newsfirstkannada.com

ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಆಫರ್​ ಕೊಟ್ಟ ಪಂತ್​​; ಅಸಲಿಗೆ ಆಗಿದ್ದೇನು?

Share :

Published October 1, 2024 at 8:06pm

Update October 1, 2024 at 8:08pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹರಾಜು

    ಬಿಸಿಸಿಐನಿಂದ ಅಧಿಕೃತವಾಗಿ ಹೊಸ ರಿಟೆನ್ಷನ್​ ನಿಯಮ ಪ್ರಕಟ..!

    ಆರ್​ಟಿಎಂ ಕಾರ್ಡ್ ಬಳಕೆ ನಿಯಮ ಮತ್ತೆ ಜಾರಿ ಮಾಡಿದ ಬಿಸಿಸಿಐ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಈ ಮುನ್ನವೇ ಬಿಸಿಸಿಐ ರಿಟೆನ್ಷನ್​ ನಿಯಮಗಳನ್ನು ಪ್ರಕಟ ಮಾಡಿದೆ. ಕಳೆದ ಸೀಸನ್​​ಗಿಂತಲೂ ಭಿನ್ನವಾಗಿ ಈ ಬಾರಿ ಬಿಸಿಸಿಐ ಐಪಿಎಲ್​​ ನಿಯಮಗಳು ರೂಪಿಸಿದೆ. ಆರ್​ಟಿಎಂ ಕಾರ್ಡ್ (RTM) ಬಳಕೆ ನಿಯಮ ಮತ್ತೆ ಜಾರಿ ಮಾಡಲಾಗಿದೆ. 5 ವರ್ಷಗಳ ಕಾಲ ನಿವೃತ್ತಿ ಘೋಷಿಸಿದ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.

ಇನ್ನು, ಹೊಸ ರಿಟೈನ್ ನಿಯಮದ ಪ್ರಕಾರ ಪ್ರತಿ ಐಪಿಎಲ್​ ತಂಡಕ್ಕೆ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಿಟೈನ್​ ಮೂಲಕ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಆಟಗಾರರು ಮುಂದಿನ ವರ್ಷಗಳ ಕಾಲ ಆಡಲಿದ್ದಾರೆ. ಇದರ ಮಧ್ಯೆ ಆರ್​​ಸಿಬಿ ತಂಡದಿಂದ ಬಿಗ್​ ಅಪ್ಡೇಟ್​ ಹೊರಬಿದ್ದಿದೆ.

ಪಂತ್​​ ಆಫರ್​ ರಿಜೆಕ್ಟ್​ ಮಾಡಿದ ಆರ್​​​ಸಿಬಿ!

ಸದ್ಯ ಆರ್​​ಸಿಬಿ ತಂಡ ಹೊಸ ಕ್ಯಾಪ್ಟನ್​ಗಾಗಿ ಹುಡುಕಾಟ ನಡೆಸುತ್ತಿದೆ. ಈ ಸಂಬಂಧ ರಿಷಬ್​ ಪಂತ್ ತಮ್ಮ ಮ್ಯಾನೇಜರ್​ ಮೂಲಕ ಆರ್​ಸಿಬಿ ಫ್ರಾಂಚೈಸಿಯನ್ನು ಸಂಪರ್ಕಿಸಿ ತಂಡಕ್ಕೆ ಸೇರಲು ಬಯಸಿದ್ದರು. ಆದರೆ ಆರ್​ಸಿಬಿ ನಿರಾಕರಣೆ ಮಾಡಿದೆ. ಟೀಮ್ ಇಂಡಿಯಾ ಹಾಗೂ ಡೆಲ್ಲಿ ತಂಡದಲ್ಲಿ ನಡೆಯುತ್ತಿರುವ ತಂತ್ರಗಳಿಂದ ಆರ್​ಸಿಬಿಗೆ ಪಂತ್ ಬರುವುದು ವಿರಾಟ್​ಗೆ ಇಷ್ಟವಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ವದಂತಿಯನ್ನು ಪಂತ್​ ತಳ್ಳಿ ಹಾಕಿದ್ದಾರೆ.

ಸದ್ಯ ಇದಕ್ಕೆ ಗರಂ ಆಗಿ ಪ್ರತಿಕ್ರಿಯೆ ನೀಡಿರುವ ಡೆಲ್ಲಿ ಕ್ಯಾಪ್ಟನ್​ ಪಂತ್, ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಫೇಕ್ ನ್ಯೂಸ್ ಶೇರ್ ಮಾಡುತ್ತೀರಾ? ಸೆನ್ಸಬಲ್ ಯುವಕರು ತುಂಬಾ ಕೆಟ್ಟವರು. ಫೇಕ್ ನ್ಯೂಸ್​ನಿಂದ ಬೇರೆ ವಾತಾವರಣ ಸೃಷ್ಟಿ ಮಾಡಬೇಡಿ. ಇದೇ ಫಸ್ಟ್, ಇದೇ ಲಾಸ್ಟ್. ಈ ರೀತಿ ಮತ್ತೊಮ್ಮೆ ಫೇಕ್ ನ್ಯೂಸ್ ಹರಿಬಿಡಬಾರದು. ದಿನ ಇದೇ ಆದರೆ ಕೆಟ್ಟದ್ದು ಎನಿಸುತ್ತದೆ. ತಪ್ಪು ಮಾಹಿತಿಯಿಂದ ಬೇರೆ ರೀತಿಯ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಯಂಗ್ ಕ್ರಿಕೆಟರ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಗೆ ಬಿಗ್​ ಆಫರ್​ ಕೊಟ್ಟ ಪಂತ್​​; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/09/VIRAT_PANT_1.jpg

Load More