/newsfirstlive-kannada/media/post_attachments/wp-content/uploads/2024/10/Rishabh_Pant-1.jpg)
ಇಂಡೋ-ಆಸಿಸ್ ಫೈರಿ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗ್ತಿದೆ. ಯಾರ್ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ಕ್ರಿಕೆಟ್ ಲೋಕದಲ್ಲಿ ಮನೆ ಮಾಡಿದೆ. ಇದ್ರ ನಡುವೆ ರಿಷಭ್ ಪಂತ್ ಜೊತೆ ನಟಿ ಊವರ್ಶಿ ರೌಟೇಲಾ ಇಬ್ಬರ ಚರ್ಚೆ ಜೋರಾಗಿದೆ. ಇದಕ್ಕೆ ಕಾರಣ ಆಕೆಯ ಒಂದು ಪೋಸ್ಟ್..!
ಪ್ರತಿಷ್ಟಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸಿರೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಕ್ರಿಕೆಟ್ ಲೋಕದ ಮದಗಜಗಳ ಬ್ಯಾಟಲ್ ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಫ್ಯಾನ್ಸ್ ಕಾಯ್ತಿದ್ದಾರೆ. ನ್ಯೂಜಿಲೆಂಡ್ ಎದುರು ಸೋತ ಟೀಮ್ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಕಾಂಗರೂಗಳನ್ನು ಬಗ್ಗು ಬಡೆದು ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ಗೇರುವ ಲೆಕ್ಕಾಚಾರ ಹಾಕ್ತಿದ್ರೆ, ಆಸ್ಟ್ರೇಲಿಯಾ ಈ ಸಲ ಟೀಮ್ ಇಂಡಿಯಾವನ್ನು ಸದೆ ಬಡೆಯೋ ರಣ ಉತ್ಸಾಹದಲ್ಲಿದೆ. ಈ ನಡುವೆ ಕ್ರಿಕೆಟ್ ಹೊರತಾಗಿ ಒಬ್ಬರ ಬಗ್ಗೆ ಚರ್ಚೆ ನಡೀತಿದೆ. ಅಂದ್ಹಾಗೆ ಅದು ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ.
ಇದನ್ನೂ ಓದಿ:ಹರಿಣಗಳ ನಾಡಲ್ಲಿ ರನ್ಗಳ ಹೊಳೆ.. ಸಂಜು, ತಿಲಕ್ ಸಿಡಿಸಿದ ಬೌಂಡರಿ, ಸಿಕ್ಸರ್ಗಳು ಎಷ್ಟು?
ಪರ್ತ್ನಲ್ಲಿ ಬ್ಯೂಟಿ ಊರ್ವಶಿ
ಬಾರ್ಡರ್ ಗವಾಸ್ಕರ್ ಟೆಸ್ಟ್ ಸಿರೀಸ್ಗಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ತೆರಳಿದೆ. ಅಭ್ಯಾಸವನ್ನೂ ಆರಂಭಿಸಿದೆ. ಇದೇ ಪರ್ತ್ನಲ್ಲಿ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಪ್ರತ್ಯಕ್ಷವಾಗಿದ್ದಾರೆ. ಪರ್ತ್ನಲ್ಲಿ ಸೌರವ್ ಗಂಗೂಲಿ ಜೊತೆ ಫೋಟೋಗೆ ಫೋಸ್ ಕೊಟ್ಟಿರುವ ಈ ಬ್ಯೂಟಿ, ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಈ ಪೋಟೋ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಪಂತ್ ಜೊತೆಯಲ್ಲೇ ಬಂದ್ರಾ?
ನಟಿ ಊರ್ವಶಿ ರೌಟೇಲಾ, ಇನ್ಸಾಟಾದಲ್ಲಿ ಪೋಟೋ ಶೇರ್ ಮಾಡಿದ್ದು ಸೌರವ್ ಗಂಗೂಲಿ ಜೊತೆಯಾದ್ರೆ, ಇಲ್ಲಿ ಸುದ್ದಿಯಾಗ್ತಿರುವುದು ರಿಷಭ್ ಪಂತ್. ಈಕೆ ಪರ್ತ್ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ರಿಷಭ್ ಪಂತ್ ಜೊತೆಯಲ್ಲೇ ಉರ್ವಶಿ ಆಸ್ಟ್ರೇಲಿಯಾಗೆ ತೆರಳಿದ್ರಾ ಎಂಬ ಅನುಮಾನ ಹುಟ್ಟಿದೆ. ಈಕೆಯ ಹೆಸರಿನ ಜೊತೆಯಲ್ಲಿ ರಿಷಭ್ ಪಂತ್ ಹೆಸರು ತಳುಕು ಹಾಕಿಕೊಳ್ಳುತ್ತಿರುವುದು ಇದು ಮೊದಲೇನಲ್ಲ.
View this post on Instagram
6 ವರ್ಷಗಳಷ್ಟು ಹಳೆಯದ್ದು..!
ರಿಷಭ್ ಪಂತ್- ಊರ್ವಶಿ ರೌಟೆಲಾ ನಡುವಿನ ಕಹಾನಿ ಇವತ್ತು ನಿನ್ನೆಯದ್ದಲ್ಲ. 2018ರಲ್ಲೇ ಬಾಲಿವುಡ್ ಹಾಗೂ ಇಂಡಿಯನ್ ಕ್ರಿಕೆಟ್ ದುನಿಯಾದಲ್ಲಿ ಇಬ್ಬರ ಲವ್ ಬಗ್ಗೆ ಗಾಸಿಪ್ ಹರಿದಾಡಿತ್ತು. ಪಂತ್-ಊರ್ವಶಿ ಮಧ್ಯೆ ಸಮ್ಥಿಂಗ್ ಸಮ್ಥಿಂಗ್ ನಡೆಯುತ್ತಿದೆ. ಅವರಿಬ್ಬರು ರಿಲೇಷನ್ಶಿಪ್ನಲ್ಲಿದ್ದಾರೆ, ಡೇಟಿಂಗ್ ನಡೆಸ್ತಿದ್ದಾರೆ ಅಂತೆಲ್ಲಾ ಸುದ್ದಿಯಾಗಿತ್ತು.
ಇದನ್ನೂ ಓದಿ:ಎರಡನೇ ಮಗುವಿಗೆ ವೆಲ್ಕಮ್ ಹೇಳಿದ ರೋಹಿತ್ ಶರ್ಮಾ ಮತ್ತು ರಿತಿಕಾ
ಇದರ ನಡುವೆ ಸಂದರ್ಶನ ಒಂದರಲ್ಲಿ ಊವರ್ಶಿ, ರಿಷಭ್ ಪಂತ್ ಹೆಸರೇಳದೆ RP ಎಂದು ಪ್ರಸ್ತಾಪಿಸಿದ್ದರು. ನನಗಾಗಿ RP ಹೋಟೆಲ್ನಲ್ಲಿ 17 ಬಾರಿ ಕಾದಿದ್ದರು. ಈ ಹೇಳಿಕೆ ನೀಡದ ಬಳಿಕ ರಿಷಭ್ ಪಂತ್, ಈ ವಿಚಾರವಾಗಿ ಮೊಟ್ಟ ಮೊದಲ ಬಾರಿ ತುಟಿ ಬಿಚ್ಚಿದ್ದರು.
ಊರ್ವಶಿ ರಿಕೌಂಟರ್
ಸಂದರ್ಶನದಲ್ಲಿ RP ಎಂದು ಪ್ರಸ್ತಾಪಿಸಿದ್ದ ರೌಟೇಲಾಗೆ ರಿಷಭ್ ಪಂತ್, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಖಡಕ್ REPLAY ಕೊಟ್ಟಿದ್ರು. ಕೆಲವರು ಪಬ್ಲಿಸಿಟಗಾಗಿ, ಪೇಪರ್ನಲ್ಲಿ ಹೆಡ್ಲೈನ್ಸ್ ಆಗೋದಕ್ಕೆ ಇಲ್ಲ ಸಲ್ಲದ ಕಥೆಗಳನ್ನು ಹೇಳೋದು ನೋಡಿದ್ರೆ, ನಗು ಬರುತ್ತೆ. ಸಹೋದರಿ ನನ್ನ ಪ್ಲೀಸ್ ಬಿಟ್ಟುಬಿಡು ಅಂತಾ ಪೋಸ್ಟ್ ಮಾಡಿದ್ರು. ಇದಕ್ಕೆ ಕೌಂಟರ್ ಅಟ್ಯಾಕ್ ಕೊಟ್ಟಿದ್ದ ರೌಟೇಲಾ, ''ಚೋಟು ಭಯ್ಯಾ ನೀನು ಮೊದಲು ಬ್ಯಾಟ್ ಬಾಲ್ ಆಡು. ನಾನು ಚಿಕ್ಕ ಹುಡುಗನ ಜೊತೆ ಬದ್ನಾಮ್ ಆಗೋಕೆ ಮುನ್ನಿ ಅಲ್ಲ. ಹುಡುಗಿ ಸೈಲೆಂಟ್ ಆಗಿದ್ದಾಳೆ ಅಂತ ADVANTAGE ತಗೋಬೇಡ ಎಂದು ರಿಯಾಕ್ಟ್ ಮಾಡಿದ್ದರು.
ಈ ಕೌಂಟರ್ ಜಗಳಕ್ಕೆ ಪಂತ್ಗೆ ಉರ್ವಶಿಯ ಕಾಟ ತಪ್ಪಲಿಲ್ಲ. ಪಂತ್ ಬರ್ತ್ ಡೇ ದಿನ ರೌಟೇಲಾ, ಇನ್ಸ್ಟಾಗ್ರಾಮ್ನಲ್ಲಿ ಫ್ಲೈಯಿಂಗ್ ಕಿಸ್ ವೀಡಿಯೋ ಪೋಸ್ಟ್ ಮಾಡಿದ್ರು. ಇದನ್ನ ಇನ್ಡೈರೆಕ್ಟ್ ಆಗಿ ಪಂತ್ಗೆ ಮಾಡಿದ ವಿಶ್ ಎಂದೇ ಎಲ್ಲರೂ ಅಂದುಕೊಂಡಿದ್ರು. ಬಳಿಕ ಅಪಘಾತವಾಗಿ ಪಂತ್, ಮುಂಬೈನ ಕೊಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಈ ವೇಳೆ ಇದೇ ಆಸ್ಪತ್ರೆಯ ಫೋಟೋ ಸ್ಟೇಟಸ್ ಹಾಕಿದ್ರು.
ಬೇತಾಳಳಂತೆ ಕಾಡ್ತಿದ್ದಾಳೆ ಊರ್ವಶಿ
2019ರಿಂದಲೂ ರಿಷಭ್ ಪಂತ್ ಹಾಗೂ ನಟಿ ಊರ್ವಶಿ ರೌಟೇಲಾ ಹೆಸರು ಸದ್ದು ಮಾಡ್ತಿದೆ. ಇವರಿಬ್ಬರು ಜೊತೆಯಾಗಿರುವ ಒಂದೇ ಒಂದು ಫೋಟೋ ಕೂಡ ಇಲ್ಲ. ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಮಾತ್ರ, ಪಂತ್ರನ್ನ ಪ್ರತಿ ವಿಚಾರದಲ್ಲೂ ಬೆಂಬಿಡದ ಬೇತಾಳಳಂತೆ ಕಾಡಿದ್ದಾಳೆ. ಪ್ರತಿ ಸಲ ಒಂದಿಲ್ಲೊಂದು ಪೋಸ್ಟ್ ಮಾಡಿದ್ದಾರೆ. ಇದು ಪ್ರಚಾರಕ್ಕಾಗಿ ಈಕೆ ಮಾಡ್ತಿರುವ ನಾಟಕ ಅನ್ನೋದು ಬಾಲಿವುಡ್ ಲೋಕದ ಮಾತಾಗಿದೆ. ಇದೀಗ ಪರ್ತ್ನಲ್ಲಿ ಪ್ರತ್ಯಕ್ಷವಾಗಿರೋ ಸುಂದರಿಯ ಮುಂದೆ ಏನ್ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಅಪ್ಪನ ಮಾತಿನಿಂದ ಮಗನ ಕ್ರಿಕೆಟ್ ಕರಿಯರ್ ಡ್ಯಾಮೇಜ್ ಆಗುತ್ತಾ..? ಸಂಜು ಸ್ಯಾಮ್ಸನ್ ಬೆನ್ನಿಗೆ ನಿಂತಿದ್ದ ಕನ್ನಡಿಗ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್