ರನ್ ಬಾರಿಸಿದರು. ಪಂತ್ ಅವರ ಇನ್ನೊಂದು ವಿಶೇಷತೆ ಎಂದರೆ 99 ರನ್ ಆಗಿದ್ದಾಗ ಸಿಕ್ಸರ್ ಬಾರಿಸಿ 100 ರನ್ಗಳ ಗಡಿ ದಾಟಿದರು. ಈ ಇನ್ನಿಂಗ್ಸ್ನಲ್ಲಿ 178 ಬಾಲ್ಗಳನ್ನು ಆಡಿದ ಪಂತ್ 12 ಬೌಂಡರಿ, 6 ಸಿಕ್ಸರ್ ಸಮೇತ 134 ರನ್ಗಳಿಸಿ ಜೋಶ್ ಟಂಗ್ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು.
ಸೆಂಚುರಿ ಬಾರಿಸಿ ಔಟ್ ಆಗಿದ್ದ ನಾಯಕ ಶುಭ್ಮನ್ ಗಿಲ್ ಬಳಿಕ ಕ್ರೀಸ್ಗೆ ಬಂದಿದ್ದ ಕನ್ನಡಿಗ ಕರುಣ್ ನಾಯರ್ ಅವರು ಕೇವಲ ನಾಲ್ಕೇ 4 ಬಾಲ್ ಆಡಿ ಡಕೌಟ್ ಆಗಿ ಹೊರ ನಡೆದರು. ನಾಯಕ ಶುಭ್ಮನ್ ಗಿಲ್ ಒಟ್ಟು 227 ಬಾಲ್ಗಳನ್ನು ಆಡಿ 19 ಬೌಂಡರಿ ಒಂದು ಸಿಕ್ಸರ್ನಿಂದ 147 ರನ್ ಗಳಿಸಿ ಆಡುವಾಗ ಕ್ಯಾಚ್ ಔಟ್ ಆದರು. ಕೇವಲ 3 ರನ್ಗಳಿಂದ 150 ರನ್ ಮಿಸ್ ಮಾಡಿಕೊಂಡರು. ಸದ್ಯ ಟೀಮ್ ಇಂಡಿಯಾ 7 ವಿಕೆಟ್ಗೆ 454 ರನ್ಗಳಿಂದ ಬ್ಯಾಟಿಂಗ್ ಮಾಡುತ್ತಿದೆ.
Top 5 Indian Test Batters of All Time. 🕸️
Rishabh Pant 🔥 #INDvsENGpic.twitter.com/3tvaJh5hyS
— The Cinéprism (@TheCineprism)
Top 5 Indian Test Batters of All Time. 🕸️
Rishabh Pant 🔥 #INDvsENGhttps://t.co/3tvaJh5hyS— The Cinéprism (@TheCineprism) June 21, 2025
">June 21, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ