‘ನನ್ನ ಖುಷಿಗೆ ನೀನೇ ಕಾರಣ’.. ರಿಷಭ್​ ಪಂತ್ 10 ವರ್ಷದ​ ಲವ್ ಬ್ರೇಕಪ್​, ಏನಾಯಿತು?

author-image
Bheemappa
‘ನನ್ನ ಖುಷಿಗೆ ನೀನೇ ಕಾರಣ’.. ರಿಷಭ್​ ಪಂತ್ 10 ವರ್ಷದ​ ಲವ್ ಬ್ರೇಕಪ್​, ಏನಾಯಿತು?
Advertisment
  • ರಿಷಭ್ ಪಂತ್ ಆ್ಯಕ್ಸಿಡೆಂಟ್​ಗೆ ತುತ್ತಾದಾಗ ಜೊತೆಗಿದ್ದ ಇಶಾ ನೇಗಿ
  • ಇಶಾ ನೇಗಿ ಜೊತೆಗಿನ ಫೋಟೋ ಶೇರ್ ಮಾಡಿದ್ದ ರಿಷಭ್ ಪಂತ್
  • ಇಬ್ಬರ ಪ್ರೀತಿಯಲ್ಲಿ ಏನಾಯಿತು, ಈಗ ರಿಷಭ್- ಇಶಾ ದೂರ ದೂರ

ಟೀಮ್​ ಇಂಡಿಯಾದ ಡೇರ್​​ ಡೆವಿಲ್​ ಬ್ಯಾಟರ್​​ ರಿಷಭ್​ ಪಂತ್​ ಬಾಳಲ್ಲಿ ಬಿರುಗಾಳಿ ಎದ್ದಿದೆ. ಒಂದಲ್ಲ ಎರಡಲ್ಲ, ಸುದೀರ್ಘ 10 ವರ್ಷಗಳ ಪ್ರೀತಿ ಬ್ರೇಕ್​ಅಪ್​ ಅಂತ್ಯವಾದ ಬೇಸರದ ಸುದ್ದಿ ಹೊರಬಿದ್ದಿದೆ. ರಿಷಭ್​ ಪಂತ್- ಇಶಾ ನೇಗಿ ಪ್ರೀತಿಯಲ್ಲಿ ಬಿರುಕು ಮೂಡಿದೆ. ಅಷ್ಟಕ್ಕೂ ಆಗಿದ್ದೇನು?.

ಇಂಡೋ-ಇಂಗ್ಲೆಂಡ್​ ಟೆಸ್ಟ್​​ ಸರಣಿಯಲ್ಲಿ ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟರ್​​ ರಿಷಭ್​ ಪಂತ್​ ಪರಾಕ್ರಮ ಜೋರಾಗಿದೆ. ಮೊದಲ ಟೆಸ್ಟ್​​ನ ಎರಡೂ ಇನ್ನಿಂಗ್ಸ್​ನಲ್ಲಿ ಬೊಂಬಾಟ್​​ ಸೆಂಚುರಿ ಬಾರಿಸಿರುವ ಪಂತ್​, ಆಂಗ್ಲರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಫೆಂಟಾಸ್ಟಿಕ್ ಆಟದಿಂದ ಪಂತ್​​​ ಟೀಮ್​ ಇಂಡಿಯಾ ಕ್ಯಾಂಪ್​​ ಹಾಗೂ ಅಭಿಮಾನಿಗಳ ವಲಯದಲ್ಲಿ ಭರವಸೆ ಮೂಡಿಸಿದ್ದಾರೆ. ಶೈನಿಂಗ್​​ ಪರ್ಫಾಮೆನ್ಸ್​ನಿಂದ ಮಿಂಚುತ್ತಿರೋದ್ರ ನಡುವೆಯೇ ಹಾರ್ಟ್​​ ಬ್ರೇಕಿಂಗ್​ ಸುದ್ದಿಯೊಂದು ಹೊರಬಿದ್ದಿದೆ.

publive-image

10 ವರ್ಷದ ಪ್ರೀತಿ ಬ್ರೇಕ್​ ಅಪ್​ನಲ್ಲಿ ಅಂತ್ಯ.!?

ರಿಷಭ್​ ಪಂತ್​ ಟೀಮ್​ ಇಂಡಿಯಾಗೆ ಕಾಲಿಟ್ಟ ದಿನಗಳಲ್ಲಿ ತಮ್ಮ ಎಕ್ಸ್​​ಪ್ಲೋಸಿವ್​ ಆಟದಿಂದ ಎಷ್ಟು ಸದ್ದು ಮಾಡಿದ್ರೋ, ಲವ್​​ ಕಾರಣಕ್ಕೂ ಅಷ್ಟೇ ಸುದ್ದಿಯಾಗಿದ್ದರು. ರಿಷಭ್​ ಪಂತ್​- ಇಶಾ ನೇಗಿ ಲವ್​ ಮಾಡ್ತಿದ್ದಾರೆ ಎಂಬ ಗಾಸಿಪ್​ ಕ್ರಿಕೆಟ್​ ಲೋಕದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಮತ್ತೆ ಇಬ್ಬರ ಲವ್​ಸ್ಟೋರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಬ್ರೇಕ್​ಅಪ್​. ರಿಷಭ್​ ಪಂತ್​​ ಹಾಗೂ ಇಶಾ ನೇಗಿಯ ಸುದೀರ್ಘ 10 ವರ್ಷಗಳ ಸಂಬಂಧ ಮುರಿದು ಬಿದ್ದಿದೆ ಅನ್ನೋ ಸುದ್ದಿ ಹಲ್​ಚಲ್​ ಎಬ್ಬಿಸಿದೆ.

ಪರಸ್ಪರ ಭಿನ್ನಾಭಿಪ್ರಾಯ, ಇನ್ಸ್​​ಸ್ಟಾದಲ್ಲಿ ಅನ್​ಫಾಲೋ.!

ರಿಷಭ್​ ಪಂತ್​ -ಇಶಾ ನೇಗಿ ದೂರವಾಗಿದ್ದಾರೆ ಅನ್ನೋ ಸುದ್ದಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡ್ತಿದೆ. ಪಂತ್​​ ಹಾಗೂ ಇಶಾ ನೇಗಿ ಇನ್ಸ್​​ ಸ್ಟಾಗ್ರಾಂನಲ್ಲಿ ಪರಸ್ಪರ ಅನ್​​ಫಾಲೋ ಮಾಡಿಕೊಂಡಿದ್ದಾರೆ. ಇಷ್ಟು ದಿನ ಪರಸ್ಪರ ಫಾಲೋ ಮಾಡ್ತಿದ್ದ​ ಈ ಜೋಡಿ ಇದಕ್ಕಿಂದ್ದ ಅನ್​ಫಾಲೋ ಮಾಡಿಕೊಂಡಿರೋದು ಬ್ರೇಕ್​ಅಪ್​ ಸುದ್ದಿಯ ಹುಟ್ಟಿಗೆ ಕಾರಣವಾಗಿದೆ. ಪಂತ್​ ಆಪ್ತ ಮೂಲಗಳೂ ಕೂಡ ಈ ಈ ಸುದ್ದಿ ಸತ್ಯಕ್ಕೆ ಹತ್ತಿರವಾದದ್ದು ಎಂದೇ ಹೇಳ್ತಿವೆ. ಇಬ್ಬರ ನಡುವಿನ ಕೆಲ ಭಿನ್ನಾಭಿಪ್ರಾಯಗಳೇ ಬ್ರೇಕ್​ ಅಪ್​ಗೆ​​ ಕಾರಣ ಎನ್ನಲಾಗ್ತಿದೆ.

ಇಶಾ ನೇಗಿ ಫೋಟೋ ಶೇರ್ ಮಾಡಿದ್ದ ಪಂತ್

ರಿಷಭ್​ ಪಂತ್​ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟಾಗಲೇ ಇವರಿಬ್ಬರ ನಡುವಿನ ರಿಲೇಶನ್​ಶಿಪ್​ ಸಖತ್​ ಸುದ್ದಿಯಾಗಿತ್ತು. ಇವರಿಬ್ಬರು ಓಡಾಡ್ತಾ ಇದ್ದಿದ್ದು ಆಗಾಗ ಕ್ಯಾಮರಾ ಕಣ್ಣಿಗೂ ಬಿದ್ದಿತ್ತು. ಅಂತಿಮವಾಗಿ 2019ರಲ್ಲಿ ಇಶಾ ನೇಗಿ ಜೊತೆಗಿನ ಫೋಟೋವನ್ನ ಸ್ವತಃ ಪಂತ್​ ಸೋಷಿಯಲ್​​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ರು. ಅದಕ್ಕೆ ನಾನು ನಿನ್ನನ್ನ ಖುಷಿಪಡಿಬೇಕು. ಯಾಕಂದ್ರೆ ನನ್ನ ಖುಷಿಗೆ ನೀನೆ ಕಾರಣ ಎಂಬ ಕ್ಯಾಪ್ಶನ್​ ನೀಡಿದರು. ಇದ್ರೊಂದಿಗೆ ಇಬ್ಬರ ಲವ್​ ಕಹಾನಿ ಅಧಿಕೃತವಾಗಿತ್ತು.

ಆ್ಯಕ್ಸಿಡೆಂಟ್​ಗೆ ತುತ್ತಾದಾಗ ಜೊತೆಗಿದ್ದ ಇಶಾ ನೇಗಿ.!

ಡಿಸೆಂಬರ್​ 30, 2022ರಲ್ಲಿ ರಿಷಭ್​ ಪಂತ್​ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ರು. ಆ ಅಪಘಾತದ ಭೀಕರತೆ ಪಂತ್​ ಕಥೆ ಮುಗಿದೇ ಹೋಯ್ತು ಎಂಬಂತಿತ್ತು. ಆದ್ರೆ, ಫೀನಿಕ್ಸ್​ನಂತೆ ಪಂತ್​ ಕ್ರಿಕೆಟ್​ ಫೀಲ್ಡ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಈ ಕಮ್​​ಬ್ಯಾಕ್​​ನ ಹಿಂದೆ ಇಶಾ ನೇಗಿಯ ನಿಸ್ವಾರ್ಥ ಸೇವೆಯೂ ಇದೆ. ಆ್ಯಕ್ಸಿಂಡೆಂಟ್​​ ತುತ್ತಾಗಿ ಜೀವನ್ಮರಣದ ನಡುವೆ ಹೋರಾಟ ಆರಂಭಿಸಿದ ದಿನದಿಂದ, ಫೀಲ್ಡ್​ಗೆ​ ವಾಪಾಸ್ಸಾಗೋವರೆಗೆ ಇಶಾ ಪಂತ್​ ಬೆನ್ನಿಗೆ ನಿಂತಿದ್ರು. ಆರೈಕೆ ಮಾಡಿದ್ದಲ್ಲದೇ, ಮಾನಸಿಕವಾಗಿಯೂ ಪಂತ್​ಗೆ ಬಲ ತುಂಬಿದ್ರು. ​

ಇದನ್ನೂ ಓದಿ:ಈಗೀಗ ಮೊಹಮ್ಮದ್ ಸಿರಾಜ್ ಅಟ್ಟರ್​ ಫ್ಲಾಪ್​​​​ ಆಗಲು ಕಾರಣನೇ ಕಿಂಗ್ ಕೊಹ್ಲಿ..!

publive-image

ಇಶಾ ನೇಗಿ ಯಾರು.? ಹಿನ್ನಲೆ ಏನು.?

ಅಂದ್ಹಾಗೆ ಇಶಾ ನೇಗಿ ಮೂಲ ಮುಂಬೈ. ಓದಿದ್ದು, ಬೆಳೆದಿದ್ದು ಎಲ್ಲಾ ನೋಯ್ದಾ ಹಾಗೂ ಡೆಹರಾಡೂನ್​ನಲ್ಲಿ. entrepreneur ಆಗಿರೋ ಈಕೆ ಖ್ಯಾತ ಇಂಟಿರಿಯರ್​ ಡಿಸೈನರ್​ ಕೂಡ ಹೌದು. ಸೋಷಿಯಲ್​ ಮೀಡಿಯಾ ಇನ್​ಫ್ಲ್ಯುಯೆನ್ಸರ್​​ ಆಗಿಯೋ ಗುರುತಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರೋ ಇಶಾ ನೇಗಿಗೆ ಇನ್ಸ್​​ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್​​ ಇದ್ದಾರೆ.

ಪಂತ್​ ಹಾಗೂ ಇಶಾ ನೇಗಿಯ ನಡುವಿನ ಆತ್ಮೀಯತೆ, ಅನ್ಯೋನ್ಯತೆ ನೋಡಿದ್ದ ಕ್ರಿಕೆಟ್​ ಪ್ರೇಮಿಗಳು ಇಬ್ಬರು ಒಟ್ಟಾಗಿ ಬಾಳಲಿ ಎಂದು ಹರಿಸಿದರು. ಪಂತ್​​ ಸಂಕಷ್ಟದಲ್ಲಿದ್ದಾಗ ಇಶಾ ನೇಗಿ ಜೊತೆಗೆ ನಿಂತಿದ್ದನ್ನ ಕಂಡು ಜೋಡಿ ಅಂದ್ರೆ ಹೀಗಿರಬೇಕಪ್ಪಾ ಅಂದಿದ್ರು. ಈಗ ನೋಡಿದ್ರೆ ಪಂತ್​ ಹಾಗೂ ಇಶಾ ನೇಗಿಯ ಬ್ರೇಕ್​ ಅಪ್​ನ ಬೇಸರದ ಸುದ್ದಿ ಹೊರಬಿದ್ದಿದೆ. ಇಲ್ಲಿಗೆ ಎಲ್ಲಾ ಮುಗೀತು ಎನ್ನಬೇಕಿಲ್ಲ. ಇನ್ನೂ ಟೈಂ ಇದೆ. ಇಬ್ಬರೂ ಯೋಚಿಸಿ ಒಂದೊಳ್ಳೆ ನಿರ್ಧಾರ ತೆಗೆದುಕೊಳ್ಳಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment