ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು
ಬಿಸಿಸಿಐನಿಂದ ಅಧಿಕೃತವಾಗಿ ಹೊಸ ರಿಟೆನ್ಷನ್ ನಿಯಮ ಪ್ರಕಟ..!
ಆರ್ಟಿಎಂ ಕಾರ್ಡ್ ಬಳಕೆ ನಿಯಮ ಮತ್ತೆ ಜಾರಿ ಮಾಡಿದ ಬಿಸಿಸಿಐ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಈ ಮುನ್ನವೇ ಬಿಸಿಸಿಐ ರಿಟೆನ್ಷನ್ ನಿಯಮಗಳನ್ನು ಪ್ರಕಟ ಮಾಡಿದೆ. ಕಳೆದ ಸೀಸನ್ಗಿಂತಲೂ ಭಿನ್ನವಾಗಿ ಈ ಬಾರಿ ಬಿಸಿಸಿಐ ಐಪಿಎಲ್ ನಿಯಮಗಳು ರೂಪಿಸಿದೆ. ಆರ್ಟಿಎಂ ಕಾರ್ಡ್ (RTM) ಬಳಕೆ ನಿಯಮ ಮತ್ತೆ ಜಾರಿ ಮಾಡಲಾಗಿದೆ. 5 ವರ್ಷಗಳ ಕಾಲ ನಿವೃತ್ತಿ ಘೋಷಿಸಿದ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.
ಇನ್ನು, ಹೊಸ ರಿಟೈನ್ ನಿಯಮದ ಪ್ರಕಾರ ಪ್ರತಿ ಐಪಿಎಲ್ ತಂಡಕ್ಕೆ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಿಟೈನ್ ಮೂಲಕ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಆಟಗಾರರು ಮುಂದಿನ ವರ್ಷಗಳ ಕಾಲ ಆಡಲಿದ್ದಾರೆ. ಇದರ ಮಧ್ಯೆ ಆರ್ಸಿಬಿ ತಂಡದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
ಪಂತ್ ಆಫರ್ ರಿಜೆಕ್ಟ್ ಮಾಡಿದ ಆರ್ಸಿಬಿ!
ಸದ್ಯ ಆರ್ಸಿಬಿ ತಂಡ ಹೊಸ ಕ್ಯಾಪ್ಟನ್ಗಾಗಿ ಹುಡುಕಾಟ ನಡೆಸುತ್ತಿದೆ. ಈ ಸಂಬಂಧ ರಿಷಬ್ ಪಂತ್ ತಮ್ಮ ಮ್ಯಾನೇಜರ್ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಸಂಪರ್ಕಿಸಿ ತಂಡಕ್ಕೆ ಸೇರಲು ಬಯಸಿದ್ದರು. ಆದರೆ ಆರ್ಸಿಬಿ ನಿರಾಕರಣೆ ಮಾಡಿದೆ. ಟೀಮ್ ಇಂಡಿಯಾ ಹಾಗೂ ಡೆಲ್ಲಿ ತಂಡದಲ್ಲಿ ನಡೆಯುತ್ತಿರುವ ತಂತ್ರಗಳಿಂದ ಆರ್ಸಿಬಿಗೆ ಪಂತ್ ಬರುವುದು ವಿರಾಟ್ಗೆ ಇಷ್ಟವಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ವದಂತಿಯನ್ನು ಪಂತ್ ತಳ್ಳಿ ಹಾಕಿದ್ದಾರೆ.
ಸದ್ಯ ಇದಕ್ಕೆ ಗರಂ ಆಗಿ ಪ್ರತಿಕ್ರಿಯೆ ನೀಡಿರುವ ಡೆಲ್ಲಿ ಕ್ಯಾಪ್ಟನ್ ಪಂತ್, ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಫೇಕ್ ನ್ಯೂಸ್ ಶೇರ್ ಮಾಡುತ್ತೀರಾ? ಸೆನ್ಸಬಲ್ ಯುವಕರು ತುಂಬಾ ಕೆಟ್ಟವರು. ಫೇಕ್ ನ್ಯೂಸ್ನಿಂದ ಬೇರೆ ವಾತಾವರಣ ಸೃಷ್ಟಿ ಮಾಡಬೇಡಿ. ಇದೇ ಫಸ್ಟ್, ಇದೇ ಲಾಸ್ಟ್. ಈ ರೀತಿ ಮತ್ತೊಮ್ಮೆ ಫೇಕ್ ನ್ಯೂಸ್ ಹರಿಬಿಡಬಾರದು. ದಿನ ಇದೇ ಆದರೆ ಕೆಟ್ಟದ್ದು ಎನಿಸುತ್ತದೆ. ತಪ್ಪು ಮಾಹಿತಿಯಿಂದ ಬೇರೆ ರೀತಿಯ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಯಂಗ್ ಕ್ರಿಕೆಟರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ